ವೀರಾಜಪೇಟೆ, ಸೆ. ೨೪: ಕೊಡವ ಕ್ರಿಕೆಟ್ ಅಕಾಡೆಮಿ ವತಿಯಿಂದ ಕೊಡಗಿನಲ್ಲಿರುವ ಅಂತರ ಕೊಡವ ಸಮಾಜಗಳ ನಡುವೆ ನಡೆಸುತ್ತಿರುವ ಮೂರನೇ ವರ್ಷದ ಲೆದರ್‌ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಅಕ್ಟೋಬರ್ ೧೯ರಿಂದ ೨೨ರವರೆಗೆ ವೀರಾಜಪೇಟೆಯ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಸಲಾಗುವುದು ಎಂದು ಕೊಡವ ಕ್ರಿಕೆಟ್ ಅಕಾಡೆಮಿಯ ಅಧ್ಯಕ್ಷ ಕೀತಿಯಂಡ ಕಾರ್ಸನ್ ಕಾರ್ಯಪ್ಪ ವೀರಾಜಪೇಟೆಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕೊಡವ ಕ್ರಿಕೆಟ್ ಅಕಾಡೆಮಿಯ ಉಪಾಧ್ಯಕ್ಷ ಚೇರಂಡ ಕಿಶನ್ ಪೂವಯ್ಯ ಮಾತನಾಡಿ, ೧೯೯೬ರಲ್ಲಿ ಪ್ರಾರಂಭಗೊAಡ ಕೊಡವ ಕ್ರಿಕೆಟ್ ಅಕಾಡೆಮಿ ಕೊಡವ ಕುಟುಂಬಗಳ ನಡುವೆ ಟಿನ್ನಿಸ್‌ಬಾಲ್ ಕ್ರಿಕೆಟ್ ಪಂದ್ಯಾವಳಿಗಳನ್ನು ನಡೆಸುತ್ತಾ ಬರುತ್ತಿದೆ. ಅದರ ಜೊತೆಗೆ ಕಳೆದ ಮೂರು ವರ್ಷಗಳಿಂದ ಅಕಾಡೆಮಿ ಮೂಲಕ ಕೊಡಗಿನಲ್ಲಿರುವ ಕೊಡವ ಸಮಾಜಗಳ ಮೂಲಕÀ ಲೆದರ್‌ಬಾಲ್ ಕಿಕ್ರೆಟ್ ಪಂದ್ಯಾಟವನ್ನು ನಡೆಸಲಾಗುತ್ತಿದೆ. ಮೊದಲ ವರ್ಷ ವೀರಾಜಪೇಟೆಯ ಜೂನಿಯರ್ ಕಾಲೇಜು ಮೈದಾನ, ಎರಡನೇ ವರ್ಷ ಬಾಳೆಲೆ ವಿಜಯಲಕ್ಷಿö್ಮ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಸಲಾಗಿತ್ತು. ಕಳೆದ ಎರಡು ವರ್ಷ ನಡೆಸಿದ ಪಂದ್ಯಾವಳಿಯಲ್ಲಿ ೧೨೫ಕ್ಕೂ ಹೆಚ್ಚು ಆಟಗಾರರು ಭಾಗವಹಿಸಿದ್ದಾರೆ. ಈಗಾಗಲೇ ೧೦ ಕೊಡವ ಸಮಾಜಗಳು ತಮ್ಮ ಹೆಸರನ್ನು ನೋಂದಾಯಿಸಿಕೊAಡಿವೆ. ಹೆಸರು ನೋಂದಾಯಿಸಲು ಅಕ್ಟೋಬರ್ ೧೦ ಕೊನೆಯ ದಿನವಾಗಿದೆ ಎಂದರು. ಈ ಪಂದ್ಯಾವಳಿಯಲ್ಲಿ ಭಾಗವಹಿಸುವ ಆಟಗಾರರು ಕೊಡವರಾಗಿರಬೇಕು. ಒಂದು ತಂಡದಲ್ಲಿ ಇಬ್ಬರು ಕೊಡವ ಅತಿಥಿ ಆಟಗಾರರನ್ನು ಸೇರಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಕೊಡಗಿನ ನಿವಾಸಿ ಹಾಗು ಕೊಡವರೆಂದು ಖಾತ್ರಿ ಪಡಿಸಲು ಆಟಗಾರರು ತಮ್ಮ ಆಧಾರ್ ಕಾರ್ಡ್ನ ಪ್ರತಿಯನ್ನು ಸಲ್ಲಿಸಬೇಕು. ಕೊಡಗಿನ ಆಟಗಾರರು ಜಿಲ್ಲೆಯ ಯಾವುದೇ ಕೊಡವ ಸಮಾಜಕ್ಕೆ ಆಡಬಹುದಾಗಿದೆ. ಕಳೆದೆರಡು ವರ್ಷ ನಡೆಸಿದ ಪಂದ್ಯಾವಳಿಯಿAದ ಹಲವಾರು ಪ್ರತಿಭೆಗಳು ಹೊರಬಂದಿದ್ದು ಮುಂದಿನ ದಿನಗಳಲ್ಲಿ ರಾಜ್ಯ ಹಾಗೂ ರಾಷ್ಟಿçÃಯ ತಂಡಗಳಲ್ಲಿ ಕೊಡವ ಆಟಗಾರರು ಆಡುವಂತಾಗಬೇಕು ಎಂಬುದು ನಮ್ಮ ಆಶಯವಾಗಿದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಕಾರ್ಯದರ್ಶಿ ಕುಂಡ್ರAಡ ಬೋಪಣ್ಣ, ಖಜಾಂಚಿ ಕೊಕ್ಕೆಂಗಡ ರಾಜನ್, ನಿರ್ದೇಶಕರುಗಳಾದ ಪಟ್ಟಡ ಪ್ರಕಾಶ್, ಬಾಳೇಯಡ ಪ್ರತೀಶ್ ಪೂವಯ್ಯ, ಕೊಟ್ಟಂಗಡ ಸೂರಜ್ ಮಾದಪ್ಪ, ಅವರೆಮಾದಂಡ ಶರಣ್ ಉಪಸ್ಥಿತರಿದ್ದರು.