ಗೋಣಿಕೊಪ್ಪಲು, ಸೆ. ೧೨: ಅಖಿಲ ಅಮ್ಮ ಕೊಡವ ವಿದ್ಯಾಭಿವೃದ್ಧಿ ಸಂಘದ ವತಿಯಿಂದ ಜನಾಂಗದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪ್ರತಿ ವರ್ಷದಂತೆ ಪ್ರಸ್ತುತ ವರ್ಷವೂ ಪ್ರೋತ್ಸಾಹ ಧನ ನೀಡಲಾಗುವುದು.
೭ನೇ ತರಗತಿ ಮೇಲ್ಪಟ್ಟ ಜನಾಂಗದ ವಿದ್ಯಾರ್ಥಿಗಳು ಅಂಕಪಟ್ಟಿ ಮತ್ತು ವ್ಯಾಸಂಗ ಮಾಡುತ್ತಿರುವ ಬಗ್ಗೆ ಶಾಲೆಯಿಂದ ದೃಢೀಕರಣ ಪತ್ರ ಅಥವಾ ಶುಲ್ಕ ಪಾವತಿಸಿದ ನಕಲು ಪ್ರತಿಯೊಂದಿಗೆ ಸಂಘದ ನಿಗದಿತ ಅರ್ಜಿ ನಮೂನೆಯಲ್ಲಿ ಅರ್ಜಿಯನ್ನು ಭರ್ತಿ ಮಾಡಿ ತಾ. ೩೦ ರೊಳಗಾಗಿ ಆಯಾ ಗ್ರಾಮದಲ್ಲಿನ ಸಂಘದ ಪ್ರತಿನಿಧಿಗಳಿಗೆ ಅಥವಾ ವಾಸುವರ್ಮ, ಗೌರವ ಕಾರ್ಯದರ್ಶಿ, ಜೋಡುಬೀಟಿ ಅಂಚೆ ಪೊನ್ನಂಪೇಟೆ ಈ ವಿಳಾಸಕ್ಕೆ ಕಳುಹಿಸಬಹುದಾಗಿದೆ ಎಂದು ಸಂಘದ ಅಧ್ಯಕ್ಷ ನಾಳಿಯಮ್ಮಂಡ ಉಮೇಶ್ ಕೇಚಮಯ್ಯ ತಿಳಿಸಿದ್ದಾರೆ.