ವೀರಾಜಪೇಟೆ, ಆ. ೨: ವೀರಾಜಪೇಟೆ ತಾಲೂಕು ಆಡಳಿತ ಭವನದ ನ್ಯೂನ್ಯತೆ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಕೊಡಗು ಜಿಲ್ಲಾಧಿಕಾರಿಗಳಿಗೆ ರಾಜ್ಯ ಮಾನವ ಹಕ್ಕು ಆಯೋಗ ಆದೇಶ ನೀಡಿದೆ. ವೀರಾಜಪೇಟೆಯ ತಾಲೂಕು ಆಡಳಿತ ಭವನದ ಒಂದನೇ ಹಾಗೂ ಎರಡನೇ ಮಹಡಿಯಲ್ಲಿರುವ ಉಪ ನೋಂದಾವಣೆ ಕಚೇರಿ, ಭೂಮಾಪನ ಇಲಾಖೆಯ
ತನಿಖೆ ನಡೆಸಿ ವರದಿ ನೀಡಲು ಆದೇಶ
(ಮೊದಲ ಪುಟದಿಂದ) ಕಚೇರಿಗೆ ತೆರಳಲು ವೃದ್ಧರಿಗೆ, ವಿಶೇಷಚೇತನರಿಗೆ ಲಿಫ್ಟ್ ವ್ಯವಸ್ಥೆ ಅಥವಾ ವೀಲ್‌ಚೇರ್ ಕಲ್ಪಿಸದಿರುವ ಬಗ್ಗೆ ಇತ್ತೀಚೆಗೆ ನಾಗರಿಕರೊಬ್ಬರು ಮಾನವ ಹಕ್ಕು ಆಯೋಗಕ್ಕೆ ದೂರು ನೀಡಿದ ಹಿನ್ನಲೆ ಮಾನವ ಹಕ್ಕು ಆಯೋಗ ದೂರನ್ನು ಸ್ವೀಕರಿಸಿ, ರಾಜ್ಯ ಮಾನವ ಹಕ್ಕು ಆಯೋಗದ ಹಂಗಾಮಿ ಅಧ್ಯಕ್ಷ ಶ್ಯಾಮ್ ಭಟ್ ಅವರು ಪ್ರಕರಣವನ್ನು ದಾಖಲಿಸಿಕೊಂಡು ಜಿಲ್ಲಾಧಿಕಾರಿಗಳಿಗೆ ಸೂಕ್ತ ತನಿಖೆ ನಡೆಸಿ ಸಪ್ಟೆಂಬರ್ ೨೬ರೊಳಗೆ ವರದಿ ಸಲ್ಲಿಸುವಂತೆ ಆದೇಶಿಸಿದ್ದಾರೆ.