ಮಡಿಕೇರಿ, ಸೆ. ೨೮: ನಗರದ ಮುಖ್ಯರಸ್ತೆಯಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಶೆಡ್‌ಗಳನ್ನು ೭ ದಿನಗಳ ಒಳಗೆ ತೆರವು ಮಾಡುವಂತೆ ನಗರಸಭೆ ಪೌರಾಯುಕ್ತ ರಮೇಶ್ ಸಂಬAಧಪಟ್ಟವರಿಗೆ ಗಡುವು ನೀಡಿದ್ದಾರೆ.

ರಾಷ್ಟಿçÃಯ ಹೆದ್ದಾರಿ-೨೭೫ರ ನಡುವಿನ ಸರಕಾರಿ ಬಸ್ ಡಿಪೋ ಬಳಿ ಸರ್ವೆ ನಂಬರ್ ೫೩/೬ರಲ್ಲಿ ತಾತ್ಕಾಲಿಕವಾಗಿ ೩ ಶೆಡ್‌ಗಳನ್ನು ನಿರ್ಮಿಸಲು ಅನುಮತಿ ಪಡೆದು ಅನಧಿಕೃತವಾಗಿ ಹೆಚ್ಚುವರಿ ಶೆಡ್ ನಿರ್ಮಾಣ ಮಾಡಿರುವ ಬಗ್ಗೆ ಕೊಡಗು ಅಭಿವೃದ್ಧಿ ಸಮಿತಿ ಜಿಲ್ಲಾಧಿಕಾರಿಗೆ ದೂರು ನೀಡಿತ್ತು. ಈ ಹಿನ್ನೆಲೆಯಲ್ಲಿ ಸಂಬAಧಪಟ್ಟವರಿಗೆ ತಿಳುವಳಿಕೆ ಪತ್ರ ನೀಡಿ ತೆರವಿಗೆ ಸೂಚಿಸಲಾಗಿತ್ತು. ಆದರೆ, ತೆರವು ಮಾಡದ ಹಿನ್ನೆಲೆ ಪೌರಾಯುಕ್ತರು ನೋಟೀಸ್ ಜಾರಿಗೊಳಿಸಿದ್ದಾರೆ.

ಶೆಡ್‌ಗಳನ್ನು ಅನಧಿಕೃತವಾಗಿ ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡುತ್ತಿರುವುದು ಕಂಡುಬAದಿದ್ದು, ಇದು ಕರ್ನಾಟಕ ಪೌರಸಭೆಗಳ ಅಧಿನಿಯಮ ಸೆಕ್ಷನ್ ೧೮೭ ಹಾಗೂ ೨೫೬ ಪ್ರಕಾರ ಕಾನೂನು ವಿರುದ್ಧ ಎಂದು ನೋಟೀಸ್‌ನಲ್ಲಿ ಉಲ್ಲೇಖಿಸಲಾಗಿದೆ.

ದೇಚಮ್ಮ ಕಾರ್ಯಪ್ಪ, ಕಾರ್ಯಪ್ಪ ವಿನಯ್ ಹಾಗೂ ಕಾರ್ಯಪ್ಪ ತಮ್ಮಯ್ಯ ಅವರ ಹೆಸರಿನಲ್ಲಿರುವ ಈ ಜಾಗದಲ್ಲಿ ಸಿ.ಟಿ. ಗಾನ ಅವರಿಗೆ ಲೀಸ್ ನೀಡಿ ದಾಖಲೆ ಪ್ರತಿ ಸಲ್ಲಿಸಿ ಮೂರು ಶೆಡ್‌ಗಳಿಗೆ ಅನುಮತಿ ಪಡೆದು ಅನಧಿಕೃತವಾಗಿ ಅನುಮತಿಗಿಂತ ಹೆಚ್ಚಿನ (ಮೊದಲ ಪುಟದಿಂದ) ಶೆಡ್ ನಿರ್ಮಿಸಲಾಗಿದೆ. ಈ ಹಿನ್ನೆಲೆ ಅನುಮತಿಗಿಂತ ಹೆಚ್ಚಾಗಿ ನಿರ್ಮಿಸಿರುವ ಶೆಡ್‌ಗಳನ್ನು ೭ ದಿನದಲ್ಲಿ ತೆರವುಗೊಳಿಸಿ ಲಿಖಿತ ಮಾಹಿತಿ ನೀಡುವಂತೆ ಮಾಲೀಕರಾದ ಮೂವರಿಗೆ ಆದೇಶಿಸಿದ್ದಾರೆ. ತಪ್ಪಿದ್ದಲ್ಲಿ ಕಾನೂನು ಕ್ರಮಕೈಗೊಂಡು ಹೆಚ್ಚುವರಿ ಶೆಡ್ ತೆರವುಗೊಳಿಸಿ ಆ ವೆಚ್ಚವನ್ನು ಕಂದಾಯ ರೂಪದಲ್ಲಿ ವಸೂಲಿ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.