ಮಡಿಕೇರಿ,ಸೆ.೨೯; ರಾಜ ಬೀದಿಯಲ್ಲಿ ನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಸಾಂಸ್ಕೃತಿಕ ಕಲಾ ತಂಡಗಳ ಮೆರವಣಿಗೆ., ಕಲಾ ಸಂಭ್ರಮ ವೇದಿಕೆಯಲ್ಲಿ ಜಾನಪದ ಸಾಂಸ್ಕೃತಿಕ ವೈಭವ., ಮುಂಭಾಗದಲ್ಲಿ ಇತಿಹಾಸವನ್ನು ಸಾರುವ ಹಳೆಯ ಕಾಲದ ಜನಪದೀಯ ಪರಿಕರಗಳು...

ಈ ಸುಂದರ ದೃಶ್ಯ ಕಂಡು ಬಂದಿದ್ದು ಮಡಿಕೇರಿಯಲ್ಲಿ ನಡೆದ ಜಾನಪದ ದಸರಾದಲ್ಲಿ. ಮಡಿಕೇರಿ ನಗರ ದಸರಾ ಸಮಿತಿ, ದಸರಾ ಸಾಂಸ್ಕೃತಿಕ ಸಮಿತಿ ಹಾಗೂ ಕೊಡಗು ಜಿಲ್ಲಾ ಜಾನಪದ ಪರಿಷತ್ ಸಹಯೋಗದಿಂದ ನಡೆದ ಜಾನಪದ ದಸರಾ ನಗರದಲ್ಲಿ ಜಾನಪದ ಲೋಕವನ್ನು ಸೃಷ್ಟಿಸಿತು. ಗಾಂಧಿ ಮೈದಾನದಲ್ಲಿನ ಕಲಾ ಸಂಭ್ರಮ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವೇದಿಕೆಯನ್ನು ಜಾನಪದೀಯ ಶೈಲಿಯಲ್ಲಿ ಅಲಂಕಾರ ಮಾಡಲಾಗಿದ್ದು, ವಿವಿಧ ಜನಪದೀಯ ವೇಷ ಧರಿಸಿದ್ದ ಪುಟಾಣಿ ಮಕ್ಕಳು ವೇದಿಕೆಯಲ್ಲಿ ಸ್ವಾಗತಕಾರರಾಗಿ ನಿಂತಿದ್ದರು. ಹಿಂದಿನ ಕಾಲದ ರಾಗಿ ಬೀಸುವ ಕಲ್ಲು, ದೋಸೆ ಹಿಟ್ಟು ಕಡಿಯುವ ಕಲ್ಲುಗಳು, ಭತ್ತದ ಪರೆ ಗಮನ ಸೆಳೆದವು.

ಸಾಂಸ್ಕೃತಿಕ ಹಿನ್ನೆಲೆಯ ಆಚರಣೆ

ಕಾರ್ಯಕ್ರಮಕ್ಕೆ ಜಾನಪದ ಶೈಲಿಯಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಚಾಲನೆ ನೀಡಿದರು. ನಂತರ ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿ ಮಾತನಾಡಿದ ಅವರು; ದಸರಾ ಉತ್ಸವಕ್ಕೆ ತನ್ನದೇ ಆದ ಇತಿಹಾಸವಿದ್ದು, ವಿವಿಧ ಕಾರ್ಯಕ್ರಮಗಳೊಂದಿಗೆ ಮೈಸೂರು ದಸರಾದಂತೆ ವಿಜೃಂಭಣೆಯಿAದ ಆಚರಣೆ ಏಳನೇ ಪುಟಕ್ಕೆ ಮೊದಲನೇ ಪುಟದಿಂದ ಮಾಡುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ವಿವಿಧ ಅಕಾಡೆಮಿಗಳ ಸಹಕಾರದೊಂದಿಗೆ ಐದು ವರ್ಷಗಳಿಂದ ಜಾನಪದ ದಸರಾ ಆಚರಿಸಿಕೊಂಡು ಬರುತ್ತಿರುವುದು ಶ್ಲಾಘನೀಯ. ಕಾರ್ಯಕ್ರಮಗಳಲ್ಲಿ ಮಳೆಯ ನಡುವೆಯೂ ಕಲಾವಿದರು ಭಾಗವಹಿಸುತ್ತಿರುವುದು ದಸರಾಗೆ ಗೌರವ ಸಿಕ್ಕಿದಂತಾಗಿದೆ ಎಂದು ಹೇಳಿದರು. ನಾಡ ಹಬ್ಬದಲ್ಲಿ ಎಲ್ಲರೂ ಸೇರಿ ಸಾಂಸ್ಕೃತಿಕ ಕಲೆಯನ್ನು ಬೆಂಬಲಿಸುವ ಕಾರ್ಯ ಆಗುತ್ತಿದೆ. ಇದೊಂದು ಸಾಂಸ್ಕೃತಿಕ ಹಿನ್ನೆಲೆಯ ಆಚರಣೆಯಾಗಿದೆ. ಸಂಸ್ಕೃತಿಯನ್ನು ಪ್ರದರ್ಶಿಸಲು ಇದೊಂದು ಸುಂದರ ವೇದಿಕೆಯಾಗಿದೆ ಎಂದು ಅಭಿಪ್ರಾಯ ಪಟ್ಟರು.

ಜಾನಪದ ಸಮುದ್ರದ ಹಾಗೆ

ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಹುಲಿತಾಳದ ಕೃಷಿಕ ಮಹಿಳೆ ಭಾಗಿರಥಿ ಹುಲಿತಾಳ ಮಾತನಾಡಿ; ಒಂದು ಕಾಲದಲ್ಲಿ ವಾಹನಗಳು ಇಲ್ಲದ ಸಮಯದಲ್ಲಿ, ವಿಜ್ಞಾನ ಬೆಳೆಯದ ಸಂದರ್ಭದಲ್ಲಿ ಜನರು ಹಾಡಿನ ಮೂಲಕ ತಮ್ಮ ಅನಿಸಿಕೆಗಳನ್ನು ಹೇಳುತ್ತಿದ್ದರು. ಹಾಡು ಬೆಳೆದು ಜನಪದ ಆಯಿತು. ಬೆಳಿಗ್ಗೆ ಜನರ ಜೀವನ ಆರಂಭವಾಗುವ ಮುನ್ನವೇ ಜಾನಪದ ಹಾಡು ಆರಂಭವಾಗುತ್ತದೆ. ಜಾನಪದರು ಭಾವನೆಗಳಿಗೆ ಮಹತ್ವ ನೀಡುತ್ತಾರೆ. ಜಾನಪದ ಸಮುದ್ರ ಇದ್ದ ಹಾಗೆ., ಇಲ್ಲಿ ಎಲ್ಲದಕ್ಕೂ ಅವಕಾಶವಿದೆ ಎಂದು ಹೇಳಿದರಲ್ಲದೆ, ಸಾಂದರ್ಭಿಕವಾಗಿ ಜನಪದ ಹಾಡುಗಳನ್ನು ಹಾಡಿದರು.

ದಸರಾ ನಾಡಹಬ್ಬ

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಮಾತನಾಡಿ; ದಸರಾ ನಾಡಿನ ಹಬ್ಬವಾಗಿದ್ದು, ಜಾತಿ, ಧರ್ಮ ಬೇಧ ಇಲ್ಲದೆ ಸರ್ವರ ಸಹಕಾರದೊಂದಿಗೆ ಆಚರಣೆ ಮಾಡುವ ಹಬ್ಬವಾಗಿದೆ. ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ವೈವಿಧ್ಯತೆಯಲ್ಲಿ ಏಕತೆಯನ್ನು ಬಿಂಬಿಸುವ ಹಬ್ಬವಾಗಿದ್ದು ಎಲ್ಲ ಜನಾಂಗದವರ ಸಂಸ್ಕೃತಿ ಪ್ರದರ್ಶಿಸುವ ವೇದಿಕೆಯಾಗಿದೆ ಎಂದು ಹೇಳಿದರು. ನಾಡಿನಲ್ಲಿನ ದುಷ್ಟ ಶಕ್ತಿಗಳು ನಾಶವಾದಲ್ಲಿ ಮಾತ್ರ ಸ್ವಾಸ್ಥö್ಯ ಸಮಾಜ ಕಾಣಲು ಸಾಧ್ಯ. ಸುದಿನ ಬರಲು ಸಾಧ್ಯವೆಂದು ಅಭಿಪ್ರಾಯಪಟ್ಟರು.

ಸಂಸ್ಕೃತಿಯನ್ನು ಬೆಳೆಸಲು ಸಹಕಾರ

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಾಜಿ ಮಾತನಾಡಿ; ಕಳೆದ ಐದು ವರ್ಷಗಳಿಂದ ವರ್ಷದಿಂದ ವರ್ಷಕ್ಕೆ ಜಾನಪದ ದಸರಾವನ್ನು ವಿಜೃಂಭಣೆಯಿAದ ಆಚರಿಸಿಕೊಂಡು ಬರಲಾಗುತ್ತಿದೆ. ಕರಗಾದೊಂದಿಗೆ ಆರಂಭವಾಗುವ ದಸರಾ ಉತ್ಸವದಲ್ಲಿ ನಂತರದ ದಿನಗಳಲ್ಲಿ ಪ್ರತಿದಿನ ಒಂದೊAದು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗುತ್ತಿದೆ. ಇದರಲ್ಲಿ ಜಾನಪದ ದಸರಾ ಕೂಡ ವಿಶೇಷವಾಗಿದೆ. ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಎರಡೂ ಅಕಾಡೆಮಿಗಳೂ ಕೂಡ ಸಹಕಾರ ನೀಡುತ್ತಿದ್ದೇವೆ ಎಂದರು.

ಜಾನಪದ ಸಂಸ್ಕೃತಿ ಕಲಿಸೋಣ

ದಸರಾ ಸಮಿತಿ ಕಾರ್ಯಾಧ್ಯಕ್ಷ ಬಿ.ಕೆ.ಅರುಣ್‌ಕುಮಾರ್ ಮಾತನಾಡಿ; ನಾವುಗಳು ಇಂದು ಜಾನಪದ ಸಾಂಸ್ಕೃತಿ, ಕಲೆಗಳನ್ನು ಉಳಿಸಿ ಬೆಳೆಸುತ್ತಿಲ್ಲ, ಎಲ್ಲಿಯೋ ಎಡವಿದ್ದೇವೆ, ಹಿಂದೆ ಮಗು ಅತ್ತಾಗÀ ತೊಟ್ಟಿಲು ತೂಗಿ ಜೋಗುಳ ಹಾಡಿ ಮಲಗಿಸುತ್ತಿದ್ದರು. ಇಂದು ಮಗುವಿನ ಕೈಗೆ ಮೊಬೈಲ್ ಕೊಡುತ್ತಿದ್ದೇವೆ. ನಮ್ಮ ಮಕ್ಕಳನ್ನು ಹೇಗೆ ಬೆಳೆಸುತ್ತಿದ್ದೇವೆ ಎಂಬ ಬಗ್ಗೆ ನಾವು ಗಂಭೀರವಾಗಿ ಚಿಂತಿಸಬೇಕಿದೆ. ಪಾಶ್ಚಾತ್ಯ ಸಂಸ್ಕೃತಿ ಬಿಟ್ಟು ಜಾನಪದ ಸಂಸ್ಕೃತಿಯನ್ನು ಕಲಿಸೋಣವೆಂದು ಆಶಿಸಿದರು.

ವೈವಿಧ್ಯಮಯ ಕಾರ್ಯಕ್ರಮ

ಪ್ರಾಸ್ತಾವಿಕವಾಗಿ ಮಾತನಾಡಿದ ಕಾರ್ಯಕ್ರಮದ ಸಂಚಾಲಕ ಅನಿಲ್ ಎಚ್.ಟಿ. ಜಾನಪದ ಪರಿಷತ್ತು ಜಿಲ್ಲೆಯಲ್ಲಿ ಜಾನಪದ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ೮ವರ್ಷಗಳ ಹಿಂದೆ ಪ್ರಾರಂಭವಾದ ಸಂಸ್ಥೆಯಾಗಿದೆ. ಪರಿಷತ್‌ನಲ್ಲಿ ೧೬೦ ಸದಸ್ಯರುಗಳಿದ್ದು, ಜಿಲ್ಲೆಯಾದ್ಯಂತ ಸಕ್ರಿಯವಾಗಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಮಡಿಕೇರಿ ಜನೋತ್ಸವ ದಸರಾದಲ್ಲಿ ಕಳೆದ ಐದು ವರ್ಷಗಳಿಂದ ಜಾನಪದ ದಸರಾ ಕಾರ್ಯಕ್ರಮದ ಮೂಲಕ ಜಾನಪದ ರಂಗನ್ನು ಪಸರಿಸಲಾಗುತ್ತಿದೆ. ಇಂದಿನ ಕಾರ್ಯಕ್ರಮದಲ್ಲಿ ಜಿಲ್ಲೆಯ ೩೨ ಕಲಾತಂಡಗಳು ಭಾಗವಹಿಸಿವೆ ಎಂದು ತಿಳಿಸಿದರು.

ಜಾನಪದ ಪರಿಷತ್ತು ವತಿಯಿಂದ ಜಿಲ್ಲೆಯಲ್ಲಿ ಜಾನಪದಕ್ಕೆ ಸಂಬAಧಿಸಿದAತೆ ವಸ್ತು ಸಂಗ್ರಹಾಲಯ ಸ್ಥಾಪನೆ ಮತ್ತು ಜಾನಪದ ಚಟುವಟಿಕೆಗಳಿಗೆ ಸಂಬAಧಿಸಿದAತೆ ಕಚೇರಿ ತೆರೆಯಲು ಉದ್ದೇಶಿಸಲಾಗಿದೆ. ಇದು ಪ್ರವಾಸೋದ್ಯಮಕ್ಕೂ ನೆರವಾಗಲಿದೆ. ಹಾಗಾಗಿ ಶಾಸಕರು ಮಡಿಕೇರಿಯಲ್ಲಿ ಇದಕ್ಕೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದರು. ನಗರಸಭೆ ಹಾಗೂ ದಸರಾ ಸಮಿತಿ ಅಧ್ಯಕ್ಷೆ ಪಿ.ಕಲಾವತಿ ಹಾಗೂ ಉಪಾಧ್ಯಕ್ಷ ಮಹೇಶ್ ಜೈನಿ ಕಾರ್ಯಕ್ರಮಕ್ಕೆ ಶುಭ ಕೋರಿದರು.

ಪುನರುಜ್ಜೀವನಗೊಳಿಸಲು ಹೆಜ್ಜೆ

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ ಮಾತನಾಡಿ; ಎಲ್ಲರಲ್ಲೂ ಸ್ವತಃ ಕಲಾವಿದ ಇರುತ್ತಾನೆ. ಇಲ್ಲಿ ಎಲ್ಲರೂ ಒಂದೇ, ದಿಗಂತದಾಚೆ ಈಚೆ ಎಲ್ಲಡೆ ಹರವಿರುವ ಏಕ ಮಾತ್ರ ಚೈತನ್ಯ ನನ್ನಲ್ಲಿ, ನಿಮ್ಮಲ್ಲಿ, ಎಲ್ಲರಲ್ಲಿ ಹರವಿದೆ. ಎಲ್ಲರ ಹೃದಯದಲ್ಲೂ ಅದೇ ಚೈತನ್ಯವಿದೆ ಎಂದಾದರೆ ಸರ್ವರೂ ಒಂದೇ ಎಂಬ ಸತ್ಯದ ಅರಿವು ಜನಪದೀಯರಲ್ಲಿ ಇತ್ತು. ಈ ನಿಟ್ಟಿನಲ್ಲಿ ನಮ್ಮ ಜಾನಪದ ಬಳಗ ಅಳಿಲು ಸೇವೆಯಂತೆ ಎಲ್ಲೋ ಒಂದು ಭಾಗದಿಂದ ಅಳಿದು ಹೋಗುತ್ತಿರುವ ಜಾನಪದ ಹೃದಯಗೀತೆಗಳು, ಕಲೆಯನ್ನು ಪುನರುಜ್ಜೀವಗೊಳಿಸಲು ಹೆಜ್ಜೆಯಿಡುತ್ತಿದೆ ಎಂದು ಹೇಳಿದರು.

ಹಿಂದೆ ಜನಪದರು ತಮ್ಮ ಶ್ರಮವನ್ನು ಮರೆತು ಜನಪದದ ಮೂಲಕ ಆನಂದವನ್ನು ತಂದುಕೊಳ್ಳುತ್ತಿದ್ದರು. ಇದೀಗ ಪರರಿಗಾಗಿ ಬದುಕುವ ಅಂಶ ಮರೆತುಹೋಗಿದೆ. ಅಕಾಡೆಮಿಗಳು ಜಾನಪದದ ಭವ್ಯತೆಯನ್ನು ನಾಡಿನಗಲಕ್ಕೆ ಪ್ರಚಾರ ಮಾಡುವತ್ತ ಹೆಜ್ಜೆಯಿಡಬೇಕೆಂದು ಮನವಿ ಮಾಡಿದರು.

ಸಾಂಸ್ಕೃತಿಕ ಮೆರವಣಿಗೆ

ಕಾರ್ಯಕ್ರಮಕ್ಕೂ ಮುನ್ನ ಮಂಗಳೂರು ರಸ್ತೆಯ ನಿರೀಕ್ಷಣಾ ಮಂದಿರದ ಬಳಿಯಿಂದ ವಿವಿಧ ಸಾಂಸ್ಕೃತಿಕ ಕಲಾತಂಡಗಳ ಸಾಂಸ್ಕೃತಿಕ ಮೆರವಣಿಗೆ ನಡೆಯಿತು. ನಗರಸಭಾಧ್ಯಕ್ಷೆ, ದಸರಾ ಸಮಿತಿ ಅಧ್ಯಕ್ಷೆ ಪಿ.ಕಲಾವತಿ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ಅರುಣ್ ಶೆಟ್ಟಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಕಲಾವಿದೆ ಐಮುಡಿಯಂಡ ರಾಣಿ ಮಾಚಯ್ಯ, ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಕುಡೆಕಲ್ ಸಂತೋಷ್, ತಾಲೂಕು ಅಧ್ಯಕ್ಷರುಗಳಾದ ಎಂ.ಎನ್.ಚAದ್ರಮೋಹನ್, ಟೋಮಿ ಥಾಮಸ್, ಪ್ರಕಾಶ್, ದಿಲನ್ ಚಂಗಪ್ಪ ಹೋಬಳಿ ಅಧ್ಯಕ್ಷರುಗಳಾದ ಪ್ರಶಾಂತ್, ಸುಜಲಾ ದೇವಿ ಇದ್ದರು. ಪೊನ್ನಚ್ಚನ ಮಧುಸೂದನ್ ಸಹಯೋಗದಲ್ಲಿ ಮೂರ್ನಾಡು ಹೋಬಳಿ ಘಟಕದ ಕಾರ್ಯದರ್ಶಿ ಕಿಗ್ಗಾಲು ಹರೀಶ್ ಪ್ರಸ್ತುತ ಪಡಿಸಿದ ಜಾನಪದ ವಸ್ತು ಪ್ರದರ್ಶನವನ್ನು ಶಾಸಕ ಪೊನ್ನಣ್ಣ ಉದ್ಘಾಟಿಸಿದರು.

ಗೌಡ ಮಹಿಳಾ ಒಕ್ಕೂಟದ ಸದಸ್ಯರು ಜಾನಪದ ಗೀತೆ ಹಾಡಿದರೆ, ಜಯಲಕ್ಷಿö್ಮ ಹಾಗೂ ರುಬೀನಾ ನಿರೂಪಿಸಿದರು. ಜಾನಪದ ಪರಿಷತ್ತು ಪ್ರಧಾನ ಕಾರ್ಯದರ್ಶಿ ಮುನೀರ್ ಅಹಮ್ಮದ್ ಸ್ವಾಗತಿಸಿದರು. ಖಜಾಂಚಿ ಎಸ್.ಎಸ್. ಸಂಪತ್‌ಕುಮಾರ್ ವಂದಿಸಿದರು.