ಚೆಯ್ಯAಡಾಣೆ, ಆ. ೧೪: ಜಲಂಧರ್‌ನ ಇಎಂಇ ಹಾಕಿ ತಂಡದ ನಿವೃತ್ತ ಹಾಕಿ ಪಟುಗಳ ಸಂತೋಷ ಕೂಟ ಇತ್ತೀಚೆಗೆ ವೀರಾಜಪೇಟೆಯಲ್ಲಿ ನಡೆಯಿತು.

ವೀರಾಜಪೇಟೆಯ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ನಡೆದ ಸಂತೋಷ ಕೂಟ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತ ತಂಡವನ್ನು ಪ್ರತಿನಿಧಿಸಿದ್ದ ನಿವೃತ್ತ ಆಟಗಾರ ಕೊಡಂದೇರ ಕುಶ ನಂಜಪ್ಪ ಅವರು ವಹಿಸಿದ್ದರು.

ಸಂತೋಷ ಕೂಟದಲ್ಲಿ ನಿವೃತ್ತ ಹಾಕಿಪಟುಗಳು ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ಈ ಸಂದರ್ಭ ನಿವೃತ್ತ ಹಾಕಿಪಟುಗಳಾದ ಐತಿಚಂಡ ಕಾಶಿ ನಂಜಪ್ಪ, ಚೋಳಂಡ ಡಾಲು ಮುದ್ದಯ್ಯ, ನೆಲ್ಲಮಕ್ಕಡ ಕಾರ್ಯಪ್ಪ, ಪುಗ್ಗೇರ ಕಿಟ್ಟು ತಿಮ್ಮಯ್ಯ, ಕೇಲೇಟಿರ ಅಶೋಕ್ ಸೋಮಯ್ಯ, ಮಾದಂಡ ರವಿ ಪೆಮ್ಮಯ್ಯ, ಚೆಯ್ಯಂಡ ಲವ ಅಪ್ಪಚ್ಚು, ಬೊಳ್ತಜೀರ ಅಶೋಕ್, ಅರೆಯಡ ಚಿಣ್ಣಪ್ಪ, ಮಾರ್ಚಂಡ ಪ್ರಭು, ಚಂದಪAಡ ಆಕಾಶ್ ಚಂಗಪ್ಪ, ನೆರವಂಡ ಪೂಣಚ್ಚ, ಚೇಮೀರ ಬೆಳ್ಯಪ್ಪ, ಉಪಸ್ಥಿತರಿದ್ದರು. ಕಾಶಿ ನಂಜಪ್ಪ ಸ್ವಾಗತಿಸಿ, ವಂದಿಸಿದರು.