ಕುಶಾಲನಗರ, ಆ. ೧೨: ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಸೋಮವಾರಪೇಟೆ ಮಂಡಲದ ವತಿಯಿಂದ ಹರ್ ಘರ್ ತಿರಂಗಾ ಅಭಿಯಾನದ ಜಾಗೃತಿ ಹಿನ್ನೆಲೆಯಲ್ಲಿ ಬೃಹತ್ ತಿರಂಗಾ ಯಾತ್ರೆ ನಡೆಯಿತು.

ನಂಜರಾಯಪಟ್ಟಣದಿAದ ವಾಹನಗಳಲ್ಲಿ ಜಾಥಾ ನಡೆಸಿದ ಬಿಜೆಪಿ ಮುಖಂಡರು, ಕಾರ್ಯಕರ್ತರು ಘೋಷಣೆಗಳ ಮೂಲಕ ಕುಶಾಲನಗರಕ್ಕೆ ಮೆರವಣಿಗೆಯಲ್ಲಿ ಆಗಮಿಸಿದರು.

ತೆರೆದ ವಾಹನದಲ್ಲಿ ಭಾರತಾಂಬೆಯ ಭಾವಚಿತ್ರ ಹಾಗೂ ವಾಹನಗಳಲ್ಲಿ ರಾಷ್ಟçಧ್ವಜ ಅಳವಡಿಸಿ ನೂರಾರು ವಾಹನಗಳ ಮೂಲಕ ಆಗಮಿಸಿದ ಜಾಥಾ ಕುಶಾಲನಗರ ಖಾಸಗಿ ಬಸ್ ನಿಲ್ದಾಣದಲ್ಲಿ ಸಮಾಪ್ತಿಗೊಂಡಿತು.

ಮಾಜಿ ಶಾಸಕ ಅಪ್ಪಚ್ಚುರಂಜನ್ ಮನೆ ಮನೆಗಳಲ್ಲಿ ರಾಷ್ಟçಧ್ವಜ ರಾರಾಜಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದು, ಎಲ್ಲರೂ ಇಂದಿನಿAದಲೇ ತಮ್ಮ ಮನೆಗಳಲ್ಲಿ ರಾಷ್ಟçಧ್ವಜ ಅಳವಡಿಸುವಂತೆ ಕೋರಿದರು.

ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಬಿ.ಬಿ. ಭಾರತೀಶ್ ಮಾತನಾಡಿ, ದೇಶದ ಹಿತಾಸಕ್ತಿ ವಿಚಾರ ಬಂದಾಗ ಜಾತಿ, ಧರ್ಮ, ಪಕ್ಷ ಬೇಧ ಮರೆತು ಎಲ್ಲರೂ ಒಗ್ಗೂಡಿ ಕಾರ್ಯನಿರ್ವಹಿಸುವ ಮನಸ್ಥಿತಿ ಬೆಳೆಸಿಕೊಳ್ಳಬೇಕಿದೆ ಎಂದರು.

ಈ ಸಂದರ್ಭ ಬಿಜೆಪಿ ಯುವ ಮೋರ್ಚಾ ಮಂಡಲ ಅಧ್ಯಕ್ಷ ಮೋಹಿತ್, ಪ್ರಧಾನ ಕಾರ್ಯದರ್ಶಿಗಳಾದ ಪದ್ಮನಾಭ, ಪ್ರಸಿದ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಮಹೇಶ್ ತಿಮ್ಮಯ್ಯ, ಜಿಲ್ಲಾ ಉಪಾಧ್ಯಕ್ಷರಗಳಾದ ನವನೀತ್ ಪೊನ್ನೇಟಿ, ಪ್ರವೀಣ್ ಮಲ್ಲಜಿರ, ಕಾರ್ಯದರ್ಶಿ ರಕ್ಷಿತ್ ಮಾವಾಜಿ, ಮಂಡಲ ಅಧ್ಯಕ್ಷ ಗೌತಮ್, ಮಂಡಲ ಪ್ರಧಾನ ಕಾರ್ಯದರ್ಶಿ ದರ್ಶನ್ ಜೋಯಪ್ಪ, ನಗರ ಯುವ ಮೋರ್ಚಾ ಅಧ್ಯಕ್ಷ ರಾಮನಾಥನ್, ಪ್ರಧಾನ ಕಾರ್ಯದರ್ಶಿ ಆದರ್ಶ್, ಪ್ರಮುಖರಾದ ಕೃಷ್ಣಪ್ಪ, ಚರಣ್, ಮಧುಸೂದನ್, ಅಮೃತ ರಾಜ್, ಸೌಮ್ಯ ಭರತ್, ಪ್ರವೀಣ್, ನಿತ್ಯಾನಂದ, ಚಂದ್ರಶೇಖರ್ ಹೇರೂರು, ಸುಮನ್, ಅನುದೀಪ್, ಲಕ್ಷ್ಮಿನಾರಾಯಣ, ಪ್ರೇಮ್ ಸಾಗರ್, ಆದರ್ಶ್, ಗಣೇಶ್, ನವೀನ್ ಗಣಪತಿ ಮತ್ತಿತರರು ಇದ್ದರು.