ಮಡಿಕೇರಿ, ಅ. ೨೭: ಜಮ್ಮಾ ವಿಧೇಯಕ ತಿದ್ದುಪಡಿ ಬದಲಾವಣೆ ವಿಚಾರವಾಗಿ ಕರ್ನಾಟಕ ಭೂ ಕಂದಾಯ ತಿದ್ದುಪಡಿ ವಿಧೇಯಕ ಕುರಿತು ಈ ಹಿಂದೆ ನಡೆದ ವಿಧಾನಸಭಾ ಅಧಿವೇಶನದಲ್ಲಿ ರಚನೆಯಾಗಿರುವ ಪರಿಶೀಲನಾ ಸಮಿತಿಯ ಎರಡನೆಯ ಸಭೆ ಇಂದು ವಿಧಾನಸೌಧದಲ್ಲಿ ಕಂದಾಯ ಸಚಿವರಾದ ಕೃಷ್ಣಭೈರೇಗೌಡ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಆಗಬೇಕಾಗಿರುವ ತಿದ್ದುಪಡಿ ವಿಧೇಯಕಕ್ಕೆ ಸಂಬAಧಿಸಿದ ಕರಡು ಪ್ರತಿಯನ್ನು ಸಿದ್ಧಪಡಿಸಲಾಯಿತು. ಈ ಕರಡು ಪ್ರತಿಯನ್ನು ತಿದ್ದುಪಡಿ, ಬದಲಾವಣೆಗಳು, ಸೇರ್ಪಡೆ, ಕೈ ಬಿಡುವುದು ಮತ್ತಿತರ ಅಂಶಗಳನ್ನು ಮತ್ತೊಮ್ಮೆ ಪರಿಶೀಲಿಸಲು ಪರಿಶೀಲನಾ ಸಮಿತಿ ಸದಸ್ಯರಿಗೆ ಒದಗಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಅಲ್ಲದೆ ಈ ಬಗ್ಗೆ ಅಧಿಕಾರಿಗಳಿಗೆ ಸಚಿವರು ಹಾಗೂ ಸದಸ್ಯರು ಸೂಕ್ತ ನಿರ್ದೇಶನ ಸಲಹೆಗಳನ್ನು ನೀಡಿದ್ದು, ಇದನ್ನು ಅಂತಿಮಗೊಳಿಸಲು ನವೆಂಬರ್ ೧೦ರಂದು ಮತ್ತೆ ಸಭೆ ನಡೆಸಲು ತೀರ್ಮಾನಿಸಲಾಯಿತು. ಈ ಸಭೆಯಲ್ಲಿ ವಿಧೇಯಕವನ್ನು ಅಂತಿಮಗೊಳಿಸಿ ಮುಂದಿನ ಬೆಳಗಾವಿ ಅಧಿವೇಶನದಲ್ಲಿ ಮಂಡಿಸಲು ತಯಾರಿ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ.
ಈ ಸಭೆಯಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ಶಾಸಕರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ, ಮಡಿಕೇರಿ ಶಾಸಕ ಡಾ. ಮಂತರ್ ಗೌಡ, ವಿಧಾನ ಸಭೆಯ ಸದಸ್ಯರುಗಳಾದ ಡಾ. ಸಿ.ಎನ್. ಅಶ್ವಥ್ ನಾರಾಯಣ್ ಡಾ. ಶ್ರೀನಿವಾಸ ಎನ್. ಟಿ, ಭೀಮಣ್ಣ ಟಿ ನಾಯ್ಕ ಭಾಗವಹಿಸಿದ್ದರು. ಕಂದಾಯ ಸಚಿವರು ಈ ತಿದ್ದುಪಡಿ ವಿಧೇಯಕದ ಕುರಿತು ಸಭೆಯಲ್ಲಿ ವಿವರಿಸಿ ಅಧಿಕಾರಿಗಳಿಂದ ವಿವರಣೆ ಪಡೆದರು. ಎ.ಎಸ್. ಪೊನ್ನಣ್ಣ ಅವರು ಸಭೆ ಯಲ್ಲಿ ಕೊಡಗು ಜಿಲ್ಲೆಯ ಜಮ್ಮಾಬಾಣೆ ಭೂಮಿಗೆ ಸಂಬAಧಿಸಿದAತೆ ಸಂಪೂರ್ಣವಾಗಿ ೪ಐದÀನೇ ಪ ವಿವರಿಸಿ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಈ ಸಂದರ್ಭ ಪ್ರಾದೇಶಿಕ ಆಯುಕ್ತರಾದ ಆದಿತ್ಯ ಆಮ್ಲ ಬಿಸ್ವಾಸ್, ಅಪರ ಮುಖ್ಯ ಕಾರ್ಯದರ್ಶಿಗಳು ಕಂದಾಯ ಇಲಾಖೆ ಕಂದಾಯ ಇಲಾಖೆಯ ಉನ್ನತ ಅಧಿಕಾರಿಗಳು, ಕೊಡಗು ಜಿಲ್ಲಾಧಿಕಾರಿಗಳು, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಅಧಿಕಾರಿಗಳು, ವಿಧಾನ ಸಭೆಯ ಸಚಿವಾಲಯದ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಜರಿದ್ದರು.