ಮಡಿಕೇರಿ, ಜು. ೧೫: ಸಮಾಜಮುಖಿ ಕಾರ್ಯಗಳನ್ನು ಮಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ರೋಟರಿ ಮಾಜಿ ಗವರ್ನರ್ ಹೆಚ್.ಆರ್. ಕೇಶವ ಹೇಳಿದರು.

ಮಡಿಕೇರಿ ರೋಟರಿ ವುಡ್ಸ್ ಪದಗ್ರಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರೋಟರಿ ಸಂಸ್ಥೆ ಸಮಾಜ ಸೇವೆಗಾಗಿಯೇ ಸ್ಥಾಪನೆಗೊಂಡಿದ್ದು, ಇದರ ಧ್ಯೇಯೋದ್ದೇಶಗಳಡಿ ಸದಸ್ಯರು ಕಾರ್ಯನಿರ್ವಹಿಸಬೇಕು. ಸಮಾಜಮುಖಿ ಕಾರ್ಯಕ್ಕೆ ಪ್ರಮಾಣದ ಮಿತಿ ಇಲ್ಲ. ಕೈಲಾದಷ್ಟು ಮಾಡುವ ಪರೋಪಕಾರ ಸಮಾಜದಲ್ಲಿ ಬದಲಾವಣೆಯನ್ನು ತರುತ್ತದೆ ಎಂದ ಅವರು, ನೂತನ ಪದಾಧಿಕಾರಿಗಳು ಸಮಾಜಮುಖಿಯಾಗಿ ತೊಡಗಿಸಿಕೊಂಡು ಸಂಸ್ಥೆಯ ಹೆಗ್ಗಳಿಕೆಯನ್ನು ಹೆಚ್ಚಿಸಬೇಕೆಂದು ಕರೆ ನೀಡಿದರು.

ರೋಟರಿ ವುಡ್ಸ್ನ ಅಧ್ಯಕ್ಷರಾಗಿ ಕಿರಣ್ ಕುಂದರ್ ಅಧಿಕಾರ ಸ್ವೀಕರಿಸಿ ಮಾತನಾಡಿ, ಸಂಸ್ಥೆಯ ಆಶಯಗಳಿಗೆ ಧಕ್ಕೆ ಬರದಂತೆ ಕಾರ್ಯನಿರ್ವ ಹಿಸಲಾಗುವುದು. ಸಮಾಜಮುಖಿ ಕಾರ್ಯಕ್ಕೆ ಆದ್ಯತೆ ನೀಡಲಾಗುವುದು. ಹೊಸ ಯೋಜನೆ ರೂಪಿಸಲು ಪ್ರಯತ್ನಿಸಲಾಗುವುದು ಎಂದರು.

ನಿರ್ಗಮಿತ ಅಧ್ಯಕ್ಷ ಹರೀಶ್ ಕಿಗ್ಗಾಲ್, ರೋಟರಿ ವಲಯ ೬ರ ಉಪ ರಾಜ್ಯಪಾಲ ದಿಲನ್ ಚಂಗಪ್ಪ, ಮಾತನಾಡಿದರು.

ಕ್ಲಬ್‌ನ ಆಂತರಿಕ ಪ್ರಸರಣಕ್ಕಾಗಿರುವ ಕ್ಲಬ್ ವಾರ್ತಾ ಪತ್ರಿಕೆಯನ್ನು ವಲಯ ಸೇನಾನಿ ಕೆ.ಸಿ.ಕಾರ್ಯಪ್ಪ ಬಿಡುಗಡೆ ಮಾಡಿದರು. ಕಾರ್ಯದರ್ಶಿಯಾಗಿ ಪ್ರಮಿಳಾ ಶೆಟ್ಟಿ, ಖಜಾಂಚಿಯಾಗಿ ಪ್ರದೀಪ್ ಕಿಗ್ಗಾಲ್, ಭಗತ್ ರಾಜ್, ಉಪಾಧ್ಯಕ್ಷರಾಗಿ ಎಸ್.ಡಿ. ಪ್ರಶಾಂತ್ ಅಧಿಕಾರ ವಹಿಸಿಕೊಂಡರು. ಸಮಾರಂಭದಲ್ಲಿ ಸಂಸ್ಥೆಗೆ ನಾಲ್ಕು ಸದಸ್ಯರು ನೂತನವಾಗಿ ಸೇರ್ಪಡೆಯಾದರು.

ಇದೇ ಸಂದರ್ಭ ಮಡಿಕೇರಿಯ ಚೆಸ್ಕಾಂನ ನಾಲ್ಕು ಸಿಬ್ಬಂದಿ, ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪರೀಕ್ಷೆಗಳಲ್ಲಿ ಉನ್ನತ ಅಂಕಗಳೊAದಿಗೆ ತೇರ್ಗಡೆಯಾದ ಕ್ಲಬ್ ಸದಸ್ಯರ ಮಕ್ಕಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಅನಿಲ್ ಹೆಚ್.ಟಿ, ದೇವಣಿರ ತಿಲಕ್, ಬಿ.ಜಿ. ಅನಂತಶಯನ, ಡಾ.ಪ್ರಶಾಂತ್, ಡಾ.ಮನೋಹರ ಪಾಟ್ಕರ್, ವುಡ್ಸ್ನ ಮಾಜಿ ಅಧ್ಯಕ್ಷ ಸಂಪತ್ ಕುಮಾರ್, ವಸಂತ್ ಕುಮಾರ್ ಸೇರಿದಂತೆ ಇನ್ನಿತರರು ಹಾಜರಿದ್ದರು.