ಮಡಿಕೇರಿ, ಆ. ೪: ಬೆಂಗಳೂರು ಸಾಯಿ ಕೇಂದ್ರದಲ್ಲಿ ಮುಖ್ಯ ಕೋಚ್ ಆಗಿ ಹಲವಾರು ಅಂತರ ರಾಷ್ಟಿçÃಯ ಹಾಕಿ ಪಟುಗಳನ್ನು ತಯಾರು ಮಾಡಿದ ಕೊಡಗಿನವರಾದ ಚೇಂದAಡ ಯು. ಅಶ್ವಥ್ (೬೬) ತಾ. ೪ ರಂದು ಬೆಂಗಳೂರಿನಲ್ಲಿ ಹೃದಯಾ ಘಾತದಿಂದ ನಿಧನರಾದರು.

ವಾಕಿಂಗ್ ಮಾಡುತ್ತಿದ್ದ ಸಂದರ್ಭ ಅವರಿಗೆ ಹೃದಯಾಘಾತ ವಾಗಿರುವುದಾಗಿ ತಿಳಿದುಬಂದಿದೆ. ಕೊಡಗಿನ ಹಲವು ಆಟಗಾರರು ಸೇರಿದಂತೆ ರಾಜ್ಯದಿಂದ ಹಲವಷ್ಟು ಹಾಕಿ ಪಟುಗಳು ಇವರ ಗರಡಿಯಲ್ಲಿ ಪಳಗಿದ್ದರು. ಅಶ್ವತ್ ಅವರ ನಿಧನಕ್ಕೆ ಹಾಕಿ ಕರ್ನಾಟಕದ ಕಾರ್ಯದರ್ಶಿ ಎ.ಬಿ. ಸುಬ್ಬಯ್ಯ ಸೇರಿದಂತೆ ಹಲವರು ಸಂತಾಪ ವ್ಯಕ್ತಪಡಿಸಿದ್ದಾರೆ. ಇವರು ಮೂಲತಃ ಜಿಲ್ಲೆಯ ಚಂಬೆಬೆಳ್ಳೂರು ಗ್ರಾಮದವರು. ಮೃತರು ಪತ್ನಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

ನಿಧನ

ಹೊಸ್ಕೇರಿ ಗ್ರಾಮ ನಿವಾಸಿ ಕೊಂಪುಳಿರ ಸೊಮಶೇಖರ (ಅಣ್ಣಯ್ಯ-೬೩) ತಾ.೪ರಂದು ನಿಧನರಾದರು. ಮೃತರು ಪತ್ನಿ, ಈರ್ವರು ಪುತ್ರಿಯರನ್ನು ಅಗಲಿದ್ದಾರೆ.