ಗುಡ್ಡೆಹೊಸೂರು, ಅ. ೨೭: ಇಲ್ಲಿನ ಅರೆಭಾಷೆ ಗೌಡ ಸಮಾಜದ ೧೧ನೇ ವರ್ಷದ ವಾರ್ಷಿಕ ಮಹಾಸಭೆ ಸಮಾಜದ ಅಧ್ಯಕ್ಷ ಗುಡ್ಡೆಮನೆ ವಿಶುಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಂದರ್ಭ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಗೌಡ ಮಹಿಳಾ ಸಂಘದ ಗೌರವಾಧ್ಯಕ್ಷೆ ದೇವಜನ ಗೀತಾ ಮೋಂಟಡ್ಕ ತಮ್ಮ ಮಕ್ಕಳಿಗೆ ಮನೆಯಲ್ಲಿ ಜನಾಂಗದ ಆಚಾರ, ಪÀದ್ಧತಿ, ಪರಂಪರೆ ಮತ್ತು ಭಾಷೆಯ ಬಗ್ಗೆ ತಿಳಿಸಬೇಕು ಅಲ್ಲದೆ ಮನೆಯಲ್ಲಿ ಅರೆಬಾಷೆಯನ್ನೇ ಮಾತನಾಡಲು ಅಭ್ಯಾಸ ಮಾಡಬೇಕು ಎಂದು ಕರೆ ನೀಡಿದರು.

ಈ ಸಂದರ್ಭ ಕೊಡಗು ಗೌಡ ಫೆಡರೇಶನ್ ಕಾರ್ಯದರ್ಶಿ ಪೇರಿಯನ ಉದಯ ಮಾತನಾಡಿ, ಗುಡ್ಡೆಹೊಸೂರಿನ ಗೌಡ ಸಮಾಜದ ನಿವೇಶನದಲ್ಲಿ ಸಮುದಾಯಭವನ ನಿರ್ಮಿಸಲು ಫೆಡರೇಶನ್‌ನಿಂದ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. ಸಮುದಾಯ ಭವನ ನಿರ್ಮಾಣ ಮಾಡಿ ಸಾರ್ವಜನಿಕರು ಸಭೆ ಸಮಾರಂಭ ಮಾಡಲು ಅನುಕೂಲ ಮಾಡಿ ಸಮಾಜಕ್ಕೆ ಮಾದರಿಯಾಗಬೇಕು ಎಂದು ತಿಳಿಸಿದರು. ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನದ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಮಾತನಾಡಿದರು.

ಈ ಸಂದರ್ಭ ಮಕ್ಕಳಿಗೆ ಪ್ರತಿಭಾ ಪುರಾಸ್ಕಾರ ನೀಡಿ ಗೌರವಿಸಲಾಯಿತು. ಅಲ್ಲದೆ ರಾಷ್ಟಿçÃಯ ಮಟ್ಟದಲ್ಲಿ ಸಾಧನೆ ಮಾಡಿದ ಕ್ರೀಡಾಪಟು ಮತ್ತು ರಾಜ್ಯಮಟ್ಟದಲ್ಲಿ ಸಾಧನೆ ಮಾಡಿದ ಸಮಾಜದ ಸದಸ್ಯರ ಮಕ್ಕಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭ ವೇದಿಕೆಯಲ್ಲಿ ಉಪಾಧ್ಯಕ್ಷೆ ಬೊಮ್ಮೆಗೌಡನ ಭುವನೇಶ್ವರಿ ಕಾರ್ಯದರ್ಶಿ ತಾರಹೇಮರಾಜ್. ಸಹಕಾರ್ಯದರ್ಶಿ ಬೊಮ್ಮುಡಿರ ಬಾಲಕೃಷ್ಣ, ನಿರ್ದೇಶಕರಾದ ಕುಡೆಕಲ್ ಗಣೇಶ್, ಚಂಡೀರ ಮಂಜುನಾಥ್, ಕರ್ಣಯ್ಯನ ಬಾಲಕೃಷ್ಣ, ಮಂದೋಡಿ ಜಗನ್ನಾಥ್, ಗುಡ್ಡೆಮನೆ ಜಯ ವಿಶುಕುಮಾರ್, ಕಳಂಜನ ದಾದಪ್ಪ, ನಡುಮನೆ ಪವನ್, ಸಲಹಾ ಸಮಿತಿ ಸದಸ್ಯರಾದ ಅಚ್ಚಾಂಡಿರ ಹೇಮರಾಜ್, ಬೆದ್ರಂಗಾಲ ಭಾರತೀಶ್, ಮಂದೋಡಿ ಹೇಮಚಂದ್ರ, ಚೆರಿಯಮನೆ ಭರತ್, ಬೊಟ್ಟಮನೆ ಸತ್ಯಕುಮಾರ್, ಹಾಜರಿದ್ದರು, ಸತ್ಯಕುಮಾರ್ ಸ್ವಾಗತಿಸಿ, ಮಂಜುನಾಥ್ ವಂದಿಸಿದರು. ಕುಡೆಕ್ಕಲ್ ಗಣೇಶ್ ಕಾರ್ಯಕ್ರಮ ನಿರೂಪಿಸಿದರು.