ಶ್ರೀಮಂಗಲ, ಜು. ೧೯: ಪೊನ್ನಂಪೇಟೆ ತಾಲೂಕಿನ ಹೈಸೊಡ್ಲೂರು ಗ್ರಾಮದಲ್ಲಿ ಹುಲಿ ದಾಳಿಗೆ ಹಸು ಬಲಿಯಾಗಿದೆ. ಗ್ರಾಮದ ಬೆಳೆಗಾರ ಕಳ್ಳೇಂಗಡ ಜಿ. ಗಗನ್ ಅವರಿಗೆ ಸೇರಿದ ಹಸುವನ್ನು ಶನಿವಾರ ಗದ್ದೆಯ ಬಯಲಿನಲ್ಲಿ ಮೇಯಲು ಕಟ್ಟಿದ್ದ ಸಂದರ್ಭ ಹುಲಿ ದಾಳಿ ನಡೆಸಿದ್ದು, ಕೆಲವು ಭಾಗವನ್ನು ತಿಂದಿದೆ. ಕಟ್ಟಿದ್ದ ಹಸುವನ್ನು ಕೊಟ್ಟಿಗೆಗೆ ಕರೆತರಲು ತೆರಳಿದ ಸಂದರ್ಭ ಹಸು ಕಾಣೆಯಾಗಿದ್ದು, ತುಸು ದೂರದಲ್ಲಿ ಹಸು ಸತ್ತಿರುವುದು ಗೋಚರಿಸಿದೆ. ಹುಲಿ ದಾಳಿಯಿಂದ ಗ್ರಾಮಸ್ಥರಲ್ಲಿ ಆತಂಕಮೂಡಿದೆ. ತೋಟಗಳಿಗೆ ತೆರಳಲು ಕಾರ್ಮಿಕರು, ಬೆಳೆಗಾರರು ಭಯಪಡುವಂತಾಗಿದೆ. ಶನಿವಾರ ಸಂಜೆ ಹುಲಿ ಸೆರೆ ಕಾರ್ಯಾಚರಣೆ ಅರಣ್ಯ ಇಲಾಖೆಯಿಂದ ಸಾಕಾನೆ ಸಹಿತ ಸಿಬ್ಬಂದಿಗಳ ತಂಡ ಕಾರ್ಯಾಚರಣೆಗೆ ಸ್ಥಳಕ್ಕೆ ಆಗಮಿಸಿದೆ.