ಗೋಣಿಕೊಪ್ಪಲು. ಜು. ೨೦: ವೀರಾಜಪೇಟೆ ಡಿಎಫ್ಓ ಜಗನ್ನಾಥ್ ಮುಂದಾಳತ್ವದಲ್ಲಿ ಹುಲಿ ಪತ್ತೆಗೆ ೬ನೇ ದಿನದ ಕೂಂಬಿAಗ್ ನಡೆಯಿತು.
ಪೊನ್ನಂಪೇಟೆ ತಾಲೂಕಿನ ಹುದಿ ಕೇರಿ ಹೋಬಳಿಯ ಹುದಿಕೇರಿ, ಬೆಳ್ಳೂರು, ತಾವಳಗೇರಿ, ಕೊಣಗೇರಿ, ಟಿ. ಶೆಟ್ಟಿಗೇರಿ, ಹೈಸೊಡ್ಲೂರು, ಟಿ. ಎಸ್ಟೇಟ್ ಭಾಗಗಳಲ್ಲಿ ಶ್ರೀಮಂಗಲ ವನ್ಯಜೀವಿ ವಲಯದ ಆರ್.ಆರ್.ಟಿ. ಸಿಬ್ಬಂದಿ ಮತ್ತು ಪೊನ್ನಂಪೇಟೆ ಅರಣ್ಯ ವಲಯದ ಉಪವಲಯ ಅರಣ್ಯಾಧಿಕಾರಿಗಳು, ಗಸ್ತು ಅರಣ್ಯಪಾಲಕರು, ಆರ್.ಆರ್.ಟಿ. ಸಿಬ್ಬಂದಿ ಹುಲಿ ಪತ್ತೆಗಾಗಿ ಕಾರ್ಯಾಚರಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಡಿಎಫ್ಓ ಜಗನ್ನಾಥ್ ಮಾರ್ಗದರ್ಶನ ಹಾಗೂ ಎಸಿಎಫ್ ಗೋಪಾಲ್ ನಿರ್ದೇಶನದ ಮೇರೆ ಪೊನ್ನಂಪೇಟೆ ವಲಯ ಅರಣ್ಯ ಅಧಿಕಾರಿ ಶಂಕರ್ ಕಾರ್ಯಾಚರಣೆಯನ್ನು ಮುಂದುವರಿಸಿದರು.
ಕಾರ್ಯಾಚರಣೆಯ ಸಿಬ್ಬಂದಿ ಮುಂಜಾನೆಯಿAದಲೇ ದೇವರಕಾಡು ಅರಣ್ಯ ಪ್ರದೇಶ ಹಾಗೂ ಕಾಫಿ ತೋಟದ ಬೆಳೆಗಾರರ, ರೈತರ ತೋಟದಲ್ಲಿ ಸಂಚರಿಸಿ ಹುಲಿ ಪತ್ತೆಗಾಗಿ ಪ್ರಯತ್ನ ನಡೆಸಿದರು.
ಹುಲಿಯ ಚಲನವಲನಗಳ ಬಗ್ಗೆ ಮಾಹಿತಿ ತಿಳಿಯಲು ವಿವಿಧ ಭಾಗದಲ್ಲಿ ಕ್ಯಾಮರ ಅಳವಡಿಸಿದ್ದರೂ ಹುಲಿಯ ಚಿತ್ರ ಮಾತ್ರ ಕ್ಯಾಮರಾಗಳಲ್ಲಿ ಸೆರೆ ಆಗುತ್ತಿಲ್ಲ. ಜಾನುವಾರುಗಳ ಮೇಲೆ ದಾಳಿ ನಡೆಸಿರುವ ಸ್ಥಳದಲ್ಲಿ ಸಿಬ್ಬಂದಿಗಳು ಹುಡುಕಾಟ ನಡೆಸಿದರೂ ಕೂಡ ಹುಲಿ ಮಾತ್ರ ಅತ್ತ ಸುಳಿಯುತ್ತಿಲ್ಲ.
- ಹೆಚ್.ಕೆ. ಜಗದೀಶ್