ಗೋಣಿಕೊಪ್ಪಲು, ಜು. ೧೭: ನಾಗರಹೊಳೆ ರಾಷ್ಟಿçÃಯ ಉದ್ಯಾನದ ಸರಹದ್ದಿನ ಸುಮಾರು ೧೫ ಎಕರೆ ವಿಸ್ತೀರ್ಣದ ವಡ್ಡರಮಾಡು ಕಟ್ಟೆ ನಿರ್ಮಾಣವಾಗಿ ೭೫ ವರ್ಷವೇ ಕಳೆದುಹೋಗಿದೆ.

ಜನ, ಜಾನುವಾರು, ಕಾಡು ಪ್ರಾಣಿಗಳಿಗೆ ಬೇಸಿಗೆಯಲ್ಲಿ ನೀರುಣಿಸಿ ದಾಹ ಇಂಗಿಸುತ್ತಿದ್ದ ಬೃಹತ್ ಕೆರೆಯ ನೀರು ಸೋರಿಕೆಯಾಗುತ್ತಿದ್ದು, ಗೇಟ್ ದುಸ್ಥಿತಿಗೆ ಒಳಗಾಗಿದೆ.

ನಿಟ್ಟೂರು ವ್ಯಾಪ್ತಿಯ ರೈತಾಪಿ ವರ್ಗದ ಸುಮಾರು ೨೦೦ ಎಕರೆಗೂ ಅಧಿಕ ಗದ್ದೆ, ತೋಟಗಳಿಗೆ ವಡ್ಡರಮಾಡು ಕಟ್ಟೆಯ ನೀರು ಬೇಸಿಗೆಯಲ್ಲಿ ಜೀವ ಜಲವಾಗಿದೆ. ಇಲ್ಲಿ ಸುಮಾರು ೨೫ ಅಡಿ ನೀರು ನಿಲ್ಲುತ್ತಿದ್ದು ಇದೀಗ ಮೂರು ವರ್ಷದಿಂದ ಮಳೆಗಾಲದಲ್ಲಿ ತುಂಬಿ ತುಳುಕುತ್ತಿದ್ದ ಕೆರೆಯ ನೀರು ಸೋರಿಕೆಯಾಗಿ ಕೇವಲ ೭ ಅಡಿಗೆ ಕುಸಿದಿದೆ. ಸಣ್ಣ ಝರಿಯಾಗಿ ಕಾಲುವೆ ಮೂಲಕ ಹರಿಯುವ ಕಟ್ಟೆಯ ನೀರು ಮುಂದೆ ಬಾಳೆಲೆ ಸಮೀಪ ಲಕ್ಷö್ಮಣ ತೀರ್ಥ ನದಿಯನ್ನು ಸೇರುತ್ತದೆ. ಇಲ್ಲಿ ಸುಮಾರು ೨೦ ಅಡಿಗೂ ಅಧಿಕ ನೀರು ಸಂಗ್ರಹವಾಗುವದರಿAದ ಸುತ್ತಮುತ್ತಲ ಗ್ರಾಮಗಳ ಬಾವಿ, ಕೆರೆಗಳಲ್ಲಿ ಬೇಸಿಗೆಯಲ್ಲಿಯೂ ನೀರು ಯಥೇಚ್ಛವಾಗಿ ಸಂಗ್ರಹವಾಗುತ್ತದೆ. ಇದರಿಂದಾಗಿ ಬೇಸಿಗೆಯಲ್ಲಿ ಕಾಫಿ, ಕಾಳುಮೆಣಸು, ಅಡಿಕೆ ಕೃಷಿಗೆ ರೈತಾಪಿ ವರ್ಗಗಳಿಗೆ ವಡ್ಡರಮಾಡು ಕಟ್ಟೆ ಆಪತ್ಭಾಂಧವ ಎಂದೇ ಹೇಳಲಾಗುತ್ತದೆ. ನಾಗರಹೊಳೆ ರಾಷ್ಟಿçÃಯ ಉದ್ಯಾನ ಬದಿಯಲ್ಲಿಯೇ ಇರುವುದರಿಂದ ವನ್ಯ ಪ್ರಾಣಿಗಳಿಗೂ ಬೇಸಿಗೆಯಲ್ಲಿ ದಾಹ ಇಂಗುವ ಕೆಲಸವನ್ನು ಕೆರೆ ಮಾಡುತ್ತಿದೆ.

ಮಳೆಗಾಲದಲ್ಲಿ ಬೆಳ್ಳಕ್ಕಿಗಳು, ಕೊಕ್ಕರೆ ಜಾತಿಯ ಹಲವು ಪ್ರಭೇದದ ಪಕ್ಷಿ ಸಂಕುಲವನ್ನು ವಡ್ಡರಮಾಡು ಕಟ್ಟೆ ಆಕರ್ಷಿಸುತ್ತಿದೆ.

ಸುಮಾರು ೧೯೫೦ ರ ದಶಕದಲ್ಲಿ ನಿರ್ಮಾಣವಾದ ವಡ್ಡರಮಾಡು ಕಟ್ಟೆ ಈ ಭಾಗದ ಜನತೆ, ಆದಿವಾಸಿಗಳೊಂದಿಗೆ ಭಾವನಾತ್ಮಕ ಸಂಬAಧ ಹೊಂದಿದೆ.

(ಮೊದಲ ಪುಟದಿಂದ) ಕಳೆದ ಮೂರು ವರ್ಷಗಳಿಂದ ಗೇಟ್ ದುಸ್ಥಿತಿಗೆ ಒಳಗಾಗಿದ್ದು, ಕಳೆದ ಬೇಸಿಗೆಯಲ್ಲಿ ಈ ಭಾಗದ ಜನ ಜಾನುವಾರುಗಳು ನೀರಿನ ಕ್ಷಾಮ ಅನುಭವಿಸುವಂತಾಗಿತ್ತು.

ನಾಗರಹೊಳೆ ಕಟ್ಟೆಹಾಡಿಯ ಸುಮಾರು ೧೦ ಕುಟುಂಬ, ನಿಟ್ಟೂರು, ಬಾಳೆಲೆಗೆ, ಶಾಲಾ ಕಾಲೇಜು ಸಂಪರ್ಕ ಹೊಂದಲು ವಡ್ಡರಮಾಡು ಕಟ್ಟೆ ಮೇಲ್ಭಾಗದ ಕಾಲು ಹಾದಿಯನ್ನೇ ಬಳಸುತ್ತಿದ್ದರು. ಇದೀಗ ಅಲ್ಲೆಲ್ಲಾ ಕಾಡು ಬೆಳೆದು ಮಳೆಗಾಲದಲ್ಲಿ ಓಡಾಟಕ್ಕೆ ಅಡ್ಡಿಯಾಗಿದೆ. ಕೆಳ ಭಾಗದಲ್ಲಿ ರಸ್ತೆ ಇದ್ದು ಇದೀಗ ವಾಹನ ಓಡಾಟಕ್ಕೆ ಯಾವದೇ ಅಡ್ಡಿ ಇಲ್ಲದಿದ್ದರೂ ವಿಶಾಲ ಕೆರೆಯ ವೀಕ್ಷಣೆಗೆ ಎತ್ತರದ ಕಟ್ಟೆಯ ಮೇಲಿನ ಕಾಲು ದಾರಿಯ ಕಾಡು ಕಡಿಯುವ ಕೆಲಸ ಆಗಬೇಕಿದೆ. ಸ್ಥಳೀಯ ಒಂದಿಬ್ಬರು ಕೃಷಿಕರು ಕಳೆಕೊಚ್ಚುವ ಯಂತ್ರದ ಸಹಾಯದಿಂದ ಒಂದಷ್ಟು ಜಾಗ ಶುಚಿಗೊಳಿಸಿದ್ದರೂ, ಬಹಳಷ್ಟು ಕೆಲಸ ಆಗಬೇಕಾಗಿದೆ. ಈ ಹಿಂದೆ ನಾಗರಹೊಳೆ ವನ್ಯಜೀವಿ ವಿಭಾಗದ ಅಧಿಕಾರಿಗಳು ಕಟ್ಟೆಯ ಅಗತ್ಯ ಮನಗಂಡು ಸಂಬAಧಿಸಿದ ಇಲಾಖೆಯೊಂದಿಗೆ ವ್ಯವಹರಿಸಿ ವಡ್ಡರಮಾಡು ಕಟ್ಟೆಯ ಆವರಣ ಶುಚಿಯಾಗಿಡಲು ಶ್ರಮಿಸುತ್ತಿದ್ದರು. ಇದೀಗ ಅರಣ್ಯ ಇಲಾಖೆಯೂ ನಿರ್ಲಕ್ಷö್ಯವಹಿಸಿದೆ.

ಸುಮಾರು ೭೫ ವರ್ಷದ ಹಳೆಯ ಗೇಟಿನ ಬದಲಿಗೆ ಹೊಸಾ ಗೇಟ್ ಅಳವಡಿಸಿದ್ದಲ್ಲಿ ಬೇಸಿಗೆಯಲ್ಲಿ ಕೃಷಿಕರಿಗೆ ನೀರು ಬಳಸಲು ಅನುಕೂಲವಾಗುತ್ತದೆ ಎನ್ನಲಾಗಿದೆ. ಕಟ್ಟೆಯ ಕೆಲವು ಭಾಗ ಶಿಥಿಲಗೊಂಡಿದ್ದು ಸಂಬAಧಿಸಿದ ಅಧಿಕಾರಿಗಳು ಬೇಸಿಗೆಯಲ್ಲಿ ನೀರು ಸೋರಿಕೆ ಆಗುವ ಭಾಗವನ್ನು ಗುರುತಿಸಿ ದುರಸ್ತಿಪಡಿಸಬೇಕಾಗಿದೆ.

ಸ್ಥಳೀಯ ಸಮಾಜ ಸೇವಕರಾದ ಚೋಂದಮ್ಮ ಅವರು ಈಗಾಗಲೇ ವೀರಾಜಪೇಟೆ ಶಾಸಕ ಪೊನ್ನಣ್ಣ ಅವರಿಗೆ ಮಾಹಿತಿ ನೀಡಿರುವುದಾಗಿ ತಿಳಿಸಿದ್ದಾರೆ.

ಮಡಿಕೇರಿ ಸಣ್ಣ ನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ಕುಮಾರ ಸ್ವಾಮಿ ಅವರಲ್ಲಿ ಮಾಹಿತಿ ಬಯಸಿದಾಗ ಇದೀಗ ತಾನೇ ತನ್ನ ಗಮನಕ್ಕೆ ಬಂದಿದೆ. ಶೀಘ್ರ ವಡ್ಡರಮಾಡು ಕಟ್ಟೆ ಗೇಟ್ ದುರಸ್ತಿ ಕಾರ್ಯ ಕೈಗೊಂಡು ಎಂದಿನAತೆ ನೀರು ಸಂಗ್ರಹಕ್ಕೆ ಅನುವು ಮಾಡಿಕೊಡುವದಾಗಿಯೂ, ಶೀಘ್ರ ನಿಟ್ಟೂರಿನ ವಡ್ಡರಮಾಡು ಕಟ್ಟೆಗೆ ಭೇಟಿ ನೀಡಿ ಪರಿಶೀಲಿಸುವ ಭರವಸೆ ನೀಡಿದ್ದಾರೆ.

ಕಟ್ಟೆಮಾಡು ವ್ಯಾಪ್ತಿಯಲ್ಲಿ ಕಳೆದ ಒಂದು ವರ್ಷದಿಂದ ಮೂರು ಸೋಲಾರ್ ಬೀದಿ ದೀಪ ಹಾಗೂ ವಡ್ಡರಮಾಡು ಕಟ್ಟೆಯ ಬೀದಿ ದೀಪ ದುರಸ್ತಿಯಾಗಬೇಕಿದ್ದು, ನಿಟ್ಟೂರು ಗ್ರಾ.ಪಂ. ಈ ಭಾಗದ ಜನಪರ ಕಾಳಜಿಯನ್ನು ಮರೆತಿರುವದಾಗಿ ಗ್ರಾಮಸ್ಥರು ಆರೋಪಿಸಿದ್ದಾರೆ.

ವಡ್ಡರಮಾಡು ಕೆರೆಯ ಹೂಳೆತ್ತುವ ಕೆಲಸ ಕಳೆದ ೧೫ ವರ್ಷಗಳಿಂದ ನಡೆದಿಲ್ಲ. ಅರಣ್ಯ ಇಲಾಖೆ ಹಾಗೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಈ ಬಗ್ಗೆಯೂ ಯೋಜನೆ ರೂಪಿಸಬೇಕೆಂದು ತೀತಿರ ಚೋಂದಮ್ಮ ಜಯ ಒತ್ತಾಯಿಸಿದ್ದಾರೆ.

ವಿಶೇಷ ವರದಿ: ಟಿ.ಎಲ್. ಶ್ರೀನಿವಾಸ್