ಮಡಿಕೇರಿ, ಆ. ೩: ಹಲವಾರು ವಿಶೇಷತೆಗಳೊಂದಿಗೆ ಗಮನ ಸೆಳೆಯುವ ಕೊಡಗು ಜಿಲ್ಲೆಯಲ್ಲಿ ಇದೂ ಒಂದೂ ವಿಭಿನ್ನ ಆಚರಣೆ. ಕಾಡು - ಮೇಡು, ಬೆಟ್ಟ - ಗುಡ್ಡಗಳು ತೋಟದ ಬೇಲಿಗಳಲ್ಲಿ ಬೆಳೆಯುವ ವಿಶೇಷ ಬಗೆಯ ಸೊಪ್ಪೊಂದು ಹಬ್ಬದ ವಾತಾವರಣ ಸೃಷ್ಟಿಗೆ ಕಾರಣವಾಗುವ ದಿನ ಕಕ್ಕಡ ಪದಿನೆಟ್ಟ್ (ಆಟಿ-೧೮). ಈ ಹಬ್ಬದ ಸಂಭ್ರಮ ಇಂದು ಜಿಲ್ಲೆಯಲ್ಲಿ ಜರುಗಿತು.
ಔಷಧೀಯ ಗುಣವಿದೆ ಎಂಬ ಕಾರಣದೊಂದಿಗೆ ಪೂರ್ವಿಕರು ಕಂಡುಕೊAಡ ಸತ್ಯದ ಹಿನ್ನೆಲೆ ಇದು ಮಳೆಗಾಲದ ಅಬ್ಬರದ ನಡುವೆ ಜನತೆಯಲ್ಲಿ ಸಂಭ್ರಮಾಚರಣೆಗೂ ಕಾರಣವಾಗುತ್ತಾ ಪುರಾತನ ಕಾಲದಿಂದ ರೂಢಿಯಲ್ಲಿರುವುದು ವಿಶೇಷ. ಮದ್ದುಸೊಪ್ಪು (ವೈಜ್ಞಾನಿಕ ಹೆಸರು - ಎusಣiಛಿiಚಿ Wಥಿಟಿಚಿಚಿಜeಟಿsis) ಎಂದು ಕರೆಯಲ್ಪಡುವ ಈ ಸೊಪ್ಪಿನ ರಸದಿಂದ ಕಕ್ಕಡ ೧೮ ರ ದಿನದಂದು ತಯಾರಿಸಲ್ಪಡುವ ಮದ್ದುಪಾಯಸ ಮದ್ದ್ಪುಟ್ಟ್ನೊಂದಿಗೆ ನಾಟಿಕೋಳಿಯ ಖಾದ್ಯ ಈ ದಿನದ ವಿಶೇಷ. ಇದು ಈ ಹಿಂದೆ ಮನೆ ಮೆನಗಳಲ್ಲಿ ಆಚರಿಸಲ್ಪಡುತ್ತಿದ್ದು, ಇತ್ತೀಚಿನ ವರ್ಷಗಳಲ್ಲಿ ಸಾರ್ವತ್ರಿಕವಾಗಿ ಕೂಡ ಆಚರಿಸಲ್ಪಡುತ್ತಿದೆ.
ಈ ಖಾದ್ಯದೊಂದಿಗೆ ವಿಶೇಷವಾಗಿ ಮಳೆಗಾಲದ ಈ ಅವಧಿಯಲ್ಲಿ ದೇಹದ ಉಷ್ಣಾಂಶವನ್ನು ಸಮತೋಲನದಲ್ಲಿರಿಸಿಕೊಳ್ಳುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಬಳಸಲ್ಪಡುವ ಇನ್ನಿತರ ವಿಶೇಷವಾದ ಆಹಾರಗಳನ್ನು ಸೇರಿಸಿ ತೀನಿನಮ್ಮೆ (ಆಹಾರಮೇಳ) ರೀತಿಯಲ್ಲಿ ಈ ದಿನವನ್ನು ಇತ್ತೀಚಿನ ವರ್ಷಗಳಲ್ಲಿ ಆಚರಿಸಲಾಗುತ್ತಿದೆ.
ಭಾನುವಾರದಂದು ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಕೊಡವ ಸಮಾಜ, ಪೊಮ್ಮಕ್ಕಡ ಒಕ್ಕೂಟ, ಮಡಿಕೇರಿ ಕೊಡವ ಸಮಾಜ, ನಗರದ ಕೊಡವಕೇರಿಗಳ ಸಹಭಾಗಿತ್ವದಲ್ಲಿ ಮಡಿಕೇರಿ ಕೊಡವ ಸಮಾಜದಲ್ಲಿ ದಿನವಿಡೀ ವಿವಿಧ ಕಾರ್ಯಕ್ರಮ ನಡೆಯಿತು. ನಾಪೋಕ್ಲುವಿನಲ್ಲಿ ಕೊಡವ ಸಮಾಜ ಪೊಮ್ಮಕ್ಕಡ ಕೂಟದಿಂದ ಸಾರ್ವತ್ರಿಕ ಆಚರಣೆ, ಪೊನ್ನಂಪೇಟೆಯಲ್ಲಿ ಕೊಡವ ಹಿತರಕ್ಷಣಾ ಬಳಗ ಕಿಗ್ಗಟ್ಟ್ನಾಡ್ ಸಂಘಟನೆಯಿAದ ಪಂಜಿನ ಮೆರವಣಿಗೆ ಸಹಿತವಾಗಿ ಕೊಡವ ಸಮಾಜದಲ್ಲಿ ವೈವಿಧ್ಯಮಯ ಕಾರ್ಯಕ್ರಮ, ತತ್ವಂ ಅಸಿ ಚಾರಿಟೇಬಲ್ ಟ್ರಸ್ಟ್ನಿಂದ ಪೊನ್ನಂಪೇಟೆಯಿAದ ಬೆಕ್ಕೆಸೊಡ್ಲೂರು ತನಕ ವಿಶೇಷವಾಗಿ ಕಕ್ಕಡ ಮೆರಥಾನ್ ಸ್ಪರ್ಧೆ, ಅಮ್ಮತ್ತಿ ಕೊಡವ ಸಮಾಜ, ಪೊಮ್ಮಕ್ಕಡ ಕೂಟ, ಲಯನ್ಸ್ ಕ್ಲಬ್ನಿಂದ ಬಿಳುಗುಂದದಲ್ಲಿ ಕೆಸರುಗದ್ದೆ ಕ್ರೀಡಾಕೂಟ ಮತ್ತಿತರÀÀ ಕಾರ್ಯಕ್ರಮಗಳು ಜರುಗಿವೆ.
ಕಕ್ಕಡ ವಿಶೇಷತೆಯ ತಿಂಡಿ - ತಿನಿಸುಗಳೊಂದಿಗೆ ಸಭೆ - ಸಮಾರಂಭಗಳು, ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮಗಳು, ಮನರಂಜನಾ ಕ್ರೀಡೆಗಳು ಸಂಭ್ರಮಾಚರಣೆಗೆ ಸೇರ್ಪಡೆಗೊಂಡಿದ್ದವು. ಜಿಲ್ಲೆಯ ಇನ್ನಿತರ ಸಂಘ - ಸಂಸ್ಥೆ, ಸಮಾಜಗಳಲ್ಲಿ ಸೇರಿದಂತೆ ಮನೆ ಮನೆಗಳಲ್ಲಿ ಈ ಸಂಭ್ರಮಾಚರಣೆ ಭಾನುವಾರದಂದು ಕೂಡ ಜರುಗಿವೆ. ಇವೆಲ್ಲದಕ್ಕೂ ಮೂಲ ಕಾರಣ ಈ ‘‘ಸೊಪ್ಪಿನ ಮಹಿಮೆ’’ ಎಂಬದು ಇಲ್ಲಿ ಗಮನಾರ್ಹ.
ವಿವಿಧೆಡೆಯ ವಿವರಗಳು
ಮಡಿಕೇರಿ ಕೊಡವ ಸಮಾಜ
ಮದ್ದ್ ಪಾಯಸ, ಮದ್ದ್ ಪುಟ್ಟ್, ಞಂಡ್ಕರಿ, ಪಂದಿಕರಿ, ಕೋಳಿಕರಿ, ಮಾಂಗೆಕರಿ, ಚೆಕ್ಕೆಕುರುಪಜ್ಜಿ, ಕೈಪುಳಿ ಪಜ್ಜಿ, ಮುದುರೆ ಕಣ್ಣಿ, ಕೊಯಿಲೆ ಮೀನ್ ಕರಿ, ನಾಡ್ ಕುಮ್ಮು ಕರಿ, ಬೈಂಬಳೆ ಕರಿ, ಕೋವುಲೆ ಪುಟ್ಟ್, ಮರಕೇಂಬ್ ಪುಟ್ಟ್ .... ಹೀಗೆ ಹಲವು ಬಗ್ಗೆಯ ಕಕ್ಕಡ ತಿಂಗಳ ಖಾದ್ಯಗಳ ಪ್ರದರ್ಶನ ಸ್ಪರ್ಧೆ ಕೊಡವ ಸಮಾಜದಲ್ಲಿ ಗಮನ ಸೆಳೆದವು. ಹಲವಾರು ಸ್ಪರ್ಧಿಗಳು ೧೪ ಬಗೆಯ ಖಾದ್ಯಗಳನ್ನು ತಯಾರಿಸಿದ್ದರು. ೪ಆರನೇ ಪುಟಕ್ಕೆ
(ಮೊದಲ ಪುಟದಿಂದ) ಮಡಿಕೇರಿ ಕೊಡವ ಸಮಾಜ, ಪೊಮ್ಮಕ್ಕಡ ಒಕ್ಕೂಟ, ಮಡಿಕೇರಿ ಕೊಡವ ಕೇರಿಗಳ ಸಹಯೋಗದಲ್ಲಿ ಕೊಡವ ಸಮಾಜದ ಸಭಾಂಗಣದಲ್ಲಿ ಕಕ್ಕಡ ನಮ್ಮೆಯ ಒತ್ತೋರ್ಮೆ ಕೂಟ ವಿಶೇಷವಾಗಿ ಜರುಗಿತು.
ಸಾಂಪ್ರದಾಯಿಕವಾಗಿ ಆಚರಿಸಲಾಗುವ ಕಕ್ಕಡ ಸಂಪ್ರದಾಯವನ್ನು ಈ ಬಾರಿ ಮಡಿಕೇರಿಯಲ್ಲಿ ಪುರುಷರು, ಮಹಿಳೆಯರು ಮಕ್ಕಳ ಸಹಿತವಾಗಿ ಪೊಮ್ಮಕ್ಕಡ ಕೂಟದ ನೇತೃತ್ವದಲ್ಲಿ ಕೊಡವ ಸಮಾಜ, ವಿವಿಧ ಕೇರಿಗಳ ಪಾಲ್ಗೊಳ್ಳುವಿಕೆಯೊಂದಿಗೆ ಆಯೋಜಿಸಲಾಗಿತ್ತು.
ಮಡಿಕೇರಿ ಕ್ಷೇತ್ರದ ಶಾಸಕರಾದ ಮಂತರ್ಗೌಡ ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಕಕ್ಕಡ ನಮ್ಮೆ ಒಂದು ಸಂಭ್ರಮಾಚರಣೆಯಾಗಿದೆ. ಮಡಿಕೇರಿ ಪೊಮ್ಮಕ್ಕಡ ಕೂಟದ ಕಟ್ಟಡ ನಿರ್ಮಾಣಕ್ಕೆ ೨೦ ಲಕ್ಕ ಅನುದಾನ ಹಾಗೂ ತಡೆಗೋಡೆ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದರು. ಜನರು ಹಿಂದೆ ಆರೋಗ್ಯಕರ ಆಹಾರವನ್ನು ಸೇವಿಸುವ ಮೂಲಕ ಆರೋಗ್ಯಯುತರಾಗಿದ್ದರು. ಈಗಿನ ಆಹಾರ ಪದ್ಧತಿ ಬದಲಾವಣೆ ಗೊಂಡಿದೆ ಆದ್ದರಿಂದ ಎಲ್ಲರೂ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಪೂರ್ವಜರು ಪರಿಪಾಲಿಸಿಕೊಂಡ ಬಂದ ಈ ಆಹಾರ ಪದ್ಧತಿ ಮಹತ್ವದ್ದು ಎಂದು ಅವರು ಹೇಳಿದರು.
ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವAಡ ಪಿ. ಮುತ್ತಪ್ಪ ಮಾತನಾಡಿ ಕೊಡಗಿನ ಮೂಲ ಸಂಸ್ಕೃತಿಯAತೆ ಮಳೆಗಾಲ ಪ್ರಾರಂಭ ವಾದೊಡನೆ ಗದ್ದೆಯಲ್ಲಿ ಉಳುಮೆ ಮಾಡಿ ಭತ್ತ ಬೆಳೆದು ಸೇವಿಸುತ್ತಿದ್ದರು ಆ ಸಮಯದಲ್ಲಿ ಕಕ್ಕಡ ತಿಂಗಳಲ್ಲಿ ಮಳೆಯ ಚಳಿಗಾಳಿಗೆ ಮೈಯನ್ನು ಬೆಚ್ಚಗಿಸಿ ಕೊಳ್ಳಲು ಕಕ್ಕಡ ೧೮ ರಂದು ವಿಶೇಷ ಖಾದ್ಯವನ್ನು ಸೇವಿಸುವುದೇ ಈ ಆಚರಣೆಯ ವಿಶೇಷವೆಂದರು.
ಕಕ್ಕಡ ವಿಶೇಷ ಖಾದ್ಯಗಳ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಸಮಾಜ ಸೇವಕಿ ಅಜ್ಜಿಕುಟ್ಟೀರ ಕಾಂಚನ್ ಪೊನ್ನಣ್ಣ, ಕಕ್ಕಡ ಆಚರಣೆ ಕೊಡಗಿನ ಸಂಪ್ರದಾಯಕ್ಕೆದ್ಯೋತಕವಾಗಿದೆ. ಮಡಿಕೇರಿ ಪೊಮ್ಮಕ್ಕಡ ಕೂಟದ ಈ ಕಾರ್ಯ ಶ್ಲಾಘನೀಯ ಎಂದರು. ಕಾರ್ಯಕ್ರಮದಲ್ಲಿ ಕಾಂಚನ್ ಪೊನ್ನಣ್ಣ ಅವರು, ಪೊಮ್ಮಕ್ಕಡ ಕೂಟದ ನೂತನ ಬ್ಯಾಡ್ಜ್ ಅನ್ನು ಅನಾವರಣಗೊಳಿಸಿದರು.
ಮಾಜಿ ವಿಧಾನಪರಿಷತ್ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ ಮಾತನಾಡಿ, ಕೊಡವ ಸಮಾಜದ ಅಭಿವೃದ್ಧಿಗೆ ಕೊಡಗಿನ ಶಾಸಕರು ಸಹಕಾರ ನೀಡುತ್ತಿದ್ದು ಎಲ್ಲರೂ ಕೈಜೋಡಿಸಬೇಕೆಂದರು.
ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕನ್ನಂಡ ಕವಿತ ಬೊಳ್ಳಪ್ಪ ಮಾತನಾಡಿ ಊರು ನಾಡು ಕೇರಿ ಮಂದ್ ಮಾನಿಯಲ್ಲಿ ಕಲಿತ ಸಂಸ್ಕೃತಿ, ಆಚಾರ-ವಿಚಾರಗಳು ಇಂದು ಸಂಪ್ರದಾಯವಾಗಿ ನಡೆದು ಬಂದದ್ದು ವಿಶೇಷವಾಗಿದೆ. ಮಡಿಕೇರಿ ಕೊಡವ ಸಮಾಜದ ಪೊಮ್ಮಕ್ಕಡ ಕೂಟದ ಸ್ಥಳೀಯ ಮಹಿಳೆಯರು ವಿವಿಧ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದಾರೆ ಎಂದರು.
ಪೊಮ್ಮಕ್ಕಡ ಕೂಟದ ಸದಸ್ಯರು ಹಾಗೂ ಮಕ್ಕಳಿಂದ ವಿವಿಧ ನ್ರತ್ಯ ಪ್ರದರ್ಶನಗೊಂಡಿತು. ಕಕ್ಕಡ ತಿಂಗಳ ವಿಶೇಷದ ಬಗ್ಗೆ ಉಪನ್ಯಾಸಕಿ ಅಜ್ಜಿಕುಟ್ಟಿರ ಸುನಿತಾ ಗಿರೀಶ್, ಕಕ್ಕಡ ನಮ್ಮೆರ ಭೋಜ ಕುರಿತು ವಿಚಾರ ಮಂಡನೆ ಮಾಡಿದರು. ಸ್ಪರ್ಧಾ ತೀರ್ಪುಗಾರರಾಗಿ ಹಂಚೆಟ್ಟಿರ ಮನು ಮುದ್ದಪ್ಪ, ನೆರವಂಡ ಡ್ಯೂಕ್, ಮೂವೇರ ಅನು ಸುರೇಶ್, ಚೌರೀರ ಹರ್ಷಿಕ ಶ್ಯಾಮ್ ಕಾರ್ಯನಿರ್ವಹಿಸಿದರು.
ಪಾಲೆಯಂಡ ಕಾವ್ಯ ಪ್ರಾರ್ಥಿಸಿ, ಕೊಡವ ಸಮಾಜ ಉಪಾಧ್ಯಕ್ಷ ರಾದ ಕೇಕಡ ವಿಜುದೇವಯ್ಯ ಸ್ವಾಗತಿಸಿ ಉಳ್ಳಿಯಡ ಸಚಿತ ಗಂಗಮ್ಮ ವಂದಿಸಿ, ಚೋಕಿರ ಅನಿತಾ ನಿರೂಪಿಸಿದರು. ಅಂಜಪರವAಡ ಉಷಾ ಅತಿಥಿಗಳ ಪರಿಚಯಿಸಿದರು.
ವೇದಿಕೆಯಲ್ಲಿ ಪದ್ಮಶ್ರೀ ಪ್ರಶಸ್ತಿ ವಿಜೇತೆ ಡಾ. ಐಮುಡಿಯಂಡ ರಾಣಿ ಮಾಚಯ್ಯ ಉಪಸ್ಥಿತರಿದ್ದರು. ಮಡಿಕೇರಿ ಕೊಡವ ಸಮಾಜದ ಪದಾಧಿಕಾರಿಗಳು, ಮಡಿಕೇರಿ ಕೊಡವ ಕೇರಿಯ ಪದಾಧಿಕಾರಿಗಳು, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಸದಸ್ಯರು, ವಿವಿಧ ಸಂಘ ಸಂಸ್ಥೆಯ ಸದಸ್ಯರು ಹಾಜರಿದ್ದರು. ವಿವಿಧ ಕ್ರೀಡೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಹಾಡು, ನೃತ್ಯ ಸೇರಿದಂತೆ ವಿವಿಧ ಸ್ಪರ್ಧೆಗಳು, ಮದ್ದು ಪಾಯಸ ಸೇರಿದಂತೆ ಸಹಭೋಜನ ಏರ್ಪಡಿಸಲಾಗಿತ್ತು. ಪೊಮ್ಮಕ್ಕಡ ಕೂಟದ ಕಾರ್ಯದರ್ಶಿ ಕೂಪದಿರ ಜೂನಾ ವಿಜಯ್ ಸೇರಿದಂತೆ ಪದಾಧಿಕಾರಿಗಳು ವಿವಿಧ ಕಾರ್ಯ ನಡೆಸಿಕೊಟ್ಟರು.
- ಶಶಿ/ ಕರುಣ್