ಮಡಿಕೇರಿ, ಆ. ೬: ಇತ್ತೀಚೆಗೆ ದಕ್ಷಿಣ ಅಮೇರಿಕಾದ ಗಯಾನದಲ್ಲಿ ಸಾವನ್ನಪ್ಪಿದ ಮದೆನಾಡಿನ ಪಿ.ಬಿ. ಗಿರೀಶ್ ಅವರ ಮನೆಗೆ ಸಂಸದ ಯದುವೀರ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಗಯಾನದಿಂದ ಮೃತದೇಹವನ್ನು ಸ್ವದೇಶಕ್ಕೆ ತರುವಲ್ಲಿ ಸಹಕಾರ ನೀಡಿದ್ದಕ್ಕಾಗಿ ಕುಟುಂಬಸ್ಥರು ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭ ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ, ಮಡಿಕೇರಿ ನಗರ ಮಂಡಲ ಅಧ್ಯಕ್ಷ ಉಮೇಶ್ ಸುಬ್ರಮಣಿ, ಎಸ್ಸಿ ಮೋರ್ಚಾ ಅಧ್ಯಕ್ಷ ಪಿ.ಎಂ. ರವಿ, ಮೊಗೇರ ಸೇವಾ ಸಮಾಜದ ಅಧ್ಯಕ್ಷ ಜನಾರ್ದನ್, ಪೊಡಿಯ, ಪಾಣತ್ತಲೆ ಕವನ್ ಕಾವೇರಪ್ಪ, ಆಗೋಳಿಕಜೆ ಧನಂಜಯ, ಶಕ್ರಿ ಕೇಂದ್ರದ ಅಧ್ಯಕ್ಷ ಸುರೇಶ್, ವಸಂತ್, ಸ್ತಿçÃಶಕ್ತಿ ಸಂಘಗಳ ಸದಸ್ಯರುಗಳು ಇದ್ದರು.
ಅಂತ್ಯಸAಸ್ಕಾರ: ಮೃತ ಗಿರೀಶ್ ಅವರ ಮೃತದೇಹವನ್ನು ಇಂದು ಮದೆನಾಡಿಗೆ ತರಲಾಯಿತು. ಮೊಗೇರ ಸಮಾಜದ ವಿಧಿವಿಧಾನದ ಕ್ರಿಯೆ ಬಳಿಕೆ ಅಂತ್ಯಸAಸ್ಕಾರ ನೆರವೇರಿಸಲಾಯಿತು.