ಮಡಿಕೇರಿ, ಸೆ. ೫: ಹಿಂದೂ ಮಲಯಾಳಿ ಸಮುದಾಯದ ಪ್ರಮುಖ ಹಬ್ಬಗಳಲ್ಲೊಂದಾದ ತಿರು ಓಣಂ ಹಬ್ಬವನ್ನು ನಾಡಿನಾದ್ಯಂತ ಸಂಭ್ರಮ - ಸಡಗರದಿಂದ ಆಚರಿಸಲಾಯಿತು.

ಕಳೆದ ಹತ್ತು ದಿನಗಳಿಂದ ಮನೆಯ ಮುಂದೆ ಹೂವಿನ ರಂಗೋಲಿ(ಪೂಕಳA) ಬಿಡಿಸುತ್ತಾ ಆಚರಣೆ ಮಾಡಿಕೊಂಡು ಬರಲಾಗಿದ್ದು, ಕೊನೆಯ ದಿನವಾದ ಇಂದು ಆಕರ್ಷಕ ರಂಗೋಲಿ ಬಿಡಿಸುವದರೊಂದಿಗೆ ಮನೆ ಹಾಗೂ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಲಿ ಚಕ್ರವರ್ತಿಯನ್ನು ನೆನೆಯುತ್ತಾ, ಮಹಾವಿಷ್ಣುವಿಗೆ ನಮಿಸಿ ಹಬ್ಬಾಚರಣೆ ಮಾಡಿದರು. ಹೊಸ ಬಟ್ಟೆ ತೊಟ್ಟು, ವಿವಿಧ ಬಗೆಯ ಖಾದ್ಯಗಳನ್ನು( ಓಣಂ ಸದ್ಯ) ತಯಾರಿಸಿ ಸಹಭೋಜನದೊಂದಿಗೆ ಸಂಭ್ರಮಿಸಿದರು.

ಜಿಲ್ಲಾ ಕೇಂದ್ರ ಮಡಿಕೇರಿಯ ಶ್ರೀ ಮುತ್ತಪ್ಪನ್ ಕ್ಷೇತ್ರದಲ್ಲಿ ಬೆಳಿಗ್ಗೆ ಹೂವಿನ ರಂಗೋಲಿ ಬಿಡಿಸಿ, ವಿಶೇಷ ಪೂಜೆ ಸಲ್ಲಿಸಿದರು. ಶ್ರೀ ಮುತ್ತಪ್ಪ ದೇವಾಲಯ ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ ಪೂಜಾ ಕಾರ್ಯಕ್ರಮದಲ್ಲಿ ಸಮಿತಿ ಅಧ್ಯಕ್ಷ ಟಿ.ಕೆ.ಸುಧೀರ್, ಖಜಾಂಚಿ ಉಣ್ಣಿಕೃಷ್ಣ, ಪೂಜಾರಿಗಳಾದ ಪಿ.ಜಿ.ಸುಬ್ರಮಣಿ, ಕೆ.ಎಸ್. ರಮೇಶ್, ಕೆ.ಕೆ. ಮೋಹನ್, ಸದಾಶಿವ ಶೆಟ್ಟಿ, ಚಂದ್ರಿಕಾ, ಆಶಿತಾ ವಿನೋದ್, ಬೇಬಿ ಇತರರು ಪಾಲ್ಗೊಂಡಿದ್ದರು. ೪ಆರ£

ವೀರಾಜಪೇಟೆ: ಐಶ್ವರ್ಯ-ಸಮೃದ್ಧಿಯ ಸಂಕೇತವಾದ ಓಣಂ ಹಬ್ಬದ ಸಂಭ್ರಮವನ್ನು ವೀರಾಜಪೇಟೆಯಲ್ಲಿ ಆಚರಿಸಲಾಯಿತು. ಕೊಲೆ-ಸುಲಿಗೆ, ಮೋಸ-ವಂಚನೆಯಿAದ ದೂರವಿದ್ದ ಮಹಾಬಲಿಯ ಆಡಳಿತ ದಿನಗಳನ್ನು ನೆನಪಿಸಿಕೊಂಡು ಕೇರಳೀಯರು ಸಡಗರದಿಂದ ಓಣಂ ಆಚರಿಸಿದರು.

ಹೊಸ ಉಡುಪು ಧರಿಸಿ ಮಲಯಾಳಿ ಬಾಂಧವರು ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಬಳಿಕ ಮನೆಮಂದಿಯೆಲ್ಲ ಸ್ನೇಹಿತರು-ಕುಟುಂಬಸ್ಥರ ಜತೆಗೂಡಿ ಸೇರಿ ಓಣಂ ಸದ್ಯ ಸವಿದರು. ಸೋಮವಾರಪೇಟೆ: ರಾಷ್ಟಿçÃಯ ಸ್ವಯಂ ಸೇವಕ ಸಂಘಕ್ಕೆ ೧೦೦ವರ್ಷಗಳು ತುಂಬುತ್ತಿರುವ ಹಿನ್ನೆಲೆ ಮಾದಾಪುರದ ಹಿಂದೂ ಜಾಗರಣಾ ವೇದಿಕೆಯ ಸದಸ್ಯರುಗಳು ಪೂಕಳಂ ರಚಿಸಿ ಓಣಂ ಹಬ್ಬವನ್ನು ಸಂಭ್ರಮಿಸಿದರು.

ವಿವಿಧ ಹೂವುಗಳ ಎಸಳುಗಳಿಂದ ರಚಿಸಿದ ಪೂಕಳಂನಲ್ಲಿ ‘ಆರ್‌ಎಸ್‌ಎಸ್-೧೦೦’ ಎಂದು ಚಿತ್ರಿಸಿ ಹಬ್ಬದೊಂದಿಗೆ ಸಂಘದ ಶತಾಬ್ದಿ ವರ್ಷವನ್ನೂ ಸ್ವಾಗತಿಸಿದರು. ಮಾದಾಪುರದ ಗಣಪತಿ ದೇವಾಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಟೋಳಿ ಸದಸ್ಯ ಸುನಿಲ್ ಮಾದಾಪುರ, ತಾಲೂಕು ಸಹ ಸಂಯೋಜಕ ಸೂರಜ್, ತಾಲೂಕು ಟೋಳಿ ಪದಾಧಿಕಾರಿಗಳಾದ ಮನೋಜ್ ಕುಮಾರ್, ದೀಪಕ್, ಹರೀಶ್, ಅಭಿಷೇಕ್, ಸುಜಿತ್, ನಿತೀಶ್, ಧನುಷ್, ಅಖಿಲೇಶ್, ಪ್ರಸಾದ್ ಸೇರಿದಂತೆ ಇತರರು ಭಾಗಿಯಾಗಿದ್ದರು ಚೆಟ್ಟಳ್ಳಿ: ಚೆಟ್ಟಳ್ಳಿ ವೀರಾಂಜನೇಯ ಯುವಕ ಸಂಘದ ವತಿಯಿಂದ ಚೆಟ್ಟಳ್ಳಿಯ ಶ್ರೀ ನರೇಂದ್ರ ಮೋದಿ ಸಹಕಾರ ಭವನದಲ್ಲಿ ಸದಸ್ಯರು ಬಣ್ಣಬಣ್ಣದ ಹೂವಿನ ಅಲಂಕಾರ ಮಾಡಿ ದೀಪ ಬೆಳಗಿ ಓಣಂ ಆಚರಿಸಲಾಯಿತು.