ಮಡಿಕೇರಿ, ಸೆ. ೨೮: ಜಡಿಮಳೆ, ಮೈಕೊರೆಯುವ ಚಳಿಯಿದ್ದರೂ ಕಲಾಸಂಭ್ರಮ ವೇದಿಕೆಯಲ್ಲಿ ಯುವ ಸಂಭ್ರಮ ಸೃಷ್ಟಿಯಾಗಿತ್ತು. ಪ್ರತಿಕೂಲ ಹವಾಮಾನದ ನಡುವೆಯೂ ಸಾವಿರಾರು ಸಂಖ್ಯೆಯಲ್ಲಿ ಪ್ರೇಕ್ಷಕರು ಆಗಮಿಸಿ ಯುವದಸರಾ ಕಾರ್ಯಕ್ರಮವನ್ನು ಕಣ್ತುಂಬಿಕೊAಡರು.

ನಗರದ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ದಸರಾ ಅಂಗವಾಗಿ ನಡೆದ ಯುವ ದಸರಾ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ವೈವಿಧ್ಯ ಅನಾವರಣವಾಯಿತು. ಹಾಡು, ಡ್ಯಾನ್ಸ್, ಫೈಯರ್ ಶೋ, ಬೀಟ್ ಬಾಕ್ಸಿಂಗ್ ಹೀಗೆ ನಾನಾ ಕಾರ್ಯಕ್ರಮಗಳು ಮೂಡಿಬಂದವು.

ಸಂಜೆಯಿAದಲೇ ಎಡೆಬಿಡದೆ ಸುರಿಯುತ್ತಿದ್ದ ಮಳೆಯಿಂದ ಕಾರ್ಯಕ್ರಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಭಯ ಕಾಡುತ್ತಿತ್ತು. ರಾತ್ರಿ ೭ ಗಂಟೆಯ ನಂತರ ಪ್ರೇಕ್ಷಕರ ದಂಡು ಕಲಾಸಂಭ್ರಮ ವೇದಿಕೆಯತ್ತ ನುಗ್ಗಿತು. ನೋಡ ನೋಡುತ್ತ ವೇದಿಕೆ ಭರ್ತಿಯಾಗಿ ಕಾರ್ಯಕ್ರಮಕ್ಕೆ ಕಳೆ ಬಂದಿತು. ಮಳೆ ಬರುತ್ತಿದ್ದರೂ ಕಾರ್ಯಕ್ರಮಕ್ಕೆ ಯಾವುದೇ ಅಡ್ಡಿ ಉಂಟಾಗದೆ ನಿರ್ವಿಘ್ನವಾಗಿ ಸಾಗಿತು. ೪ಏಳನೇ ಪುಟ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ : ಯುವ ದಸರಾ ಅಂಗವಾಗಿ ಆಯೋಜನೆ ಮಾಡಿದ್ದ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ ಪ್ರೇಕ್ಷಕರ ಗಮನ ಸೆಳೆಯಿತು. ರಾಜ್ಯದ ವಿವಿಧೆಡೆಯ ೧೦ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಿದವು.

ಸನ್ ಡ್ಯಾನ್ಸ್ ಸ್ಟುಡಿಯೋ ಪೆಹಲ್ಗಾಮ್‌ನಲ್ಲಾದ ದಾಳಿ ಹಾಗೂ ಭಾರತೀಯ ಯೋಧರ ತ್ಯಾಗ ಬಲಿದಾನವನ್ನು ನೃತ್ಯದ ಮೂಲಕ ಪ್ರಸ್ತುತಪಡಿಸಿತು. ಮಡಿಕೇರಿ ರಾಜರಾಜೇಶ್ವರಿ ವಿದ್ಯಾಲಯ ತಂಡ ಚಂದ್ರಯಾನ ಯಶಸ್ಸನ್ನು ಸಂಭ್ರಮಿಸುವ ನೃತ್ಯ, ಡ್ಯಾನ್ಸ್ ಲ್ಯಾಬ್ ಸ್ವಾತಂತ್ರö್ಯ ಭಾರತವನ್ನು ಸಾಹಸಮಯ ನೃತ್ಯದ ಮೂಲಕ ಅನಾವರಣ ಮಾಡಿತು. ಸಾಹಸಮಯ ಚಟುವಟಿಕೆಗಳನ್ನು ನಡೆಸಿ ತಂಡ ನೋಡುಗರನ್ನು ರೋಮಾಂಚನಗೊಳಿಸಿತು. ಟೀಮ್ ಎಬಿಸಿ ಭೈರತಿ ರಣಗಲ್ಲು ಚಿತ್ರದ ಹಾಡಿಗೆ ನೃತ್ಯ ಮಾಡಿತು. ಶನಿವಾರಸಂತೆಯ ಕೂರ್ಗ್ ಯುನೈಟೆಡ್ ಶಿವಾಜಿ ಮಹಾರಾಜ್ ಕುರಿತ ನೃತ್ಯ ರೂಪಕ ಪ್ರಸ್ತುತಪಡಿಸಿತು. ಬೆಂಗಳೂರಿನ ನಾಟ್ಯ ಗಣಪತಿ ತಂಡ ಕನ್ನಡ ಹಳೆ ಚಿತ್ರಗೀತೆಗಳಿಗೆ ಹೆಜ್ಜೆ ಹಾಕಿತು. ಸುಂಟಿಕೊಪ್ಪದ ನಾಟಿ ಕಿಡ್ಸ್ ತಂಡ ಫ್ಯೂಷನ್ ಗೀತೆಗೆ ನೃತ್ಯ ಮಾಡಿತು. ಮೈಸೂರಿನ ವಿ ಟ್ರಾನ್ಸ್ ತಂಡದಿAದ ಹಿಪ್ ಹಾಪ್ ನೃತ್ಯ ಮೈನವಿರೇಳಿಸಿತು.

ಕನ್ನಡ ಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕಿ ಐಶ್ವರ್ಯ ರಂಗನಾಥ್ ಗಾಯನದ ಮೂಲಕ ಮೋಡಿ ಮಾಡಿದರು.

ಮೀಟ್ ಮಾಡೋಣ, ಡೇಟ್ ಮಾಡೋಣ, ಹೂವಿನ ಬಾಣದಂತೆ, ಟೇಕ್ ಇಟ್ ಪುಷ್ಪಾವತಿ, ಮಸ್ತ್ ಮಸ್ತ್ ಹುಡುಗಿ ಬಂದ್ಳು, ಜೋಗಯ್ಯ ಹೀಗೆ ವಿವಿಧ ಕನ್ನಡ ಹಾಡುಗಳಿಗೆ ಧ್ವನಿಯಾಗಿ ಮನರಂಜಿಸಿದರು. ಇವರ ಹಾಡಿಗೆ ಪ್ರೇಕ್ಷಕರು ಕುಣಿದು ಕುಪ್ಪಳಿಸಿದರು.ಬೆಂಕಿಯೊAದಿಗೆ ಸಾಹಸ

ಬೆಂಗಳೂರಿನ ಅನಿಕೇತ್ ಅವರು ‘ಬೀಟ್ ಬಾಕ್ಸ್’ ಪ್ರದರ್ಶನ ಮಾಡಿದರು. ಬಾಯಿಯ ಮೂಲಕ ವಿವಿಧ ರೀತಿಯ ಸದ್ದು ಹೊರಹೊಮ್ಮಿಸಿ ವಿಶೇಷ ಅನುಭವ ನೀಡಿದರು. ಇದರೊಂದಿಗೆ ಟೀಂ ಫ್ಲೋಟಿನ್ ತಂಡದಿAದ ಬೆಂಕಿಯೊAದಿಗೆ ಸಾಹಸ ರೋಮಾಂಚನಗೊಳಿಸಿತು.

ಕೊನೆಯಲ್ಲಿ ನಡೆದ ಡಿಜೆ ಪ್ರದರ್ಶನ ಯುವಸಮೂಹ ಮಾತ್ರವಲ್ಲದೆ ಎಲ್ಲಾ ವಯೋಮಾನದವರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತು.

ಸಮಾಜ ಸದೃಢವಾಗಿ ಬೇರೂರುವಂತೆ ಮಾಡಲು ಯುವಶಕ್ತಿಯಿಂದ ಮಾತ್ರ ಸಾಧ್ಯ ಎಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಹೇಳಿದರು.

ಯುವ ದಸರಾ ಅಂಗವಾಗಿ ನಡೆದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಾಧನೆ ಮಾಡಲು ಶಿಸ್ತು, ಶ್ರಮ, ತ್ಯಾಗ ಮನೋಭಾವ ಇರಲೇಬೇಕು. ಯುವಸಮೂಹ ದುಶ್ಚಟಗಳಿಗೆ ದಾಸರಾಗದೆ ಆರೋಗ್ಯವಂತ ಸಮಾಜ ನಿರ್ಮಿಸಲು ಕೈಜೋಡಿಸಬೇಕು. ದುಶ್ಚಟಗಳು ವೈಯಕ್ತಿಕ ಆರೋಗ್ಯವನ್ನು ಮಾತ್ರ ಕೆಡುವುದಿಲ್ಲ ಸಮಾಜಕ್ಕೂ ಮಾರಕವಾಗುತ್ತದೆ ಎಂದರು.

ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಮೆಹರೋಜ್ ಖಾನ್ ಮಾತನಾಡಿ, ಕತ್ತಲಿನಿಂದ ಬೆಳಕಿನೆಡೆಗೆ ಸಾಗಬೇಕೆಂಬ ಸಂದೇಶವನ್ನು ದಸರಾ ಹಬ್ಬ ಸಾರುತ್ತದೆ ಎಂದರು.

ಯುವ ದಸರಾ ಸಮಿತಿ ಅಧ್ಯಕ್ಷ ಕವನ್ ಕೊತ್ತೊಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ವಾಹನದಲ್ಲಿ ಎದುರಾದ ತಾಂತ್ರಿಕ ಸಮಸ್ಯೆಯ ನಡುವೆಯೂ ಸಕಾಲದಲ್ಲಿ ಗರ್ಭಿಣಿಯನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಿದ ಮಡಿಕೇರಿಯ ಆ್ಯಂಬ್ಯುಲೆನ್ಸ್ ಚಾಲಕ ಬಿ.ಎಸ್. ವೆಂಕಟೇಶ್ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ಸುಳ್ಯದ ಕೆವಿಜಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಅಕ್ಷಯ್ ಕುರುಂಜಿ, ಮಡಿಕೇರಿ ನಗರ ದಸರಾ ಸಮಿತಿ ಕಾರ್ಯಾಧ್ಯಕ್ಷ ಬಿ.ಕೆ. ಅರುಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ಅರುಣ್ ಶೆಟ್ಟಿ, ಉಪಾಧ್ಯಕ್ಷ ಮಹೇಶ್ ಜೈನಿ, ಉಪಾಧ್ಯಕ್ಷ ವಿ.ಜಿ. ಮೋಹನ್, ಉದ್ಯಮಿಗಳಾದ ಶರೀನ್, ಪ್ರಸನ್ನ ಭಟ್, ತೇಜ್ ರಾಜ್, ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಶ್ರೀನಿವಾಸ್, ರಾಜ್ಯ ಸೇವಾದಳ ಮಾಜಿ ಅಧ್ಯಕ್ಷೆ ಡಾ. ಜಯಂತಿ ಶೆಟ್ಟಿ, ಕೆ.ನಿಡುಗಣೆ ಗ್ರಾ.ಪಂ. ಸದಸ್ಯ ಜಾನ್ಸನ್ ಪಿಂಟೋ, ವ್ಯಾಲಿ ಡ್ಯೂ ಕಲ್ಚರಲ್ ಅಸೋಸಿಯೇಷನ್ ಅಧ್ಯಕ್ಷ ಹಂಚೆಟ್ಟಿರ ಮನು ಮುದ್ದಪ್ಪ, ಗುತ್ತಿಗೆದಾರರಾದ ಶಶಿ, ಬೆಂಗಳೂರು ಆರ್.ಆರ್. ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಎಂ.ವಿ. ಲೋಕೇಶ್, ಅಮೃತ್ ಜೈನ್ ಪ್ರಾರ್ಥಿಸಿ, ಎಚ್.ಟಿ. ಅನಿಲ್ ನಿರೂಪಿಸಿ, ಕಿರಣ್ ದೇರಾಜೆ ವಂದಿಸಿದರು.ಸಿನಿಮಾ ನಟಿಯರು ಭಾಗಿ

ಇದೇ ಸಂದರ್ಭ ದಿಯಾ ಸಿನಿಮಾ ಖ್ಯಾತಿಯ ಖುಷಿ ರವಿ ಹಾಗೂ ಮಡಿಕೇರಿ ಮೂಲದ ನಟಿ ತೇಜಸ್ವಿನಿ ಶರ್ಮ ಯುವ ಸಂಭ್ರಮದಲ್ಲಿ ಭಾಗಿಯಾದರು. ಇಬ್ಬರು ಅಭಿನಯಿಸುತ್ತಿರುವ ಫುಲ್ ಮಿಲ್ಸ್ ಸಿನಿಮಾದ ಟ್ರೇಲರ್ ಅನ್ನು ಇದೇ ಸಂದರ್ಭ ಪ್ರದರ್ಶನ ಮಾಡಲಾಯಿತು. ನಟಿಯರು ನೃತ್ಯ ಮಾಡಿ ರಂಜಿಸಿದರು.