ಮುಳ್ಳೂರು, ಜು. ೧೯: ಸಮೀಪದ ಆಲೂರು-ಸಿದ್ದಾಪುರ ಗೂಡ್ಸ್ ಆಟೋ ಚಾಲಕರ ಸಂಘದ ವತಿಯಿಂದ ಸ್ವಚ್ಛತಾ ಶ್ರಮದಾನ ಕಾರ್ಯವನ್ನು ಹಮ್ಮಿಕೊಳ್ಳಲಾಯಿತು. ಆಟೋ ಚಾಲಕರು ಆಲೂರು-ಸಿದ್ದಾಪುರ ಆಟೋ ನಿಲ್ದಾಣ ಬಳಿಯಲ್ಲಿದ್ದ ತ್ಯಾಜ್ಯ ಸೇರಿದಂತೆ ಮುಖ್ಯರಸ್ತೆ ಬದಿಯಲ್ಲಿನ ಚರಂಡಿಯನ್ನು ಸ್ವಚ್ಛಗೊಳಿಸಿ ಜೊತೆಯಲ್ಲಿ ರಸ್ತೆ ಬದಿಯಲ್ಲಿ ಬೆಳೆದ ಗಿಡಗಳನ್ನು ಕಡಿದರು.
ಸ್ವಚ್ಛತಾ ±್ರÀಮದಾನ ಕಾರ್ಯದಲ್ಲಿ ಆಟೋ ಚಾಲಕರ ಸಂಘದ ಅಧ್ಯಕ್ಷ ಕೆ.ಬಿ. ಅವಿನಾಶ್, ಉಪಾಧ್ಯಕ್ಷ ಉನ್ನಿಕೃಷ್ಣ, ಸದಸ್ಯರಾದ ಭೋಜೇಗೌಡ, ಮನು, ಸಂತೋಷ್, ಎ.ಆರ್.
ಹರೀಶ್, ಶೇಖರ್ ಮುಂತಾದವರು ಪಾಲ್ಗೊಂಡಿದ್ದರು.