ಮಡಿಕೇರಿ, ಸೆ. ೯: ರೋಟರಿ ಮಡಿಕೇರಿ ವುಡ್ಸ್ ವತಿಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ಶಿಕ್ಷಣ ಕ್ಷೇತ್ರದಲ್ಲಿ ಕೊಡುಗೆ ನೀಡುತ್ತಾ ಬಂದಿರುವ ವಿವಿಧ ಶಾಲಾ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ೯ ಶಿಕ್ಷಕರನ್ನು ನೇಷನ್ ಬಿಲ್ಡರ್ ಪ್ರಶಸ್ತಿಯೊಂದಿಗೆ ಸನ್ಮಾನಿಸಲಾಯಿತು.

ರಾಖಿ ಪೂವಣ್ಣ, ಸವಿತಾ ಪ್ರಶಾಂತ್, ವೀಣಾ ದಿವಾಕರ್, ಉಷಾ ಪ್ರದೀಪ್, ಶಶಿಕಲಾ ರವೀಂದ್ರ, ಕಾವೇರಿ, ವಿದ್ಯಾ ಬಿ.ಸಿ, ಶೋಭಿತಾ ರವೀಂದ್ರ ಮತ್ತು ಡೀನಾ ಹೆಚ್.ಡಿ ಕ್ಲಬ್‌ನ ಸನ್ಮಾನಕ್ಕೆ ಪಾತ್ರರಾದರು.

ಕಾರ್ಯಕ್ರಮದಲ್ಲಿ ಮಾತನಾಡಿದ ದಿಲನ್ ಚಂಗಪ್ಪ, ವುಡ್ಸ್ ಸಂಸ್ಥೆ ಆರಂಭದಿAದಲೂ ಉತ್ತಮ ಕೆಲಸಗಳನ್ನು ಮಾಡುತ್ತಾ ಬಂದಿದೆ. ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ವೇಗವಾಗಿ ಅತ್ಯುತ್ತಮ ಕ್ಲಬ್ ಆಗುವತ್ತ ಹೆಜ್ಜೆ ಹಾಕುತ್ತಿದೆ. ಭವಿಷ್ಯದ ದಿನಗಳಲ್ಲೂ ಈ ರೀತಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ರೋಟರಿ ಜಿಲ್ಲೆಯಲ್ಲಿ ಬೆಳಗುವಂತಾಗಲಿ ಎಂದು ಹಾರೈಸಿದರು.

ಝೋನಲ್ ಲೆಫ್ಟಿನೆಂಟ್ ಕೆ.ಸಿ ಕಾರ್ಯಪ್ಪ ಮಾತನಾಡಿ, ಶಿಕ್ಷಕರು ಭವಿಷ್ಯವನ್ನು ರೂಪಿಸುತ್ತಾರೆ. ಶಿಕ್ಷಕರನ್ನು ಗುರುತಿಸಿ ಸನ್ಮಾನಿಸುವುದು ರಾಷ್ಟçಕ್ಕೆ ಕೊಡುಗೆ ನೀಡಿದಂತೆ ಎಂದು ಬಣ್ಣಿಸಿದರು. ಕ್ಲಬ್ ಸದಸ್ಯ ಪ್ರಶಾಂತ್ ಶಿಕ್ಷಕರ ದಿನಾಚರಣೆಯ ಹಿನ್ನೆಲೆಯನ್ನು ಹಂಚಿಕೊAಡರು. ಕ್ಲಬ್ ಅಧ್ಯಕ್ಷ ಕರಣ್ ಕುಂದರ್ ಮಾತನಾಡಿ, ಮುಂದಿನ ದಿನಗಳಲ್ಲಿ ಕ್ಲಬ್ ವತಿಯಿಂದ ನಡೆಸಲಾಗುವ ಯೋಜನೆಗಳ ಬಗ್ಗೆ ಮಾಹಿತಿಯನ್ನು ಹಂಚಿಕೊAಡರು. ಕ್ಲಬ್ ಕಾರ್ಯದರ್ಶಿ ಪ್ರಮಿಳಾ ಶೆಟ್ಟಿ ವರದಿ ವಾಚಿಸಿ ವಂದಿಸಿದರು. ಇದೇ ಸಂದರ್ಭ ಮನೋಹರ್ ಹಾಗೂ ವಿಸ್ಮಯಿ ಚಕ್ರವರ್ತಿಯವರನ್ನು ಕ್ಲಬ್‌ಗೆ ನೂತನ ಸದಸ್ಯರನ್ನಾಗಿ ಬರಮಾಡಿಕೊಳ್ಳಲಾಯ್ತು. ಸಭಾ ಕಾರ್ಯಕ್ರಮದ ನಂತರ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಕಾರ್ಯಕ್ರಮದಲ್ಲಿ ರೋಟರಿ ಮಿಸ್ಟಿಹಿಲ್ಸ್ನ ಅನಂತಶಯನ ಅವರು ಹಾಜರಿದ್ದು ಶುಭ ಹಾರೈಸಿದರು. ಕ್ಲಬ್‌ನ ಎಲ್ಲಾ ಸದಸ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.