ಗೋಣಿಕೊಪ್ಪಲು, ಸೆ.೩೦: ಗೋಣಿಕೊಪ್ಪ ದಸರಾ ಜನೋತ್ಸವ ಅಂಗವಾಗಿ ಶ್ರೀ ಕಾವೇರಿ ದಸರಾ ಸಮಿತಿ ವತಿಯಿಂದ ಕಾವೇರಿ ಕಲಾ ವೇದಿಕೆಯಲ್ಲಿ ಸೈಕ್ಲೋನ್ ಡ್ಯಾನ್ಸ್ ಆಕಾಡೆಮಿ ಹಾಗೂ ಸುವೃತ ನಾಟ್ಯಾಲಯ ಗೋಣಿಕೊಪ್ಪ ಇವರ ವತಿಯಿಂದ ನೃತ್ಯ ಕಾರ್ಯಕ್ರಮಗಳು ಮೂಡಿ ಬಂದವು.

ಸರಿಗಮಪ ಖ್ಯಾತಿಯ ಅನ್ವಿತ್ ಕುಮಾರ್ ನಡೆಸಿಕೊಟ್ಟ ಸಂಗೀತ ರಸಮಂಜರಿ ಕಾರ್ಯಕ್ರಮವು ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಯಿತು. ಸಂಜೆ ೬ ಗಂಟೆಯಿAದ ತಡ ರಾತ್ರಿಯವರೆಗೂ ಉತ್ತಮ ನೃತ್ಯ ಪ್ರದರ್ಶನ ಮೂಡಿ ಬಂದವು. ನಿರೀಕ್ಷೆಗೂ ಮೀರಿದ ಪ್ರೇಕ್ಷಕರು ಆಗಮಿಸಿದ್ದರು. -ಹೆಚ್.ಕೆ.ಜಗದೀಶ್