ಸೋಮವಾರಪೇಟೆ, ಸೆ. ೬: ಲೋಕೋಪಯೋಗಿ ಇಲಾಖೆ ವತಿಯಿಂದ ರೂ. ೨೦ ಕೋಟಿ ವೆಚ್ಚದಲ್ಲಿ ಕೈಗೊಳ್ಳಲು ಉದ್ದೇಶಿಸಲಾಗಿರುವ ಸೋಮವಾರಪೇಟೆ ಪಟ್ಟಣದಿಂದ ಆಲೇಕಟ್ಟೆ ಮಾರ್ಗವಾಗಿ ಇನಕನಹಳ್ಳಿವರೆಗಿನ ರಾಜ್ಯ ಹೆದ್ದಾರಿ ಕಾಮಗಾರಿಯನ್ನು ಸೂಕ್ತವಲ್ಲದ ಸಮಯದಲ್ಲಿ ಆರಂಭಿಸಿದ್ದರಿAದ ಪ್ರಸ್ತುತ ಈ ರಸ್ತೆಯಲ್ಲಿ ಸಂಚಾರ ದುಸ್ತರವಾಗಿದೆ.

ಸೋಮವಾರಪೇಟೆ-ಆಲೇಕಟ್ಟೆ-ಕೂಡುರಸ್ತೆ-ಕಲ್ಕಂದೂರು-ಹೊಸಬೀಡು-ತೋಳೂರುಶೆಟ್ಟಳ್ಳಿ-ಇನಕನಳ್ಳಿಯವರೆಗಿನ ರಸ್ತೆಯ ಸ್ಥಿತಿ ಆ ದೇವರಿಗೇ ಪ್ರೀತಿ ಎಂಬAತಿದ್ದು, ಈ ರಸ್ತೆಯಲ್ಲಿ ಸಾಗುವ ಬಹುತೇಕ ಮಂದಿ ಸರ್ಕಾರ ಹಾಗೂ ಲೋಕೋಪಯೋಗಿ ಇಲಾಖೆ, ಗುತ್ತಿಗೆದಾರರಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ನೂರಾರು ಗುಂಡಿಗಳು ನಿರ್ಮಾಣವಾಗಿ ಡಾಂಬರು ರಸ್ತೆಯನ್ನು ಹುಡುಕುವಂತಹ ಸ್ಥಿತಿ ನಿರ್ಮಾಣವಾಗಿದೆ. ಆಲೇಕಟ್ಟೆಯ ಸಿದ್ದೇಶ್ವರ ಟಯರ್ ವರ್ಕ್ಸ್ನಿಂದ ಕೂಡುರಸ್ತೆ ಜಂಕ್ಷನ್‌ವರೆಗೆ ರಸ್ತೆಯ ದುಸ್ಥಿತಿ ಹೇಳತೀರದ್ದಾಗಿದೆ. ಪ್ರಸಕ್ತ ಸಾಲಿನ ಮಳೆಗಾಲ ಮುಗಿಯುತ್ತಿಲ್ಲ; ರಸ್ತೆಯ ಗುಂಡಿಗಳೂ ಮುಚ್ಚುತ್ತಿಲ್ಲ ಎಂಬAತಹ ಸ್ಥಿತಿಯಿದೆ.

ಲೋಕೋಪಯೋಗಿ ಇಲಾಖಾ ಸಚಿವರು ಪ್ರಸಕ್ತ ವರ್ಷದ ಜನವರಿ ೧೧ ರಂದು ರಸ್ತೆ ಕಾಮಗಾರಿಗೆ ತೋಳೂರುಶೆಟ್ಟಳ್ಳಿಯಲ್ಲಿ ಭೂಮಿ ಪೂಜೆ ನೆರವೇರಿಸಿದ್ದರು. ತಕ್ಷಣದಿಂದಲೇ ಕಾಮಗಾರಿ ಆರಂಭಿಸಿದ್ದರೆ ಇಷ್ಟರಲ್ಲಾಗಲೇ ಬಹುಪಾಲು ಕೆಲಸ ಪೂರ್ಣಗೊಳ್ಳುತ್ತಿತ್ತು.

ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ವತಿಯಿಂದ ಸೋಮವಾರಪೇಟೆ ಪಟ್ಟಣದಿಂದ ತೋಳೂರುಶೆಟ್ಟಳ್ಳಿ ಮಾರ್ಗವಾಗಿ ಕೂತಿ ಮೂಲಕ ಹಾಸನ ಜಿಲ್ಲೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿಗೆ ೨೦ ಕೋಟಿ ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿ ಸೂಕ್ತವಲ್ಲದ ಸಮಯದಲ್ಲಿ ಆರಂಭಿಸಿದ್ದಕ್ಕೆ ಈ ಭಾಗದ ಜನರು ದಿನಂಪ್ರತಿ ಸಂಚಾರದ ಸಮಸ್ಯೆ ಎದುರಿಸುವಂತಾಗಿದೆ.

ಹೆಚ್.ಎಸ್.ಡಿ.ಪಿ. ಯೋಜನೆಯಡಿ ಬೆಂಗಳೂರು-ಜಾಲ್ಸೂರು ರಾಜ್ಯ ಹೆದ್ದಾರಿ ೮೫ಕ್ಕೆ ಒಳಪಡುವ ಸೋಮವಾರಪೇಟೆ-ತೋಳೂರುಶೆಟ್ಟಳ್ಳಿ-ಕೂತಿ ರಸ್ತೆಯನ್ನು ಈಗಾಗಲೇ ಕೆಲ ಭಾಗದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಪಟ್ಟಣದ ವಿವೇಕಾನಂದ ವೃತ್ತದಿಂದ ಆಲೇಕಟ್ಟೆವರೆಗೆ ಕಳೆದ ೪ ವರ್ಷದ ಹಿಂದೆ ಸಿಮೆಂಟ್ ರಸ್ತೆ ನಿರ್ಮಿಸಿದ್ದು, ಮುಂದುವರೆದ ೭.೨೪ ಕಿ.ಮೀ. ರಸ್ತೆಯನ್ನು ಮೇಲ್ದರ್ಜೆಗೇರಿಸಲು ೨೦ ಕೋಟಿ ಅನುದಾನ ಒದಗಿಸಲಾಗಿದ್ದು, ಕಾಮಗಾರಿ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಸಾಗುತ್ತಿಲ್ಲ.

ಕೆಲವೆಡೆ ಮೋರಿಗಳಿಗೆ ಪೈಪ್‌ಗಳನ್ನು ಹಾಕಿದ್ದು, ಅಲ್ಲಲ್ಲಿ ವೆಟ್‌ಮಿಕ್ಸ್ ದಾಸ್ತಾನಿರಿಸಲಾಗಿದೆ. ಜನವರಿ ಎರಡನೇ ವಾರದಿಂದಲೇ ಕಾಮಗಾರಿ ಆರಂಭಗೊAಡಿದ್ದರೆ, ಮಳೆಗಾಲದೊಳಗೆ ಪೂರ್ಣಗೊಳ್ಳುತ್ತಿತ್ತು. ಆದರೆ ನಿರ್ಲಕ್ಷö್ಯ, ಬೇಜವಾಬ್ದಾರಿಯಿಂದ ತಡವಾಗಿ ಕಾಮಗಾರಿ ಆರಂಭಗೊAಡು ಇದೀಗ ಮಳೆಯಾಗುತ್ತಿರುವ ಹಿನ್ನೆಲೆ ಕಾಮಗಾರಿ ಸ್ಥಗಿತಗೊಂಡಿದೆ.

ಈ ಹಿಂದೆ ಇದ್ದ ರಸ್ತೆಯನ್ನು ಕೆಲವೆಡೆ ಅಗೆದು ವೆಟ್‌ಮಿಕ್ಸ್ ಹಾಕಿದ್ದು, ಮಳೆಗೆ ಭಾರೀ ಪ್ರಮಾಣದ ಗುಂಡಿಗಳು ನಿರ್ಮಾಣವಾಗಿದೆ. ಚರಂಡಿಗಳು ಮುಚ್ಚಿರುವುದರಿಂದ ಮಳೆ ನೀರು ರಸ್ತೆಯ ಮೇಲೆಯೇ ನಿಲುಗಡೆಯಾಗುತ್ತಿದೆ. ಈ ಹಿಂದೆ ಇದ್ದ ಸಣ್ಣಪುಟ್ಟ ಗುಂಡಿಗಳು ಇದೀಗ ದೊಡ್ಡ ಹೊಂಡಗಳಾಗಿ ಪರಿವರ್ತನೆಯಾಗಿವೆ.

ದಿನಂಪ್ರತಿ ಈ ರಸ್ತೆಯಲ್ಲಿ ಶಾಲಾ ವಾಹನಗಳು, ಖಾಸಗಿ ಹಾಗೂ ಸರ್ಕಾರಿ ಬಸ್‌ಗಳು, ಖಾಸಗಿ ವಾಹನಗಳು ಸಾವಿರಾರು ಸಂಖ್ಯೆಯಲ್ಲಿ ಸಾಗುತ್ತಿರುತ್ತವೆ. ರಸ್ತೆಯಲ್ಲಿನ ಗುಂಡಿಗಳನ್ನು ತಪ್ಪಿಸಲು ಹೋಗಿ ಅವಘಡಗಳೂ ಸಂಭವಿಸಿವೆ. ವಾಹನ ಚಾಲಕರ ನಡುವೆ ಪರಸ್ಪರ ವಾಗ್ವಾದ ಸಾಮಾನ್ಯ ಎಂಬAತಾಗಿದೆ.

ಆದಾಗ್ಯೂ ರಸ್ತೆಯ ಗುಂಡಿಗಳಿಗೆ ತಾತ್ಕಾಲಿಕವಾಗಿ ಮುಕ್ತಿ ನೀಡುವ ಕಾರ್ಯ ಲೋಕೋಪಯೋಗಿ ಇಲಾಖೆಯಿಂದ ಆಗಿಲ್ಲ. ರಸ್ತೆಯಲ್ಲಿನ ಗುಂಡಿಗಳಿAದ ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದರೂ ಅಧಿಕಾರಿಗಳು ಕುರುಡುತನ ಪ್ರದರ್ಶಿಸುತ್ತಿದ್ದಾರೆ. ತಕ್ಷಣ ರಸ್ತೆಯ ಗುಂಡಿಗಳನ್ನು ತಾತ್ಕಾಲಿಕವಾಗಿ ಮುಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

- ವಿಜಯ್ ಹಾನಗಲ್