ಮಡಿಕೇರಿ, ಸೆ. ೨೩: ಕೊಡಗು ಜಿಲ್ಲಾ ವಾಣಿಜ್ಯೋದ್ಯಮಿಗಳ ವಿವಿಧೋದ್ದೇಶ ಸಹಕಾರ ಸಂಘವು ೩೧-೩-೨೦೨೫ರ ಅಂತ್ಯಕ್ಕೆ ರೂ. ೨೧,೦೮,೯೧೦.೯೩ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಕೆ.ಬಿ. ಗಿರೀಶ್ ಗಣಪತಿ ತಿಳಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘವು ತಾ. ೨೨.೧೨.೨೦೦೨ರಂದು ಪ್ರಾರಂಭಗೊAಡು ಸುಮಾರು ೨೩ ವರ್ಷದಿಂದ ತನ್ನ ಸ್ವಂತ ಬಂಡವಾಳದಿAದ ವ್ಯವಹಾರ ನಡೆಸುತ್ತಾ ಬಂದಿದೆ. ತಾ.೩೧.೦೩.೨೦೨೫ಕ್ಕೆ ನಮ್ಮ ಸಂಘದಲ್ಲಿ ಒಟ್ಟು ೧೮೭೯ ಸದಸ್ಯರಿದ್ದಾರೆ. ಸದಸ್ಯರಿಂದ ಒಟ್ಟು ರೂ. ೯೦,೨೦,೦೦೦ ಪಾಲು ಬಂಡವಾಳ ಸಂಗ್ರಹವಾಗಿದೆ. ಸಂಘದಲ್ಲಿ ಅಡಮಾನ ಸಾಲ, ಜಾಮೀನು ಸಾಲ, ಆಭರಣ ಸಾಲ, ಪಿಗ್ಮಿ ಓವರ್‌ಡ್ರಾಪ್ಟ್ ಸಾಲ, ಸ್ವ-ಸಹಾಯ ಸಂಘಗಳಿಗೆ ಸಾಲ ಮತ್ತು ಆಸಾಮಿ ಸಾಲ ನೀಡಲಾಗುತ್ತಿದೆ.ತಾ. ೩೧.೦೩.೨೦೨೫ರ ಅಂತ್ಯಕ್ಕೆ ವಿವಿಧ ಠೇವಣಾತಿಗಳಿಂದ ರೂ. ೩೧,೧೪,೭೬,೭೭೦ ಠೇಣಾವತಿ ಸಂಗ್ರಹಿಸಲಾಗಿzಹಾಗೂ ರೂ. ೧೦,೩೭,೪೭,೫೫೪ ವಿವಿಧ ಸಾಲ ನೀಡಲಾಗಿದೆ. ಅಲ್ಲದೆ ಸಂಘವು ೨೦೦೬-೦೭ನೇ ಸಾಲಿನಿಂದ ಲಾಭದಲ್ಲಿ ನಡೆಯುತ್ತಿದೆ. ಸಂಘದ ರೂ. ೧,೨೭,೧೧,೮೧೨ ಕ್ಷೇಮ ನಿಧಿಯನ್ನು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನಲ್ಲಿ ಹೂಡಿಕೆ ಮಾಡಲಾಗಿದೆ ಎಂದು ಗಿರೀಶ್ ಗಣಪತಿ ತಿಳಿಸಿದರು.
೨೦೧೪-೧೫ನೇ ಸಾಲಿನಲ್ಲಿ ಇಲಾಖಾ ಅನುಮತಿ ಪಡೆದು ಮಡಿಕೇರಿ ನಗರದ ಕೊಹಿನೂರು ರಸ್ತೆಯಲ್ಲಿ ಸಂಘಕ್ಕೆ ಒಂದು ಸ್ವಂತ ಕಟ್ಟಡವನ್ನು ಖರೀದಿಸಲಾಗಿದೆ ಹಾಗೂ ೨೦೧೬-೧೭ನೇ ಸಾಲಿನಲ್ಲಿ ಸಹಕಾರ ಸಂಘಗಳ ಜಂಟಿ ನಿಬಂಧಕರು, ಮೈಸೂರು ಇವರ ಅನುಮತಿ ಪಡೆದು, ಸಂಘದ ಸದಸ್ಯರ ಸಹಕಾರದೊಂದಿಗೆ ಈ ಹಿಂದೆ ಇದ್ದ ಕಟ್ಟಡದ ಮೇಲೆ ಇನ್ನೊಂದು ಅಂತಸ್ಥನ್ನು ನಿರ್ಮಾಣ ಮಾಡಲಾಗಿದೆ. ಸಂಘದ ಸ್ವಂತ ಕಟ್ಟಡಕ್ಕೆ ಯಾವುದೇ ರೀತಿಯ ಸಾಲವಿರುವುದಿಲ್ಲ. ಸಂಘದ ಸ್ವಂತ ಬಂಡವಾಳದಿAದ ಕಟ್ಟಡವನ್ನು ಖರೀದಿಸಲಾಗಿದೆ.
ಸಂಘವು ಎರಡು ಶಾಖೆಗಳನ್ನು ಹೊಂದಿದೆ. ಸದಸ್ಯರಿಗೆ ಅನುಕೂಲವಾಗುವ ದೃಷ್ಟಿಯಿಂದ ೨೦೦೭ನೇ ಡಿಸೆಂಬರ್ ತಿಂಗಳಲ್ಲಿ ಕುಶಾಲನಗರದಲ್ಲಿ ಹಾಗೂ ೨೦೧೨ರಲ್ಲಿ ಸಿದ್ದಾಪುರದಲ್ಲಿ ಸಂಘದ ಮತ್ತೊಂದು ಶಾಖೆಯನ್ನು ಪ್ರಾರಂಭಿಸಲಾಗಿದೆ. ಎರಡೂ ಶಾಖೆಗಳ ವ್ಯವಹಾರವು ಲಾಭದಲ್ಲಿ ನಡೆಯುತ್ತಿದೆ.
ಸಂಘದಲ್ಲಿ ಒಟ್ಟು ೨೦ ಜನ ಪಿಗ್ಮಿ ಸಂಗ್ರಹಗಾರರು ಜಿಲ್ಲೆಯ ಹಲವು ಕಡೆಗಳಲ್ಲಿ ದಿನನಿತ್ಯ ಪಿಗ್ಮಿ ಠೇವಣಿ ಸಂಗ್ರಹಿಸುತ್ತಿದ್ದಾರೆ. ಸಂಘದಲ್ಲಿ ನಿರಖು ಠೇವಣಿಗಳಿಗೆ ಹೆಚ್ಚಿಗೆ ಬಡ್ಡಿ ದರವನ್ನು ನೀಡಲಾಗುತ್ತಿದೆ.
ಸಂಘದ ೨೦೨೪-೨೫ನೇ ಸಾಲಿನ ೨೪ನೇ ವಾರ್ಷಿಕ ಮಹಾಸಭೆ ತಾ. ೨೫ರಂದು (ನಾಳೆ) ಪೂರ್ವಾಹ್ನ ೧೧ ಗಂಟೆಗೆ ಮಡಿಕೇರಿ ನಗರದಲ್ಲಿರುವ ಸಂಘದ ಸ್ವಂತ ಕಟ್ಟಡದ ಸಭಾಂಗಣದಲ್ಲಿ ತನ್ನ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಗಿರೀಶ್ ಗಣಪತಿ ಮಾಹಿತಿಯಿತ್ತರು.
ಗೋಷ್ಠಿಯಲ್ಲಿ ಸಂಘದ ಮಾಜಿ ಅಧ್ಯಕ್ಷ ಕೆ.ಎಂ.ಬಿ. ಗಣೇಶ್, ನಿರ್ದೇಶಕರಾದ ಮುನೀರ್ ಅಹ್ಮದ್, ಪಿ. ಚಂದ್ರಶೇಖರ್, ಕಾಶಿ ಕಾವೇರಪ್ಪ, ಸಿಇಓ ಶ್ಯಾಮಲ ಉಪಸ್ಥಿತರಿದ್ದರು.