ಕಣಿವೆ, ಸೆ. ೨೭: ಕೊಡಗು ಜಿಲ್ಲೆಯಲ್ಲಿ ಪ್ರಮುಖ ಕೈಗಾರಿಕಾ ವಸಾಹತು ಪ್ರದೇಶವುಳ್ಳ ಕೂಡುಮಂಗಳೂರು ಗ್ರಾಮ ಪಂಚಾಯಿತಿಯನ್ನು ಮೇಲ್ದರ್ಜೆಗೇರಿಸಿ ಪಟ್ಟಣ ಪಂಚಾಯಿತಿಯಾಗಿ ಮಾಡಬೇಕೆಂಬುದು ಪಂಚಾಯಿತಿ ವ್ಯಾಪ್ತಿಯ ನಾಗರೀಕರ ಹಂಬಲವಾಗಿದೆ.

ಏಕೆAದರೆ ತಾಲೂಕು ಕೇಂದ್ರ ಕುಶಾಲನಗರದಿಂದ ನಾಲ್ಕು ಕಿಮೀ ಗೂ ಹೆಚ್ಚು ಅಂತರದಲ್ಲಿರುವ ಈ ಕೂಡುಮಂಗಳೂರು ಗ್ರಾಮ ಸುತ್ತಲಿನ ೧೫ ಕ್ಕೂ ಹೆಚ್ಚಿನ ಗ್ರಾಮಗಳನ್ನು ತನ್ನ ಸುಪರ್ದಿಯಲ್ಲಿ ಒಳಗೊಂಡಿರುವ ಕೇಂದ್ರ ಸ್ಥಾನದ ಮುಖ್ಯ ಗ್ರಾಮ. ಇದುವರೆಗೂ ಇದ್ದಂತಹ ಗ್ರಾ.ಪಂ. ಸಾಕು. ಈಗ ಸಹಜವಾಗಿಯೇ ಹಲವು ಬದಲಾವಣೆಗಳಿಗೆ ತಕ್ಕಂತೆ ಪಟ್ಟಣ ಪಂಚಾಯಿತಿ ರಚನೆಯಾಗಬೇಕು.

ಗ್ರಾಮಗಳ ಜನರ ಸಮಸ್ಯೆಗಳನ್ನು ಪರಿಹರಿಸುವ ಯೋಜನೆಗಳು ಹೊಸದಾಗಿ ಅನುಷ್ಠಾನವಾಗಬೇಕು. ಹಾಗಾಗಿ ಪಟ್ಟಣ ಪಂಚಾಯಿತಿ ಬೇಕು ಎಂಬ ಹಕ್ಕೊತ್ತಾಯವನ್ನು ಇಲ್ಲಿನ ಜನ ಪಕ್ಷಾತೀತವಾಗಿ ಜಿಲ್ಲಾಡಳಿತಕ್ಕೆ ಮಂಡಿಸುತ್ತಲೇ ಬಂದಿದ್ದಾರೆ.

ಗ್ರಾಮದ ಅಭಿವೃದ್ಧಿ ಚಿಂತಕರಾದ ಕೆ. ವರದ ನೇತೃತ್ವದಲ್ಲಿ ಈಗಾಗಲೇ ಪಟ್ಟಣ ಪಂಚಾಯಿತಿ ರೂಪಿಸಲು ಆಗ್ರಹಿಸಿ ಪಂಚಾಯಿತಿ ಬಳಿ ಹಲವು ಪೂರ್ವಭಾವಿ ಸಭೆಗಳು, ಹೋರಾಟಗಳು ನಡೆದಿವೆ. ಅದಾಗ್ಯೂ ಚುನಾಯಿತರು ಮಾತ್ರ ಈ ಬಗ್ಗೆ ಚಕಾರ ಎತ್ತುತ್ತಿಲ್ಲ.

ಪಟ್ಟಣ ಪಂಚಾಯಿತಿಗೆ ಎಲ್ಲಾ ಅರ್ಹತೆಗಳಿವೆ :

ಕೂಡುಮಂಗಳೂರು ಗ್ರಾಪಂ ಅನ್ನು ಗ್ರಾಮ ಪಂಚಾಯಿತಿಯಿAದ ಪಟ್ಟಣ ಪಂಚಾಯಿತಿಗೆ ಮೇಲ್ದರ್ಜೆಗೆ ಏರಿಸಲೆಬೇಕಾದ ಎಲ್ಲಾ ಅವಕಾಶ ಹಾಗೂ ಅರ್ಹತೆಗಳಿವೆ.

ಕರ್ನಾಟಕ ಪುರಸಭೆ ಕಾಯಿದೆ ೧೯೬೪ರ ನಿಯಮ ೩೪೯ರ ಅನುಸಾರ ಅಗತ್ಯವುಳ್ಳು ಎಲ್ಲಾ ಅರ್ಹತೆಗಳು ಹಾಗೂ ವಸ್ತುನಿಷ್ಠವಾದ ಸಕಾರಣಗಳು ಈ ಪಂಚಾಯಿತಿಗೆ ಇದೆ.

ಪ್ರಸಕ್ತ ಒಟ್ಟು ೨೪ ಸದಸ್ಯ ಬಲವಿರುವ ಕೂಡುಮಂಗಳೂರು ಗ್ರಾ.ಪಂ. ೨೭೧೪.೧೬ ಹೆಕ್ಟೇರ್ ಭೂ ಪ್ರದೇಶ ಹೊಂದಿದೆ. ಇದರೊಂದಿಗೆ ೮೩೪ ಹೆಕ್ಟೇರ್ ಸಾಗುವಳಿ ಭೂಮಿ, ೧೫೦ ಹೆಕ್ಟೇರ್ ಅರಣ್ಯ ಭೂಮಿ, ೧೨೦ ಹೆಕ್ಟೇರ್ ಇತರೇ ಭೂಮಿಯನ್ನು ಒಳಗೊಂಡಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿ ೭ ಸರ್ಕಾರಿ ಪ್ರಾಥಮಿಕ ಶಾಲೆಗಳಿವೆ. ೧೦ ಅಂಗನವಾಡಿ ಕೇಂದ್ರಗಳಿವೆ.

ಮೂರು ಖಾಸಗಿ ಶಾಲೆಗಳು, ಮೂರು ವಸತಿ ಶಾಲೆಗಳು, ಮೂರು ಹಾಲು ಉತ್ಪಾದಕರ ಸಹಕಾರ ಸಂಘಗಳು ಇವೆ.

ವಿವಿಧ ರಾಷ್ಟ್ರೀಕೃತ ಬ್ಯಾಂಕುಗಳಿದ್ದು ರಾಜ್ಯದಲ್ಲಿಯೇ ಎರಡನೆಯದು ಎಂಬ ಹೆಗ್ಗಳಿಕೆಯ ಸೈನಿಕ ಶಾಲೆ ಹಾಗೂ ಕ್ರೀಡಾ ಶಾಲೆಗಳಿವೆ.

ಅಷ್ಟು ಮಾತ್ರವಲ್ಲ, ನೆರೆಯ ಹಾಸನ ಹಾಗೂ ಮೈಸೂರು ಜಿಲ್ಲೆಗಳ ಬರಡು ಭೂಮಿಯನ್ನು ಹಚ್ಚ ಹಸಿರಾಗಿಸಿರುವ ಹಾರಂಗಿ ಜಲಾಗಾರ ಈ ಪಂಚಾಯಿತಿ ವ್ಯಾಪ್ತಿಯಲ್ಲಿ ಇದೆ.

ಜೊತೆಗೆ ಸಮಾಜಕ್ಕೆ ಶಿಕ್ಷಕರನ್ನು ರೂಪಿಸುವ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಸೇರಿದಂತೆ ಸರ್ಕಾರದ ಪ್ರತಿಷ್ಠಿತ ಪಿಯು ವಿದ್ಯಾಸಂಸ್ಥೆ ಇಲ್ಲಿದೆ.

೨೫೦ ಎಕರೆ ವಿಶಾಲ ಭೂಪ್ರದೇಶದ ಕೈಗಾರಿಕಾ ಪ್ರದೇಶ

ಪಂಚಾಯಿತಿ ವ್ಯಾಪ್ತಿಯಲ್ಲಿನ ಕೂಡ್ಲೂರು ಕೈಗಾರಿಕಾ ಪ್ರದೇಶದಲ್ಲಿ ಮಾಜಿ ಮುಖ್ಯಮಂತ್ರಿ ಕುಶಾಲನಗರದವರೇ ಆಗಿದ್ದ ದಿ.ಆರ್. ಗುಂಡೂರಾವ್ ಅವರ ಕನಸಿನ ಕೈಗಾರಿಕಾ ಪ್ರದೇಶವಿದ್ದು ೨೫೦ ಕ್ಕೂ ಹೆಚ್ಚಿನ ವಿವಿಧ ಕೈಗಾರಿಕ ಸಂಸ್ಥೆಗಳಿವೆ. ಜೊತೆಗೆ ನೆರೆಯ ಹಾಸನ ಹಾಗೂ ಮೈಸೂರು ಜಿಲ್ಲೆಗಳ ಸಾವಿರಾರು ಮಂದಿ ಇಲ್ಲಿಗೆ ವಲಸೆ ಬಂದು ಇಲ್ಲಿಯೇ ನೆಲೆ ನಿಂತು ಬದುಕು ಕಟ್ಟಿಕೊಂಡಿದ್ದಾರೆ. ಮತ್ತೊಂದು ವಿಶೇಷವೆಂದರೆ ಇಲ್ಲಿನ ಕಾಫಿ ಸಂಸ್ಕರಣ ಘಟಕಗಳಿಂದ ವಾರ್ಷಿಕ ಹಲವು ಕೋಟಿಗಳಷ್ಟು ಹಣಕಾಸು ವಹಿವಾಟು ನಡೆಯುತ್ತಿದೆ.

೨೦ ಕ್ಕೂ ಅಧಿಕ ಬಡಾವಣೆಗಳಿವೆ :

ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯಲ್ಲಿ ೨೦ ಕ್ಕೂ ಜನವಸತಿ ಬಡಾವಣೆಗಳಿದ್ದು ಕುಶಾಲನಗರದ ಜನವಸತಿಗೆ ತನ್ನನ್ನು ತಾನು ತೆರೆದುಕೊಂಡಿದೆ.

ಅವಳಿ ನದಿಗಳ ಸಂಗಮ ತಾಣವಿದು :

ಹಾರಂಗಿ ಹಾಗೂ ಕಾವೇರಿ ಎರಡೂ ನದಿಗಳು ಅಪ್ಪಿಕೊಂಡು ಮುಂದೆ ಸಾಗುವ ಈ ಪಂಚಾಯಿತಿ ಕಾರ್ಯಕ್ಷೇತ್ರ ನಿತ್ಯವೂ ಹರಿದ್ವರ್ಣವಾಗಿದೆ. ಪಂಚಾಯಿತಿ ಕಛೇರಿಯ ಸಮೀಕ್ಷೆಯಂತೆ ಗ್ರಾಪಂ ವ್ಯಾಪ್ತಿಯಲ್ಲಿ ೧೪ ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆ ಇದೆ. ೮,೦೦೦ ಪುರುಷರು ಹಾಗೂ ೬,೫೦೦ ಮಹಿಳೆಯರು ಇಲ್ಲಿದ್ದಾರೆ.

೨೦೦೯ ರಲ್ಲಿಯೇ ಪಟ್ಟಣ ಪಂಚಾಯಿತಿ ಪ್ರಸ್ತಾವನೆ :

ಗ್ರಾ.ಪಂ.ನಿAದ ಹೊರತಾಗಿ ಪಟ್ಟಣ ಪಂಚಾಯಿತಿ ಆಗಿ ಮೇಲ್ದರ್ಜೆಗೆ ಏರಲು ಅಗತ್ಯವುಳ್ಳ ಎಲ್ಲಾ ಮಾನದಂಡಗಳನ್ನು ಹೊಂದಿರುವ ಈ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಸಬೇಕೆಂದು ೨೦/೦೭/೨೦೦೯ ರಲ್ಲಿ ಅಂದು ಪಂಚಾಯಿತಿ ಅಧ್ಯಕ್ಷರಾಗಿದ್ದ ಕೆ.ಪಿ. ಕೃಷ್ಣ ಅವರ ನೇತೃತ್ವದ ಚುನಾಯಿತ ಆಡಳಿತ ಮಂಡಳಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡು ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು.ಬಳಿಕ ಕೆ.ಸಿ. ಲಕ್ಷಿö್ಮ ಎಂಬವರು ಗ್ರಾಪಂ ಅಧ್ಯಕ್ಷರಾಗಿದ್ದಾಗ ೩೧/೧೨/೨೦೧೯ ರಲ್ಲಿ ಎರಡನೇ ಬಾರಿಗೆ ಪಟ್ಟಣ ಪಂಚಾಯಿತಿ ಹಕ್ಕೊತ್ತಾಯ ಮಂಡಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು.

ಹೋರಾಟ ಸಮಿತಿಯೂ ರಚನೆಯಾಗಿತ್ತು....

ಗ್ರಾ.ಪಂ.ನಿAದ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಸಲೇಬೇಕೆಂಬ ಛಲ ತೊಟ್ಟ ಪಂಚಾಯಿತಿ ವ್ಯಾಪ್ತಿಯ ಕೆಲವು ಸಮಾನ ಮನಸ್ಕರು ಸೇರಿ ‘ಪಟ್ಟಣ ಪಂಚಾಯಿತಿ ಹೋರಾಟ ಸಮಿತಿ’ ಯನ್ನು ರಚಿಸಿ ಕೆ. ವರದ ಅವರನ್ನು ಸಂಚಾಲಕರಾಗಿ ನೇಮಕ ಮಾಡಲಾಗಿತ್ತು.

ಪ್ರಧಾನ ಕಾರ್ಯದರ್ಶಿಯಾಗಿ ವಕೀಲ ಭರತ್ ಮಾಚಯ್ಯ, ಹಾಗೂ ಮತ್ತೊಂದು ಅವಧಿಯ ಅಂದಿನ ಅಧ್ಯಕ್ಷರಾಗಿದ್ದ ಇಂದಿರಾ ರಮೇಶ್ ಮತ್ತಿತರರನ್ನು ಒಳಗೊಂಡ ಸಮಿತಿಯನ್ನು ರಚಿಸಿ ಹಲವು ಸುತ್ತುಗಳ ಸಭೆಗಳನ್ನು ಕೂಡ ನಡೆಸಿ ಸರ್ಕಾರಕ್ಕೂ ಒತ್ತಾಯ ಮಾಡಲಾಗಿತ್ತು. ಆದರೆ, ಈ ಹೋರಾಟ ಕುಶಾಲನಗರದ ಕಾವೇರಿ ನದಿಯ ಗಡಿರೇಖೆಯನ್ನು ಬಿಟ್ಟು ಮುಂದೆ ಹೋಗದ ಕಾರಣ ಹೋರಾಟ ನೆನೆಗುದಿಗೆ ಬಿತ್ತು. ಏಕೆಂದರೆ ಇಲ್ಲಿನ ಇವರ ಹೋರಾಟವನ್ನು ಸರ್ಕಾರದ ಪ್ರಮುಖ ಇಲಾಖೆಗಳ ಮುಖ್ಯಸ್ಥರ ಗಮನಕ್ಕೆ ತರುವ ಪ್ರಯತ್ನ ಅಂದು ಅಧಿಕಾರದಲ್ಲಿದ್ದ ಶಾಸಕರು ಮಾಡದ ಕಾರಣ ಈ ಹೋರಾಟ ಕಳೆಗುಂದಿತು ಎನ್ನಲಾಗಿದೆ.

ಇದೀಗ ಈ ಸಮಿತಿ ಮತ್ತೆ ಮೈಕೊಡವಿ ನಿಲ್ಲುವ ಮೂಲಕ ಹೋರಾಟಕ್ಕೆ ಒಂದಷ್ಟು ಜೀವ ಕಳೆ ತುಂಬಿದಲ್ಲಿ ಶಾಸಕ ಡಾ. ಮಂತರ್‌ಗೌಡರ ಮೂಲಕ ಸರ್ಕಾರದ ಗಮನಸೆಳೆಯುವ ಪ್ರಾಮಾಣಿಕ ಕೆಲಸ ಇನ್ನಾದರೂ ಆಗಬೇಕು ಎಂಬುದು ಇಲ್ಲಿನ ಹಲವು ಮಂದಿಯ ಒತ್ತಾಯವಾಗಿದೆ.

ಈ ಬಗ್ಗೆ ಹೋರಾಟ ಸಮಿತಿ ಅಧ್ಯಕ್ಷ ಕೆ. ವರದ ಅವರನ್ನು ‘ಶಕ್ತಿ’ ಸಂಪರ್ಕಿಸಿ ಅವರ ಪ್ರತಿಕ್ರಿಯೆ ಬಯಸಿದಾಗ, ಇದು ಪಕ್ಷಾತೀತವಾದ ಹೋರಾಟ ಸಮಿತಿ. ಯಾವುದೇ ಒಂದು ಪಕ್ಷಕ್ಕೆ ಅಥವಾ ಧರ್ಮಕ್ಕೆ ಈ ಹೋರಾಟ ಸೀಮಿತವಾಗಿಲ್ಲ. ಇದು ಪಂಚಾಯಿತಿ ವ್ಯಾಪ್ತಿಯಲ್ಲಿ ವಾಸ ವಿರುವ ಅಷ್ಟೂ ಮಂದಿಯ ಕನಸಿನ ವೇದಿಕೆ. ಈಗ ಈ ಹೋರಾಟಕ್ಕೆ ಮತ್ತೆ ಜೀವ ಕಳೆ ತುಂಬಿ ಹೋರಾಟ ರೂಪಿಸಲಾಗುವುದು. ಕ್ಷೇತ್ರದ ಶಾಸಕರ ವಿಶ್ವಾಸ ಪಡೆದು ನಮ್ಮ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಾಗುವುದು ಎಂಬ ವಿಶ್ವಾಸ ವ್ಯಕ್ತಪಡಿಸಿದರು.