ಮಡಿಕೇರಿ, ಅ. ೨೬ : ಕಾವೇರಿ ತುಲಾ ಸಂಕ್ರಮಣದ “ಪತ್ತಲೋಧಿ” ದಿನದ ಅಂಗವಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಮಡಿಕೇರಿ ಕೋಟೆ, ನಾಲ್ನಾಡ್ ಅರಮನೆ ಆವರಣ ಮತ್ತು ಮುಳ್ಳುಸೋಗೆಯ ಕಾವೇರಿ ನದಿಯ ದಡದಲ್ಲಿ ಹುತಾತ್ಮರಾದ ಹಿರಿಯ ಕೊಡವರಿಗೆ ಇಂದು ಮೀದಿ ಸಮರ್ಪಿಸಿತು.

ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಪುಷ್ಪನಮನದ ಮೂಲಕ ಅಗಲಿದ ಹಿರಿಯರನ್ನು ಸ್ಮರಿಸಿದರು. ಕೊಡವ ಜನಾಂಗೀಯ ಬುಡಕಟ್ಟು ಜನಾಂಗದ ಹತ್ಯೆಗಳು ಎರಡು ಶತಮಾನಗಳಿಗೂ ಹೆಚ್ಚು ಕಾಲ ನಿರಂತರವಾಗಿ ನಡೆದಿದೆ. ಷಡ್ಯಂತ್ರದಿAದ ಪ್ರಾಣ ಕಳೆದುಕೊಂಡ ಅಮಾಯಕ ಹಿರಿಯರನ್ನು ಸ್ಮರಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದರು.

ಜೀವ ಕಳೆದುಕೊಂಡ ಕೊಡವರಿಗೆ ಶಾಂತಿ ಕೋರಿ ಪ್ರಾರ್ಥಿಸಲಾಯಿತು, ಅಲ್ಲದೆ ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ ಮತ್ತು ಏಕ-ಜನಾಂಗೀಯ ಆನಿಮಿಸ್ಟಿಕ್ ಕೊಡವರಿಗೆ ಎಸ್‌ಟಿ ಟ್ಯಾಗ್ ಬೇಕೆಂದು ಒತ್ತಾಯಿಸಿ ಸಿಎನ್‌ಸಿ ನಡೆಸುತ್ತಿರುವ ಹೋರಾಟಕ್ಕೆ ಶಕ್ತಿ ತುಂಬುವAತೆ ಕೋರಲಾಯಿತು ಎಂದು ಎನ್.ಯು. ನಾಚಪ್ಪ ಹೇಳಿದರು.

ಪವಿತ್ರ “ಪತ್ತÀಲೋದಿ” ದಿನದಂದು ಕೊಡವ ಪರಂಪರೆಯನ್ನು ಕಾಪಾಡಿದ ಕೊಡವ ಪೂರ್ವಜರು, ಯೋಧರು ಹಾಗೂ ಬಲಿಯಾದವರನ್ನು ಸಿಎನ್‌ಸಿ ಭಕ್ತಿಪೂರ್ವಕವಾಗಿ ಸ್ಮರಿಸಿಕೊಳ್ಳುತ್ತದೆ ಎಂದು ವಿವರಿಸಿದರು.

೨೦೨೬-೨೭ರಲ್ಲಿ ನಡೆಯುವ ರಾಷ್ಟಿçÃಯ ಜನಗಣತಿಯ ಸಂದರ್ಭ ಕೊಡವರ ಸಾಂವಿಧಾನಿಕ ಮಾನ್ಯತೆ ಮತ್ತು ಸಂರಕ್ಷಣೆಗಾಗಿ ಕೊಡವರಿಗೆ ಪ್ರತ್ಯೇಕ ಕಾಲಂ ಮತ್ತು ಕೋಡ್ ನ್ನು ಅಳವಡಿಸಬೇಕು ಎಂದು ಎನ್.ಯು. ನಾಚಪ್ಪ ಇದೇ ಸಂದರ್ಭ ಒತ್ತಾಯಿಸಿದರು.

ಚಂಬAಡ ಜನತ್, ಅರೆಯಡ ಗಿರೀಶ್, ನಂದೇಟಿರ ರವಿ ಸುಬ್ಬಯ್ಯ, ತೆನ್ನಿರ ಮೈನಾ, ನಂದಿನೆರವAಡ ಬೋಪಣ್ಣ, ಪುಟ್ಟಿಚಂಡ ಡಾನ್ ದೇವಯ್ಯ, ಅಪ್ಪಾರಂಡ ವಿಜು, ಅಪ್ಪಾರಂಡ ಪ್ರಸಾದ್, ಅಪ್ಪಾರಂಡ ವಿವೇಕ್, ಅಪ್ಪಾರಂಡ ಪ್ರಕಾಶ್, ಅರೆಯಡ ಸಾವನ್ ಕೊಡವ, ಕೂಪದಿರ ಮೊಣ್ಣಪ್ಪ, ಕೂಪದಿರ ಶ್ರೀಮತಿ ಮೊಣ್ಣಪ್ಪ ಹಾಗೂ ಮೇಕೇರಿರ ಬಬ್ಬು ಅವರುಗಳು ಹಾಜರಿದ್ದು ಅಗಲಿದ ಹಿರಿಯರಿಗೆ ಗೌರವ ಅರ್ಪಿಸಿದರು.