ಮಡಿಕೇರಿ, ಆ. ೧ : ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರವು ಪ್ರಸಕ್ತ ಸಾಲಿ£ಂದ ಕಿಶೋರ ಕನಕ ಕಾವ್ಯ ಸ್ಪರ್ಧೆಯನ್ನು ಏರ್ಪಡಿಸುತ್ತಿದೆ. ಕನಕದಾಸರ ಕಾವ್ಯಗಳನ್ನು ಮಾತ್ರ ಗಮಕ ವಾಚನಕ್ಕೆ ಪರಿಗಣಿಸಲಾಗುವುದು. ೧೦ ರಿಂದ ೧೫ ವರ್ಷ ವಯೋಮಾನದ ಕಿರೋರ ಪ್ರತಿಭೆಗಳಿಗೆ ಮಾತ್ರ ಸ್ಪರ್ಧೆಯಲ್ಲಿ ಅವಕಾಶ, ಸ್ಪರ್ಧೆಯಲ್ಲಿ ವಿಜೇತರಾದ ಸ್ಪರ್ಧಿಗಳಿಗೆ ಪ್ರಥಮ ಬಹುಮಾನ ರೂ.೨೦ ಸಾವಿರ, ದ್ವಿತೀಯ ಬಹುಮಾನ ರೂ. ೧೫ ಸಾವಿರ, ತೃತೀಯ ಬಹುಮಾನ ರೂ.೧೦ ಸಾವಿರ ಮತ್ತು ಇಬ್ಬರಿಗೆ ಸಮಾಧಾನಕರ ಬಹುಮಾನ (ತಲಾ ರೂ.೫,೦೦೦ ದಂತೆ)ಇರುತ್ತವೆ. ಪ್ರತ್ಯೇಕ ಸಮಾರಂಭ ವೊಂದರಲ್ಲಿ ಬಹುಮಾನ ವಿತರಿಸಲಾಗುವುದು.

ಕಿಶೋರ ಪ್ರತಿಭೆ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವ ಅಭ್ಯರ್ಥಿಗಳು ಅಧ್ಯಯನ ಕೇಂದ್ರದ ಜಾಲತಾಣ hಣಣಠಿs://ಞಚಿಟಿಚಿಞಚಿಜ ಚಿsಚಿಡಿeseಚಿಡಿಛಿheeಟಿಣeಡಿ.ಞಚಿಡಿಟಿಚಿಣಚಿಞಚಿ.gov.iಟಿ/ ರಲ್ಲಿ ಅರ್ಜಿಗಳನ್ನು ಡೌನಲೋಡ್ ಮಾಡಿಕೊಂಡು ಪೂರ್ಣ ಮಾಹಿತಿಯೊನ್ನೊಳಗೊಂಡ ಅರ್ಜಿಗಳನ್ನು ಭರ್ತಿಮಾಡಿ ತಮ್ಮ ಇತ್ತೀಚಿನ ಭಾವಚಿತ್ರದೊಂದಿಗೆ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ, ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಂಗಳೂರು-೫೬೦೦೫೬ ಗೆ ಅಥವಾ ಇ-ಮೇಲ್ ಞಚಿಟಿಚಿಞಚಿಡಿeseಚಿಡಿಛಿh ಛಿeಟಿಣಡಿe@gmಚಿiಟ.ಛಿom ಮೂಲಕ ೨೦೨೫ರ ಸೆಪ್ಟೆಂಬರ್, ೨೦ರೊಳಗೆ ತಲುಪುವಂತೆ ಕಳುಹಿಸಿಕೊಡಬೇಕು. ಹೆಚ್ಚಿನ ಮಾಹಿತಿಗೆ ೬೩೬೪೫೨೯೩೧೯ಗೆ ಸಂಪರ್ಕಿಸಬಹುದು ಎಂದು ಬೆಂಗಳೂರು ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಸದಸ್ಯ ಕಾರ್ಯದರ್ಶಿ ಅವರು ತಿಳಿಸಿದ್ದಾರೆ.