ಕಡಂಗ, ಸೆ. ೬: ನಾಪೋಕ್ಲು ಸಮೀಪದ ಕೊಟ್ಟಮುಡಿಯ ಮರ್ಕಜ್ ಉಲ್ ಹಿದಾಯ ಆಶ್ರಯದಲ್ಲಿ ಬೃಹತ್ ಜಲಾಲಿಯ ವಾರ್ಷಿಕ ಮತ್ತು ಮಹಮೂದ್ ಉಸ್ತಾದ್ ಅನುಸ್ಮರಣೆ ಕಾರ್ಯಕ್ರಮವನ್ನು ಸಂಸ್ಥೆಯ ವಠಾರದಲ್ಲಿ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಮಸ್ತ ಕೇರಳ ಜಂಯುತುಲ್ ಉಲಮಾ ಉಪಾಧ್ಯಕ್ಷರಾದ ಸಯ್ಯದ್ ಆಟಕೋಯ ತಂಗಳ್ ಕುಂಬೊಳ್ ಆಗಮಿಸಿ ಪ್ರಾರ್ಥನೆಯ ನೇತೃತ್ವ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಸೈಯದ್ ಜಹಫರ್ ಸಾಧಿಕ್ ತಂಗಳ್, ಜಸಿಲ್ ಕಾಮಿಲ್ ಸಕಾಪಿ, ಕಿಲ್ಲೂರ್ ತಂಗಳ್, ಇಲ್ಲ್ಯಾಸ್ ತಂಗಳ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಹಸ್ರಾರು ಭಕ್ತಾದಿಗಳು ಆಗಮಿಸಿದ್ದು ಕೊನೆಯಲ್ಲಿ ಅನ್ನಸಂತರ್ಪಣೆ ನೆರವೇರಿತು. ಕಾರ್ಯಕ್ರಮದ ಸ್ವಾಗತ ಮತ್ತು ವಂದನೆಯನ್ನು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಸಖಾಕಾಫಿ ನಿರ್ವಹಿಸಿದರು.