ಮಡಿಕೇರಿ, ಸೆ. ೮: ನಿನ್ನೆ ರಾತ್ರಿ ಸಂಭವಿಸಿದ ವರ್ಷದ ಮೊದಲ ಚಂದ್ರಗ್ರಹಣ ಮನಮೋಹಕ ದೃಶ್ಯ ನೀಡಿತು, ಮಡಿಕೇರಿ ನಗರದ ಮೋಡದ ವಾತಾವರಣದ ನಡುವೆಯೂ ಕೆಲ ಸಂದರ್ಭ ಮೋಡದ ಬಿಡುವು ವೇಳೆ ಕಾಣಿಸಿಕೊಂಡ ಚಂದ್ರ ಅತ್ಯಾಕರ್ಷಕವಾಗಿ ಗೋಚರಿಸಿತು. ೯:೫೬ಕ್ಕೆ ಸರಿಯಾಗಿ ಭೂಮಿಯ ನೆರಳು ಹುಣ್ಣಿಮೆ ಚಂದ್ರನನ್ನು ಆವರಿಸಲಾರಂಭಿಸಿತು. ಭೂ-ನೆರಳು ಸಂಪೂರ್ಣವಾಗಿ ಚಂದ್ರನನ್ನು ಆವರಿಸುತ್ತಿದ್ದಂತೆ ಭೂಮಿಯ ಎರಡೂ ಬದಿಗಳ ಸೂರ್ಯಾಸ್ತ-ಸೂರ್ಯೋದಯದ ಕೆಂಪಿನ ಬಣ್ಣ ಚಂದ್ರನ ಮೇಲೆ ಬಿದ್ದು ಚಂದ್ರನು ಕೆಂಪಾಗಿ ಕಂಗೊಳಿಸಿತು.
-