ಸೋಮವಾರಪೇಟೆ, ಆ. ೨: ರಾಜಕಾರಣದಲ್ಲಿ ಮೇರು ವ್ಯಕ್ತಿತ್ವ ಹೊಂದಿದ್ದ ಬಿ.ಬಿ. ಶಿವಪ್ಪ ಅವರ ರಾಜಕೀಯ ಜೀವನ ಎಲ್ಲಾ ರಾಜಕಾರಣಿಗಳಿಗೂ ಮಾದರಿ ಹಾಗೂ ಅನುಕರಣೀಯ ಎಂದು ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು.

ತಾಲೂಕಿನ ಗಡಿಗ್ರಾಮ ದುಂಡಳ್ಳಿಗೆ ಹೊಂದಿಕೊAಡಿರುವ ಯಸಳೂರು ಗ್ರಾಮದಲ್ಲಿ ಬಿ.ಬಿ. ಶಿವಪ್ಪ ಅಭಿಮಾನಿಗಳ ಬಳಗದ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳು, ಸಾರ್ವಜನಿಕ ಸಂಘಟನೆಗಳ ಆಶ್ರಯದಲ್ಲಿ, ಶ್ರೀ ನಂದೀಶ್ವರ ವೀರಶೈವ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಬಿ.ಬಿ. ಶಿವಪ್ಪ ಅವರ ೮ನೇ ವರ್ಷದ ಸಂಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕಷ್ಟಕಾಲದಲ್ಲಿ ಭಾರತೀಯ ಜನತಾ ಪಾರ್ಟಿಯನ್ನು ಕಟ್ಟಿ ಬೆಳೆಸಿದ ಬಿ.ಬಿ. ಶಿವಪ್ಪ ಅವರು ಕೊಡಗು ಜಿಲ್ಲೆಯ ಬಿಜೆಪಿ ಸಂಘಟನೆಗೆ ಹೆಚ್ಚಿನ ಶ್ರಮ ಹಾಕಿದವರು. ರಾಷ್ಟç ಚಿಂತನೆಯೊAದಿಗೆ ರಾಜಕಾರಣ ಮಾಡಿದ ಮೇಧಾವಿ ಹಾಗೂ ನಿಷ್ಕಳಂಕ ನಾಯಕರಾಗಿದ್ದರು ಎಂದು ಸ್ಮರಿಸಿದರು.

ಮಾಜಿ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಪಕ್ಷ ಸಂಘಟನೆಯಲ್ಲಿ ಶಿವಪ್ಪ ಅವರ ಒಡನಾಟ, ಶಿಸ್ತುಬದ್ಧ ಜೀವನವನ್ನು ಮೆಲುಕು ಹಾಕಿದರು. ಶಿವಪ್ಪ ಅಭಿಮಾನಿಗಳ ಬಳಗದ ಪ್ರಮುಖರು ಹಾಗೂ ಸಕಲೇಶಪುರ ಕ್ಷೇತ್ರದ ಶಾಸಕರೂ ಆದ ಸಿಮೆಂಟ್ ಮಂಜು ಮಾತನಾಡಿ, ಭಾರತೀಯ ಜನತಾ ಪಾರ್ಟಿಯನ್ನು ರಾಜ್ಯಮಟ್ಟದಲ್ಲಿ ಕಟ್ಟಿ ಬೆಳೆಸಿದ ಧೀಮಂತ ವ್ಯಕ್ತಿತ್ವದ ರಾಜಕಾರಣಿ ಶಿವಪ್ಪ ಅವರ ಸ್ಮರಣೆ ಪ್ರತಿ ಕಾರ್ಯಕರ್ತನ ಕರ್ತವ್ಯವಾಗಬೇಕು ಕಾರ್ಯಕ್ರಮದಲ್ಲಿ ಮಾಜಿ ಶಾಸಕರುಗಳಾದ ಕುಮಾರಸ್ವಾಮಿ, ವಿಶ್ವನಾಥ್, ಪ್ರಮುಖರಾದ ತಿಮ್ಮಶೆಟ್ಟಿ, ಅನಂತರಾಮ್ ಸೇರಿದಂತೆ ಇತರರು ಇದ್ದರು.