ಕೂಡಿಗೆ, ಸೆ. ೭: ಹೆಬ್ಬಾಲೆ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಹೆಚ್.ಟಿ. ನಾರಾಯಣ ಅಧ್ಯಕ್ಷತೆಯಲ್ಲಿ ಸಂಘದ ಸಭಾಂಗಣದಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿ ಭಾಗÀವಹಿಸಿದ್ದ ಹಾಸನ ಹಾಲು ಒಕ್ಕೂಟದ ಜಿಲ್ಲಾ ನಿರ್ದೇಶಕ ಕೆ.ಕೆ. ಹೇಮಂತ್ ಕುಮಾರ್ ಮಾತನಾಡಿ, ರೈತರು ಸಂಘಕ್ಕೆ ಗುಣಮಟ್ಟದ ಹಾಲು ಹಾಕುವುದರ ಮೂಲಕ ಸಂಘದ ಬೆಳೆವಣಿಗೆೆÀÉಗೆ ಸಹÀಕರಿಸಬೇಕು, ಮುಂದಿನ ದಿನಗಳಲ್ಲಿ ಹೆಬ್ಬಾಲೆಯಲ್ಲಿ ಹಾಸನ ಹಾಲು ಒಕ್ಕೂಟದ ವತಿಯಿಂದ ನೂತನವಾಗಿ ಹಾಲು ಶೀಥಿಲೀಕರಣ ಘಟಕವನ್ನು ಆರಂಭಿಸಲಾಗುವುದು ಎಂದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಅಧ್ಯಕ್ಷ ಹೆಚ್. ಟಿ. ನಾರಾಯಣ ಮಾತನಾಡುತ್ತಾ ಸಂಘವು ಸದಸ್ಯರ ಸಹಕಾರದೊಂದಿಗೆ ಈ ಸಾಲಿನಲ್ಲಿ ರೂ. ೪ ಲಕ್ಷದ ೪೯ ಸಾವಿರದಷ್ಟು ಲಾಭಾಂಶ ಗಳಿಸಿದೆ ಎಂದು ತಿಳಿಸಿದರು. ಸಂಘದ ವರದಿಯನ್ನು ಕಾರ್ಯದರ್ಶಿ ಹೆಚ್.ಟಿ. ದಿಲೀಪ್ ಕುಮಾರ್ ವಾಚಿಸಿದರು. ಸಂಘಕ್ಕೆ ಹೆಚ್ಚು ಹಾಲನ್ನು ಹಾಕಿದ ಸದಸ್ಯರಿಗೆ ಬಹುಮಾನವನ್ನು ನೀಡಲಾಯಿತು. ಜೊತೆಗೆ ಎಸ್.ಎಸ್‌ಎಲ್.ಸಿ. ಮತ್ತು ಪದವಿಪೂರ್ವ ತರಗತಿಯಲ್ಲಿ ಹೆಚ್ಚು ಅಂಕ ಗಳಿಸಿದ ಸದಸ್ಯರ ಮಕ್ಕಳಿಗೆ ಬಹುಮಾನವನ್ನು ವಿತರಿಸÀಲಾಯಿತು. ಈ ಸಂದರ್ಭ ಒಕ್ಕೂಟದ ವಿಸ್ತಾರಣಾಧಿಕಾರಿ ಬಿ.ವಿ. ವೀಣಾ ಪಶುಪಾಲನೆಯ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಉಪಾಧ್ಯಕ್ಷ ಹೆಚ್.ಎಂ. ಚಂದ್ರಪ್ಪ, ನಿರ್ದೇಶಕರಾದ ಹೆಚ್.ಸಿ. ಜವರಪ್ಪ, ಹೆಚ್.ಎನ್. ಮಂಜುನಾಥ, ಹೆಚ್.ಎನ್. ಲೋಕೇಶ್, ಗಣೇಶ, ಹೆಚ್.ಎಸ್. ದಿನೇಶ್, ಸೋಮಣ್ಣ, ತಿಮ್ಮಪ್ಪ, ಹೆಚ್.ಎ. ಲೋಕೇಶ್, ರಾಗಿಣಿ ಜವರಪ್ಪ, ಸಾವಿತ್ರಿ ಶ್ರೀನಿವಾಸ್, ಸಂಘದ ಕಾರ್ಯನಿರ್ವಹಣಾಧಿಕಾರಿ ಹೆಚ್.ಟಿ. ದಿಲೀಪ್ ಕುಮಾರ್ ಸೇರಿದಂತೆ ಸಂಘದ ಸದಸ್ಯರು ಹಾಜರಿದ್ದರು.