ಮಡಿಕೇರಿ, ಆ. ೩: ಕಾಡಾನೆಯೊಂದು ಮಧ್ಯರಾತ್ರಿ ಮನೆ ಒಳಗೆ ನುಗ್ಗಿ ಆಹಾರ ಪದಾರ್ಥಗಳನ್ನು ತಿಂದು ಇತರೆ ವಸ್ತುಗಳನ್ನು ತುಳಿದು ನಾಶ ಮಾಡುವುದರ ಮೂಲಕ ಹಾಡಿ ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿದ್ದು, ಕಾಡಾನೆ ಹಾವಳಿಯಿಂದ ಚೆನ್ನಂಗಿ ಚಿಕ್ಕ ರೇಷ್ಮೆ ಹಾಡಿ ನಿವಾಸಿಗಳು ಭಯಭೀತರಾಗಿದ್ದಾರೆ.
ಕಾವೇರಿ ಎಂಬವರ ಮನೆ ಮೇಲೆ ದಾಳಿ ಮಾಡಿದ ಕಾಡಾನೆ ಬಾಗಿಲು ಮುರಿದು ಒಳನುಗ್ಗಿ ಅಕ್ಕಿ ಸೇರಿದಂತೆ ಆಹಾರ ಪದಾರ್ಥಗಳನ್ನು ತಿಂದು ಡ್ರಮ್, ಪಾತ್ರೆ, ಪ್ಲಾಸ್ಟಿಕ್ ವಸ್ತುಗಳು ಸೇರಿದಂತೆ ಎಲ್.ಇ.ಡಿ ಟಿ.ವಿ. ಇತರ ಉಪಕರಣಗಳನ್ನು ತುಳಿದು ನಾಶಪಡಿಸಿದೆ.
ಬೆಳಗ್ಗಿನ ಜಾವ ಮತ್ತೆ ಬಂದ ಕಾಡಾನೆ ಮನೆಯ ಅಡುಗೆ ಕೋಣೆ ಮೇಲೂ ದಾಳಿ ಮಾಡಿ ಮೇಲ್ಚಾವಣಿಗೆ ಹಾಕಲಾಗಿದ್ದ ಶೀಟುಗಳನ್ನು ನಾಶ ಮಾಡಿದೆ.
ಈ ಹಿಂದೆ ಎರಡು ಬಾರಿ ದಾಳಿ ಮಾಡಿದ್ದ ಕಾಡಾನೆ ಹಾವಳಿಯಿಂದ ಭಯಭೀತರಾಗಿದ್ದ ಮನೆಯವರು ಸಮೀಪದಲ್ಲಿರುವ ಸಂಬAಧಿಕರ ಮನೆಯಲ್ಲಿ ಮಲಗಲು ತೆರಳಿದ್ದರು. ಬೆಳಿಗ್ಗೆ ಬಂದು ನೋಡಿದ ಸಂದರ್ಭ ಕಾಡಾನೆ ದಾಳಿ ಮಾಡಿ ಆಹಾರ ಸೇರಿದಂತೆ ಇತರ ವಸ್ತುಗಳನ್ನು ನಾಶಪಡಿಸಿರುವುದು ತಿಳಿದುಬಂದಿದೆ.
ಈ ಹಿಂದೆಯೂ ಮನೆಯಲ್ಲಿ ಮಲಗಿದ್ದ ಸಂದರ್ಭ ಕಾಡಾನೆ ದಾಳಿಗೆ ಯತ್ನಿಸಿತ್ತು. ಮನೆಯಲ್ಲಿದ್ದವರು ಕಿರುಚಿಕೊಂಡಾಗ ಆನೆ ಸ್ಥಳದಿಂದ ತೆರಳಿತ್ತು. ವಾರದಲ್ಲಿ ಎರಡು ಮೂರು ದಿನ ಕಾಡಾನೆ ಮನೆಯ ಬಳಿ ಬರಲು ಆರಂಭಿಸಿದಾಗ ಭಯಭೀತರಾದ ಕಾವೇರಿ ಹಾಗೂ ಅವರ ಮಗಳು ಸಮೀಪದ ಮನೆಯೊಂದರಲ್ಲಿ ಮಲಗಲು ರಾತ್ರಿ ವೇಳೆ ತಂಗುತ್ತಿದ್ದರು.
ಸ್ಥಳಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೇಕೇರಿರ ಅರುಣ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಪಂಚಾಯಿತಿಯಿAದ ಆಹಾರ ಕಿಟ್ ವಿತರಣೆ ಮಾಡಿದರು. ಅರಣ್ಯ ಇಲಾಖೆ ಕೂಡಲೇ ಪರಿಹಾರ ನೀಡಿ ಕಾಡಾನೆ ಹಾವಳಿ ತಡೆಗಟ್ಟಬೇಕೆಂದು ಒತ್ತಾಯಿಸಿದರು. ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಸಿದ್ದಪ್ಪ ಮಾತನಾಡಿ, ನಿರಂತರವಾಗಿ ೪ಆರನೇ ಪುಟಕ್ಕೆ
(ಮೊದಲ ಪುಟದಿಂದ) ಕಾಡಾನೆ ದಾಳಿಯಿಂದ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗುತ್ತಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ತಿರುಗುವ ಮೂಲಕ ಮನುಷ್ಯರ ಹಾಗೂ ಮನೆಗಳ ಮೇಲೆ ದಾಳಿ ಮಾಡುವ ಕಾಡಾನೆಯನ್ನು ಸೆರೆಹಿಡಿದು ಸ್ಥಳಾಂತರ ಮಾಡುವುದರೊಂದಿಗೆ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಮನವಿ ಮಾಡಿದರು. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. -ಎಸ್.ಎಂ. ಮುಬಾರಕ್