ಚೆಯ್ಯಂಡಾಣೆ, ಸೆ. ೨೪: ಕೊಳಕೇರಿಯಲ್ಲಿ ಎಸ್.ಎಸ್.ಎಫ್. ಶಾಖೆಯ ವತಿಯಿಂದ ಎಸ್.ಎಸ್.ಎಫ್. ಧ್ವಜ ದಿನಾಚರಣೆಯನ್ನು ಆಚರಿಸಲಾಯಿತು.

ಕೊಳಕೇರಿಯಲ್ಲಿರುವ ಎಸ್.ಎಸ್.ಎಫ್. ಕಚೇರಿಯ ಆವರಣದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮೊಹಿಯುದ್ದೀನ್ ಕುಟ್ಟಿ ಹಾಜಿ ನೇತೃತ್ವದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು.

ಎಸ್.ವೈ.ಎಸ್. ಮಾಜಿ ರಾಜ್ಯಾಧ್ಯಕ್ಷರಾದ ಅಬ್ದುಲ್ ಹಫೀಲ್ ಸಅದಿಯವರು ಧ್ವಜದಿನದ ಮಹತ್ವದ ಕುರಿತು ಸಂದೇಶ ಭಾಷಣ ನಡೆಸಿದರು.

ಈ ಸಂದರ್ಭ ಕೊಳಕೇರಿ ಸುನ್ನಿ ಮುಸ್ಲಿಂ ಜಮಾಅತ್ ಸಮಿತಿ ಸದಸ್ಯರಾದ ಮೂಸ ಹಾಜಿ, ಹಾರಿಸ್, ಸಿ.ಎಂ. ಖಾಲಿದ್, ಸಿ.ಎಚ್. ಇಸ್ಮಾಯಿಲ್, ಕೊಳಕೇರಿ ಎಸ್.ಎಸ್.ಎಫ್. ಯೂನಿಟ್ ಅಧ್ಯಕ್ಷ ಸುಹೈಲ್ ಫಾಲಿಲಿ, ಎಸ್.ವೈ.ಎಸ್., ಎಸ್.ಎಸ್.ಎಫ್., ಎಸ್.ಜೆ.ಎಂ. ಕಾರ್ಯಕರ್ತರು ಉಪಸ್ಥಿತರಿದ್ದರು.