ಮಡಿಕೇರಿ, ಸೆ. ೧೦: ಪ್ರತಿಷ್ಠಿತವಾಗಿರುವ ಕೊಡವ ಹಾಕಿ ಅಕಾಡೆಮಿ ತನ್ನದೇ ಆದ ಐತಿಹ್ಯವನ್ನು ಹೊಂದಿದ್ದು, ಈ ಬಾರಿ ಅಕಾಡೆಮಿಯ ಮುಂದಿನ ಆಡಳಿತ ಮಂಡಳಿ ರಚನೆಯ ವಿಚಾರ ತೀವ್ರ ಕುತೂಹಲಕಾರಿ ಕೆರಳಿಸಿದೆ.

ಅಕಾಡೆಮಿ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಎಂಬAತೆ ಚುನಾವಣೆಯ ಕಾವು ಉಂಟಾಗಿರುವುದು ಹೊಸ ಬೆಳವಣಿಗೆಯಾಗಿದೆ. ೧೯೯೭ರಲ್ಲಿ ಕೊಡವ ಕುಟುಂಬಗಳ ನಡುವೆ ಪಾಂಡAಡ ಕಪ್ ಹಾಕಿ ನಮ್ಮೆಯ ಮೂಲಕ ಕೊಡವ ಹಾಕಿ ಉತ್ಸವ ಆರಂಭಗೊAಡಿತ್ತು. ಈ ಕೌಟುಂಬಿಕ ಹಾಕಿ ಉತ್ಸವದ ಜನಕ ಎಂದು ಈ ವಿಶೇಷತೆಯ ಪಂದ್ಯಾವಳಿಯ ಪ್ರಾರಂಭಕ್ಕೆ ಕಾರಣಕರ್ತರಾದ ಪಾಂಡAಡ ಎಂ. ಕುಟ್ಟಪ್ಪ ಅವರು ಪರಿಗಣಿಸಲ್ಪಟ್ಟಿದ್ದಾರೆ.

ಕೊಡಗು ಜಿಲ್ಲೆ ಮಾತ್ರವಲ್ಲದೆ ವಿಶ್ವದಲ್ಲೇ ಸಂಚಲನ ಸೃಷ್ಟಿಸಿರುವ ಈ ಹಾಕಿ ಉತ್ಸವ ಇದೀಗ ತನ್ನ ೨೫ ವರ್ಷಗಳ ಇತಿಹಾಸದಲ್ಲಿ ಗಿನ್ನಿಸ್ ದಾಖಲೆ, ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್, ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಕೂಡ ದಾಖಲೆ ಸೃಷ್ಟಿಸಿದ್ದು, ವಿಶ್ವದ ಗಮನ ಸೆಳೆದಿರುವ ಕೊಡಗಿನ ಕೊಡವ ಜನಾಂಗದ ಅತ್ಯಂತ ಪ್ರತಿಷ್ಠಿತವಾದ ಪಂದ್ಯಾವಳಿಯಾಗಿದೆ ಈ ಕೌಟುಂಬಿಕ ಹಾಕಿ ಉತ್ಸವ. ಇದಕ್ಕಾಗಿ ರೂಪುಗೊಂಡಿರುವ ಕೊಡವ ಹಾಕಿ ಅಕಾಡೆಮಿಯ ಅಧೀನದಲ್ಲಿ ವರ್ಷಂಪ್ರತಿ ನಡೆದುಕೊಂಡು ಬರುತ್ತಿದೆ. ವಾರ್ಷಿಕವಾಗಿ ವಿವಿಧ ಕುಟುಂಬಗಳು ಈ ಪಂದ್ಯಾವಳಿಯನ್ನು ಆಯೋಜಿಸಿಕೊಂಡು ಬರುತ್ತಿದ್ದು, ವಿವಿಧ ಕುಟುಂಬಕ್ಕೆ ಹಾಕಿ ನಮ್ಮೆ ಯೋಜನೆಗೆ ಅವಕಾಶ ನೀಡುವ ಗುರುತರ ಜವಾಬ್ದಾರಿಯನ್ನು ಇದಕ್ಕೆಂದೇ ರೂಪುಗೊಂಡಿರುವ ಕೊಡವ ಹಾಕಿ ಅಕಾಡೆಮಿ ಈ ಹಿಂದಿನಿAದಲೂ ನಿರ್ವಹಿಸಿಕೊಂಡು ಬರುತ್ತಿದೆ. ೧೯೯೭ರಲ್ಲಿ ಉತ್ಸವ ಪ್ರಾರಂಭಗೊAಡಾಗ ಈ ಅಕಾಡೆಮಿ ಅಸ್ತಿತ್ವಕ್ಕೆ ಬಂದಿರಲಿಲ್ಲ. ಪಾಂಡAಡ ಕುಟ್ಟಪ್ಪ ಅವರೇ ಮುಂದಾಳತ್ವ ವಹಿಸಿದ್ದರು. ನಂತರದ ವರ್ಷ ಕೋಡಿರ ಕುಟುಂಬ ಈ ಕೌಟುಂಬಿಕ ಉತ್ಸವವನ್ನು ಮುಂದುವರಿಸಿತು. ೬೦ ತಂಡಗಳಿAದ ಪ್ರಾರಂಭಗೊAಡ ಉತ್ಸವ ದಾಖಲೆಯ ೩೯೬ ಕುಟುಂಬಗಳ ಪಾಲ್ಗೊಳ್ಳುವಿಕೆಯ ಹಂತಕ್ಕೆ ಇದೀಗ ತಲುಪಿದೆ.

ಕೋಡಿರ ಕುಟುಂಬ ೨ನೇ ವರ್ಷದ ಉತ್ಸವ ಮುಂದುವರಿಸಿದ ವೇಳೆ ಮತ್ತಷ್ಟು ಕುಟುಂಬಗಳು ಆಯೋಜನೆಗೆ ಮುಂದೆ ಬಂದವು. ಈ ಸಂದರ್ಭದಲ್ಲಿ ಇದರ ಸುಸೂತ್ರ ನಿರ್ವಹಣೆಗೆಂದು ೧೯೯೯ರಲ್ಲಿ ಕೊಡವ ಹಾಕಿ ಅಕಾಡೆಮಿಯನ್ನು ಪ್ರಾರಂಭಿಸಲಾಗಿತ್ತು. ಈ ಅಕಾಡೆಮಿ ನೋಂದಾಯಿತ ಸಂಸ್ಥೆಯಾಗಿದ್ದು ತನ್ನದೇ ಆದ ಬೈಲಾವನ್ನು ಹೊಂದಿದೆ. ಆದರೆ ಉತ್ಸವಕ್ಕೆ ಕಾರಣಕರ್ತರಾಗಿ ಇದಕ್ಕೆ ಬುನಾದಿ ಹಾಕಿದ್ದ ಪಾಂಡAಡ ಕುಟ್ಟಪ್ಪ ಅವರು ಜೀವಂತವಾಗಿರುವ ತನಕ ಸ್ಥಾಪಕ ಅಧ್ಯಕ್ಷರಾಗಿ ಅವರೇ ಮುಂದುವರೆಯುವ ನಿರ್ಧಾರವು ಆಗಿನದ್ದಾಗಿತ್ತು. ಇದು ಒಂದೆಡೆಯಾದರೆ ಭವಿಷ್ಯದಲ್ಲಿ ಅಕಾಡೆಮಿಯ ಆಡಳಿತ ಮಂಡಳಿಗೆ ಚುನಾವಣೆ ನಡೆಸಲು ಬೈಲಾದಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಕೊರೋನಾ ಸಂದರ್ಭದಲ್ಲಿ ಪಾಂಡAಡ ಕುಟ್ಟಪ್ಪ ಅವರು ಇಹಲೋಕ ತ್ಯಜಿಸಿದ್ದು, ಇದರ ನಂತರದಲ್ಲಿ ಅವರ ಪುತ್ರ ಪಾಂಡAಡ ಕೆ. ಬೋಪಣ್ಣ ಅವರು ಅಕಾಡೆಮಿಯ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡು ಈ ಜವಾಬ್ದಾರಿಯನ್ನು ಈತನಕ ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದಾರೆ. ಈ ಹಿಂದೆ ಕುಟ್ಟಪ್ಪ ಅವರು ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಕಾಳೇಂಗಡ ರಮೇಶ ಅವರು ಕಾರ್ಯಾಧ್ಯಕ್ಷರಾಗಿದ್ದರು. ಇನ್ನಿತರ ಪದಾಧಿಕಾರಿಗಳು ಜೊತೆಗಿದ್ದ ಅಕಾಡೆಮಿಯ ಜವಾಬ್ದಾರಿ ನಿಭಾಯಿಸಿಕೊಂಡು ಬಂದಿದ್ದರು. ಕುಟ್ಟಪ್ಪ ಅವರು ಕಣ್ಮರೆಯಾದ ಬಳಿಕ ಪುತ್ರ ಬೋಪಣ್ಣ ಅವರು ಅಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸಿಕೊಂಡು ಮುನ್ನಡೆಸಿದ್ದರು. ೪ಏ¼ ಈ ಅವಧಿಯಲ್ಲಿ ಮೇಕೇರಿರ ರವಿ ಪೆಮ್ಮಯ್ಯ ಅವರು ಕಾರ್ಯಾಧ್ಯಕ್ಷರಾಗಿದ್ದು ಈತನಕ ಇವರ ತಂಡ ಅಕಾಡೆಮಿಯಲ್ಲಿ ಅಧಿಕಾರದಲ್ಲಿತ್ತು.

ಇದೀಗ ಕಳೆದ ಮೇ ತಿಂಗಳಲ್ಲಿ ಈಗಿನ ಆಡಳಿತ ಮಂಡಳಿಯ ಅಧಿಕಾರ ಅವಧಿ ಪೂರ್ಣಗೊಂಡಿದೆ, ನಂತರದಲ್ಲಿ ವಾರ್ಷಿಕ ಪಂದ್ಯಾವಳಿ ಇದ್ದ ಕಾರಣದಿಂದಾಗಿ ಚುನಾವಣೆ ನಡೆದಿರಲಿಲ್ಲ.

ಆ ಬಳಿಕ ಆಗಸ್ಟ್ ೩೧ಕ್ಕೆ ಚುನಾವಣೆ ನಿಗದಿಯಾಗಿ ಚುನಾವಣೆ ಪ್ರಕ್ರಿಯೆ ನಡೆದಿತ್ತು. ಆದರೆ, ಈ ಸಂದರ್ಭದಲ್ಲಿ ಕೆಲವೊಂದು ಗೊಂದಲಗಳು ಉಂಟಾಗಿದ್ದ ಕಾರಣ, ಕಾರಣಾಂತರಗಳಿAದ ಚುನಾವಣೆಯನ್ನು ಮುಂದೂಡಲಾಗಿತ್ತು. ಚುನಾವಣಾಧಿಕಾರಿಯಾಗಿ ನಿವೃತ್ತಿಗೊಂಡಿದ್ದ ಚೋಕಿರ ಪೂವಯ್ಯ ಅವರ ನಿರ್ದೇಶನದಂತೆ ಚುನಾವಣೆ ಮುಂದೂಡಲಾಗಿತ್ತು.

ಇದೀಗ ಸೆ. ೨೮ಕ್ಕೆ ನಿಗದಿ

ಕೊಡವ ಹಾಕಿ ಅಕಾಡೆಮಿಯ ಮುಂದಿನ ೩ ವರ್ಷಗಳ ಅವಧಿಯ ಹೊಸ ಆಡಳಿತ ಮಂಡಳಿಗೆ ಇದೀಗ ಸೆ.೨೮ಕ್ಕೆ ಚುನಾವಣೆ ನಿಗದಿಪಡಿಸಲಾಗಿದ್ದು, ಇದಕ್ಕೆ ಸಂಬAಧಿಸಿದ ಪ್ರಕ್ರಿಯೆಗಳು ಅಧಿಕೃತವಾಗಿ ಪ್ರಾರಂಭಗೊಳ್ಳುತ್ತಿವೆ. ವಿಶೇಷವೆಂದರೆ ಈ ಬಾರಿ ಆಡಳಿತ ಮಂಡಳಿಗೆ ಭಾರೀ ಪೈಪೋಟಿ ಕಂಡುಬರುತ್ತಿದೆ. ೧೯೯೯ರಲ್ಲಿ ಅಕಾಡೆಮಿ ಪ್ರಾರಂಭಗೊAಡ ನಂತರ ಈ ತನಕ ಅವಿರೋಧ ಆಯ್ಕೆ ನಡೆದಿತ್ತ ವಿನಾಃ ಚುನಾವಣೆ ನಡೆದಿರಲಿಲ್ಲ. ಆದರೆ, ಈ ಬಾರಿ ಪರಿಸ್ಥಿತಿ ವಿಭಿನ್ನ ತಿರುವು ಕಾಣುತ್ತಿದೆ.

ಹೊಸ ಆಡಳಿತ ಮಂಡಳಿಗೆ ಎರಡು ತಂಡಗಳು ಸ್ಪರ್ಧೆಗಿಳಿಯುವುದು ಬಹುತೇಕ ಖಚಿತವಾಗಿದೆ. ಹಾಲಿ ಅಧ್ಯಕ್ಷ ಪಾಡಂಡ ಕೆ. ಬೋಪಣ್ಣ ನೇತೃತ್ವದ ಒಂದು ತಂಡ ಹಾಗೂ ಕಾರ್ಯಾಧ್ಯಕ್ಷರಾಗಿರುವ ಮೇಕೇರಿರ ರವಿ ಪೆಮ್ಮಯ್ಯ ನೇತೃತ್ವದ ಮತ್ತೊಂದು ತಂಡ ಸ್ಪರ್ಧೆಯಲ್ಲಿದೆ. ಈಗಾಗಲೇ ಪಾಂಡAಡ ಬೋಪಣ್ಣ ನೇತೃತ್ವದ ತಂಡ ಹಾಗೂ ರವಿ ಪೆಮ್ಮಯ್ಯ ನೇತೃತ್ವದ ತಂಡ ಸಿದ್ಧವಾಗಿದೆ.

ಒಂದು ತಂಡದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬೋಪಣ್ಣ, ಕಾರ್ಯಾಧ್ಯಕ್ಷ ಸ್ಥಾನಕ್ಕೆ ಮಾಜಿ ಒಲಂಪಿಯನ್ ಚೆಪ್ಪುಡಿರ ಎಸ್. ಪೂಣಚ್ಚ, ಉಪಾಧ್ಯಕ್ಷ ಸ್ಥಾನಕ್ಕೆ ಮಡಿಕೇರಿ ತಾಲೂಕಿನಿಂದ ಕುಂಡ್ಯೋಳAಡ ರಮೇಶ್ ಮುದ್ದಯ್ಯ, ವೀರಾಜಪೇಟೆ ತಾಲೂಕಿನಿಂದ ಕೂತಂಡ ಸುರೇಶ್ ಅಪ್ಪಯ್ಯ ಸ್ಪರ್ಧೆ ಮಾಡುತ್ತಿದ್ದಾರೆ. ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಕುಲ್ಲೇಟಿರ ಅರುಣ್ ಬೇಬ, ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ನಾಯಕಂಡ ದೀಪು ಚಂಗಪ್ಪ ಹಾಗೂ ನಿರ್ದೇಶಕ ಸ್ಥಾನಕ್ಕೆ ಮುಕ್ಕಾಟಿರ ಬಿ. ಸೋಮಯ್ಯ, ಕಂಬೀರAಡ ರಾಖಿ ಪೂವಣ್ಣ, (ಮಹಿಳೆ) ಬೊಳ್ಳೆಪಂಡ ಜೆ. ಕಾರ್ಯಪ್ಪ, ಕಲಿಯಂಡ ಸಂಪನ್ ಅಯ್ಯಪ್ಪ, ಚೆಕ್ಕೇರ ಆದರ್ಶ್, ಸುಳ್ಳಿಮಾಡ ದೀಪಕ್ ಮೊಣ್ಣಪ್ಪ, ಮುದ್ದಂಡ ರಶಿನ್ ಸುಬ್ಬಯ್ಯ, ಮಂಡೇಪAಡ ಮುಖೇಶ್ ಮೊಣ್ಣಯ್ಯ ಸ್ಪರ್ಧೆಯಲ್ಲಿರುವುದಾಗಿ ತಿಳಿದುಬಂದಿದೆ.

ಮೇಕೇರಿರ ರವಿ ಪೆಮ್ಮಯ್ಯ ನೇತೃತ್ವದಲ್ಲಿ ಇನ್ನೊಂದು ತಂಡದ ಸ್ಪರ್ಧೆಯೂ ಖಚಿತವಾಗಿದೆ. ಈ ಬಗ್ಗೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿರುವ ರವಿ ಪೆಮ್ಮಯ್ಯ ಅವರು, ಒಂದೆರೆಡು ದಿನದಲ್ಲಿ ತಮ್ಮ ಗುಂಪಿನ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಿರುವುದಾ