ಗೋಣಿಕೊಪ್ಪಲು, ಅ.೪: ಗೋಣಿಕೊಪ್ಪ ದಸರಾ ಜನೋತ್ಸವದ ಅಂಗವಾಗಿ ನಡೆದ ಮಂಟಪಗಳ ಶೋಭಾಯಾತ್ರೆ ಜನರ ಮನ ಸೆಳೆಯುವಲ್ಲಿ ಯಶಸ್ವಿಯಾಯಿತು.
-ಹೆಚ್.ಕೆ. ಜಗದೀಶ್‌ಶನಿವಾರಸಂತೆ, ಅ. ೪: ಪಟ್ಟಣದ ತ್ಯಾಗರಾಜ ಕಾಲೋನಿಯ ಶ್ರೀ ಚಾಮುಂಡೇಶ್ವರಿ ದೇವಿ-ಗುಳಿಗ ದೈವದ ಕ್ಷೇತ್ರದಲ್ಲಿ ವಿಜಯದಶಮಿ ಪೂಜಾ ಕೈಂಕರ್ಯ ಶ್ರದ್ಧಾಭಕ್ತಿ ಹಾಗೂ ವಿಜೃಂಭಣೆಯಿAದ ಜರುಗಿತು.
ನವರಾತ್ರಿ ಆರಂಭದ ನವದುರ್ಗೆಯರ ಪ್ರಥಮ ಸ್ವರೂಪ ಶ್ರೀಶೈಲಪುತ್ರಿಯ ಆರಾಧನಾ ಪೂಜೆಯಿಂದ ಮಹಾನವಮಿಯ ಸಿದ್ಧಿಧಾತ್ರಿ ಸ್ವರೂಪದ ಆರಾಧನಾ ಪೂಜೆ ಜೊತೆಗೆ ಆಯುಧಪೂಜೆ ಹಾಗೂ ವಿಜಯದಶಮಿ ಪೂಜೆಯೂ ನೆರವೇರಿತು.
ಕ್ಷೇತ್ರ ಜಾಗದ ವಾರಸುದಾರರಾದ ಉಮಾವತಿ ಗಂಗಪ್ಪ ಕರ್ಕೇರ ಕುಟುಂಬಸ್ಥರು ಹಾಗೂ ಗ್ರಾಮದ ಪ್ರಮುಖ ಭಕ್ತರ ಸೇವಾರ್ಥದೊಂದಿಗೆ ಸುತ್ತಮುತ್ತಲಿನ ಭಕ್ತಾದಿಗಳು ಪ್ರತಿನಿತ್ಯವೂ ದೇವಿ-ದೈವಕ್ಕೆ ವಿವಿಧ ಬಗೆಯ ಹೂವುಗಳಿಂದ ಅಲಂಕಾರ ಮಾಡಿ, ಹಣ್ಣುಕಾಯಿ, ನೈವೇದ್ಯ, ಹಣ್ಣು ಹಂಪಲು, ಮಡ್ಲಕ್ಕಿ, ಸಮರ್ಪಿಸಿ, ನಿಂಬೆಹಣ್ಣಿನ ಆರತಿ ಬೆಳಗಿದರು. ಮಹಾ ಮಂಗಳಾರತಿ ನಡೆದು, ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದ ಭಕ್ತರಿಗೆ ತೀರ್ಥ-ಪ್ರಸಾದ ವಿನಿಯೋಗ ನಡೆಯಿತು.
ಅರ್ಚಕರಾದ ಪ್ರಕಾಶ್ಚಂದ್ರ ಸುವರ್ಣ ಹಾಗೂ ಸಂತೋಷ್ ಕರ್ಕೇರ ಪೌರೋಹಿತ್ಯದಲ್ಲಿ ಪೂಜಾ ವಿಧಿ-ವಿಧಾನಗಳು ನಡೆದವು. ೯ ದಿನಗಳ ನವರಾತ್ರಿ ಪೂಜಾ ಮಹೋತ್ಸವದೊಂದಿಗೆ ಆಯುಧಪೂಜೆ ಹಾಗೂ ವಿಜಯದಶಮಿ ಆಚರಣೆ ಸಂಪನ್ನವಾಯಿತು.