ಮಡಿಕೇರಿ, ಆ. ೩: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆಸ್ಪತ್ರೆಯಲ್ಲಿ ಶಾಸಕ ಡಾ. ಮಂತರ್‌ಗೌಡರವರು ನೂತನ ದಂತ ಚಿಕಿತ್ಸೆ ವಿಭಾಗ ಹಾಗೂ ಓಪಿಜಿಎಕ್ಸ್ರೇ ಮೆಷಿನ್ ಅನ್ನು ಉದ್ಘಾಟನೆ ಮಾಡಿದರು.

ಈ ಸಂದರ್ಭ ದಂತ ಚಿಕಿತ್ಸಾ ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾದ ಡಾ. ಕೇದಾರನಾಥ್ ಎನ್ ಎಸ್ ಮಾತನಾಡಿ, ವಿಸ್ತಾರವಾದ (ಮೊದಲ ಪುಟದಿಂದ) ಡೀನ್ ಮತ್ತು ನಿರ್ದೇಶಕರಾದ ಡಾ. ಲೋಕೇಶ್ ಎಲ್‌ಜಿ ಅವರು ದಂತ ಚಿಕಿತ್ಸೆ ವಿಭಾಗದ ಬಗ್ಗೆ ಮಾತನಾಡಿ, ಕಳೆದ ಐದಾರು ವರ್ಷಗಳಿಂದ ಉತ್ತಮ ಸೇವೆ ಒದಗಿಸುತ್ತಿರುವ ದಂತ ಚಿಕಿತ್ಸಾ ವಿಭಾಗದ ವೈದ್ಯರುಗಳನ್ನು ಶ್ಲಾಘಿಸಿ, ಹೊಸ ಹೊಸ ಸೌಲಭ್ಯ ಒದಗಿಸಿರುವ ಹಿನ್ನೆಲೆ ಜನರಿಗೆ ದಂತ ಚಿಕಿತ್ಸೆಗಳನ್ನು ಮತ್ತಷ್ಟು ಉತ್ತಮವಾಗಿ ಒದಗಿಸುವಲ್ಲಿ ಶ್ರಮಿಸಿಬೇಕೆಂದರು. ವೈದ್ಯಕೀಯ ಅಧ್ಯಕ್ಷರಾದ ಡಾ. ಸೋಮಶೇಖರ್ ಹಾಗೂ ಜಿಲ್ಲಾ ಶಸ್ತçಚಿಕಿತ್ಸಕರಾದ ಡಾ. ನಂಜುAಡಯ್ಯ ಮಾತನಾಡಿ, ಈ ನವೀನ ದಂತ ಚಿಕಿತ್ಸಾ ವಿಭಾಗದಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ಜಿಲ್ಲೆಯ ಜನರು ಸದುಪಯೋಗಪಡಿಸಿಕೊಳ್ಳಬೇಕೆಂದರು. ಡಾ. ಧ್ಯಾನ್ ಕುಶಾಲಪ್ಪ, ಡಾ. ಅಮೂಲ್ಯ ಡಿ. ಮೇವುಂಡಿ, ಡಾ. ಪಿ.ಬಿ. ರಚನಾ, ಡಾ. ನಚಿಕೇತ್ ವೆಂಕಟೇಶ್ ಮತ್ತಿತರಿದ್ದರು.

ಲಭ್ಯವಿರುವ ಸೇವೆಗಳು

ದಂತ ಎಕ್ಸ್ರೇ, ಓಪಿಜಿ ಎಕ್ಸ್ರೇ, ಹಲ್ಲು ಕೀಳುವುದು, ಹುಳುಕು ಹಲ್ಲು ಚಿಕಿತ್ಸೆ, ರೂಟ್ ಕೆನಾಲ್ ಚಿಕಿತ್ಸೆ , ಕೃತಕ ಹಲ್ಲು ಭಾಗಶಃ ಸೆಟ್ಟು, ಕೃತಕ ಹಲ್ಲು ಪೂರ್ತಿ ಸೆಟ್ಟು , ಬುದ್ಧಿವಂತಿಕೆ ಹಲ್ಲು ಕಿರು ಶಸ್ತç ಚಿಕಿತ್ಸೆ, ಬಾಯಿಯ ಕಿರು ಶಸ್ತçಚಿಕಿತ್ಸೆ, ಸೀಳು ತುಟಿ, ದವಡೆ ಮತ್ತು ಅಂಗುಳ ಶಸ್ತç ಚಿಕಿತ್ಸೆ, ಬಾಯಿ, ದವಡೆ ಮತ್ತು ಮುಖದ ಕಿರು ಮತ್ತು ದೊಡ್ಡ ಶಸ್ತçಚಿಕಿತ್ಸೆ.

ಚಿಕಿತ್ಸಾ ಘಟಕಗಳ ಲೋಕಾರ್ಪಣೆ

ಕೊಡಗು ವೈದ್ಯಕೀಯ ವಿಜ್ಞಾನ ಬೋಧಕ ಸಂಸ್ಥೆ ಆಸ್ಪತ್ರೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡ ವಿವಿಧ ಚಿಕಿತ್ಸಾ ಘಟಕಗಳನ್ನು ಶಾಸಕರಾದ ಡಾ ಮಂತರ್ ಗೌಡ ಲೋಕಾರ್ಪಣೆ ಮಾಡಿದರು. ಉನ್ನತ ತಂತ್ರಜ್ಞಾನದ ಉಪಕರಣಗಳ ಅಳವಡಿಕೆಯೊಂದಿಗೆ ಹೈಟೆಕ್ ಚಿಕಿತ್ಸೆಗೆ ಸಿದ್ದವಾಗಿರುವ ಆ್ಯಂಟಿ ರೇಬಿಸ್ ಘಟಕ, ಡಯಾಲಿಸಿಸ್ ಘಟಕ ಮತ್ತು ಓಪಿಜಿ ತಪಾಸಣಾ ಘಟಕಗಳನ್ನು ಡಾ ಮಂತರ್ ಗೌಡ ಉದ್ಘಾಟಿಸಿದರು. ಕೊಡಗು ಮೆಡಿಕಲ್ ಕಾಲೇಜು ಆಸ್ಪತ್ರೆಯನ್ನು ಮತ್ತಷ್ಟು ಮೇಲ್ದರ್ಜೆಗೇರಿಸಿ ಕೊಡಗಿನ ಜನರ ಬಹುಕಾಲದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಬೇಡಿಕೆಯನ್ನು ಈಡೇರಿಸಲು ತಾವು ಬದ್ದರಿದ್ದು ಈ ನಿಟ್ಟಿನಲ್ಲಿ ಸರ್ಕಾರದಿಂದ ಎಲ್ಲಾ ರೀತಿಯ ಅನುದಾನ ತರಲು ಪ್ರಾಮಾಣಿಕ ಪ್ರಯತ್ನ ಪಡುವುದಾಗಿ ಡಾ ಮಂತರ್ ಗೌಡ ಹೇಳಿದರು. ಬಹುತೇಕ ಎಲ್ಲಾ ರೀತಿಯ ಉನ್ನತ ಚಿಕಿತ್ಸೆಗಳು ಕೊಡಗು ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಲಭ್ಯವಿದ್ದು ನಾಗರೀಕರು ವ್ಯವಸ್ಥೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳು ಸೇವೆಯನ್ನು ಕರ್ತವ್ಯ ಎಂದು ಪರಿಗಣಿಸಿ ರೋಗಿಗಳನ್ನು ಗಮನಿಸಬೇಕು ಎಂದು ಕಿವಿಮಾತು ಹೇಳಿದರು.

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್ ಡಾ. ಲೋಕೇಶ್ ಕುಮಾರ್, ಜಿಲ್ಲಾ ಸರ್ಜನ್ ಡಾ ನಂಜುAಡಯ್ಯ, ಎಂ.ಎಸ್. ಡಾ ಸೋಮಶೇಖರ್, ಇಲಾಖಾ ಮುಖ್ಯಸ್ಥರಾದ ಡಾ ಕಾಮತ್, ಹೊದ್ದೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಹೆಚ್.ಎ.ಹಂಸ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ, ಪ್ರಮುಖರಾದ ಪ್ರಕಾಶ್ ಆಚಾರ್ಯ, ಜಿ.ಸಿ. ಜಗದೀಶ್, ಮುದ್ದುರಾಜ್, ಕಲೀಲ್ ಬಾಷಾ ಸೇರಿದಂತೆ ವೈದ್ಯಾಧಿಕಾರಿಗಳು, ಸಿಬ್ಬಂದಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.