ಮಡಿಕೇರಿ, ಅ. ೨೭: ಕೊಡವಲ್ಯಾಂಡ್ ಭೂ ರಾಜಕೀಯ ಸ್ವಯಂ ಆಡಳಿತ, ಕೊಡವರಿಗೆ ವಿಶ್ವರಾಷ್ಟç ಸಂಸ್ಥೆಯ ಇಂಡಿಜಿನಸ್ ಪಿಪಲ್ಸ್ ರೈಟ್ಸ್, ಎಸ್.ಟಿ.ಪಟ್ಟಿಯಲ್ಲಿ ವರ್ಗೀಕರಣ, ಸಿಕ್ಕಿಂನ “ಸಂಘ” ಮತಕ್ಷೇತ್ರದಂತೆ ಕೊಡವರಿಗೆ ಪಾರ್ಲಿಮೆಂಟ್ ಮತ್ತು ಎಸೆಂಬ್ಲಿಯಲ್ಲಿ ವಿಶೇಷ ಪ್ರಾತಿನಿಧ್ಯ, ಕೊಡವರ ಪೂರ್ವರ್ಜಿತ ಭೂ ಹಕ್ಕು ಮತ್ತು ಕೊಡವರ ಧಾರ್ಮಿಕ ಸಂಸ್ಕಾರ ತೋಕ್-ಗನ್ ಹಕ್ಕು ಚಿರಸ್ಥಾಯಿಯಾಗಿ ಮುಂದುವರೆಯಬೇಕಾದರೆ ಕೊಡವರ ಪ್ರತ್ಯೇಕ ಗುರುತು ನೋಂದಣಿಯ ಪ್ರಕ್ರಿಯೆ ರಾಷ್ಟಿçÃಯ ಜನಗಣತಿಯಲ್ಲಿ ದಾಖಲಿಕರಣವಾದರೆ ಮಾತ್ರ ಸಾಧ್ಯ ಎಂದು ಸಿ.ಎನ್.ಸಿ ಅಧ್ಯಕ್ಷ ಎನ್.ಯು ನಾಚಪ್ಪ ಹೇಳಿದರು. ಶ್ರೀಮಂಗಲದಲ್ಲಿ ಸಿಎನ್‌ಸಿ ವತಿಯಿಂದ ನಡೆದ ೧೭ನೇ ಮಾನವ ಸರಪಳಿಯಲ್ಲಿ ಮಾತನಾಡಿದ ಅವರು, ೧೮೭೧-೭೨ ರಿಂದ ೧೯೩೧ರ ವರೆಗೆ ನಡೆದ ರಾಷ್ಟಿçÃಯ ಜನಗಣತಿಯಲ್ಲಿ ಕೊಡವರನ್ನು ಧರ್ಮೇತರ ಮತ್ತು ಜಾತಿಯೇತರ ಜನಾಂಗ/ಮೂಲವAಶಸ್ಥ (ರೇಸ್) ಎಂದು ದಾಖಲಿಸಲ್ಪಡುವ ಮೂಲಕ ಕೊಡವರ ಪ್ರತ್ಯೇಕ ಅಸ್ತಿತ್ವ ಮತ್ತು ಸ್ವತಂತ್ರ ವ್ಯಕ್ತಿತ್ವವನ್ನು ಗುರುತಿಸಿ ನಮ್ಮ ಹೆಗ್ಗುರುತು ರಾಜ್ಯ ದಾಖಲೆಯಲ್ಲಿ ನಳನಳಿಸುವಂತಾಗಿತ್ತು. ತದನಂತರ ನಮ್ಮನ್ನು ೨೦೨೧ರ ವರೆಗೆ ಪ್ರತಿ ದಶಮಾನಗಳಿಗೊಮ್ಮೆ ನಡೆಸುವ ರಾಷ್ಟಿçÃಯ ಜನಗಣತಿಯಲ್ಲಿ ಕೊಡವರನ್ನು ಬಲಾಡ್ಯ ಧಾರ್ಮಿಕ ಮತ್ತು ಜಾತಿಯೊಂದಿಗೆ ವಿಲೀನಗೊಳಿಸಿ ನಮ್ಮ ಅಸ್ತಿತ್ವ ಮತ್ತು ಹೆಗ್ಗುರುತು ವಿನಾಶದೊಂದಿಗೆ ಕೊಡವರ ಅಸ್ಮಿತೆ ಮತ್ತು ಸತ್ವವನ್ನು ಧ್ವಂಸ ಮಾಡಲಾಯಿತು. ಮುಂದೆ ಅದು ಕೊಡವರ ಸ್ವಯಂ ನಿರ್ಣಯ ಹಕ್ಕು ಹಾಗೂ ಸಂವಿಧಾನಿಕ ಹಕ್ಕುಗಳ ಧ್ವನಿಯೂ ಪ್ರತಿಪಾದಿಸಲು ಆಗಲಾರದಷ್ಟು ಕ್ಷೀಣಗೊಂಡು ಧಮನಕ್ಕೊಳಗಾಯಿತು ಎಂದರು.
ಕೊಡವರು ಭೂದೇವಿ ಅವರ ಜನ್ಮಭೂಮಿ ಕೊಡವಲ್ಯಾಂಡ್, ಜಲದೇವಿ ಕಾವೇರಿ, ವನದೇವಿ/ದೇವಕಾಡ್, ಪಾರಮಾರ್ಥಿಕ ಮಂದ್, ಧಾರ್ಮಿಕ ಸಂಸ್ಕಾರ, ತೋಕ್-ಗನ್, ಗೆಜ್ಜೆತಂಡ್, ಸೂರ್ಯ-ಚಂದ್ರ, ಪರ್ವತ ದೇವಿ, ಗುರು-ಕಾರೋಣ, ಸ್ವರ್ಗೀಯ ದಿವ್ಯಾತ್ಮಗಳು, ತೂಟಂಗಳ-ಕ್ಯಾಕೋಳ (ಸಮಾಧಿ ಸ್ಥಳ) ಗಳನ್ನು ಪೂಜ್ಯಭಾವನೆಯಿಂದ ಆರಾಧಿಸುತ್ತಾರೆ. ಸಪ್ತಪದಿ ಇಲ್ಲದ ಮದುವೆ, ಮಂಗಳ ಸೂತ್ರ ಪದ್ಧತಿ ಇಲ್ಲದ ಮದುವೆಯ ಮುನ್ನದಿನ ರಾತ್ರಿ ಮಧುಮಗಳ ತಾಯಿ ಮಧುಮಗಳ ಕೊರಳಿಗೆ ಪವಿತ್ರ ‘ಪತ್ತಾಕ್’ ಕಟ್ಟುವ ವಿಶಿಷ್ಟ ಪರಂಪರೆ ನಡೆದು ಬಂದಿದೆ. ಕೊಡವರ ಎಲ್ಲಾ ಶುಭಕಾರ್ಯ, ಅಶುಭಕಾರ್ಯಗಳಲ್ಲಿ ಮದ್ಯ ಸಮರಾಧನೆ ಮತ್ತು ಪಂದಿಕರಿ ಭೋಜನ ಕಡ್ಡಾಯ. ತೋಕ್-ಗನ್ ಎಲ್ಲಾ ಕಾರ್ಯದಲ್ಲೂ ಪೂಜಾ ಪರಿಕರವಾಗಿ ಬಳಸುತ್ತೇವೆ. ಈ ರೀತಿಯ ಸಂಸ್ಕಾರವನ್ನ ಆ್ಯನಿಮಿಸ್ಟಿಕ್ ನಂಬಿಗೆಯ ಜನರೆಂದು ವಿಶ್ವರಾಷ್ಟ್ರ ಸಂಸ್ಥೆ ಗುರುತಿಸಿದೆ. ಉದಾಹರಣೆಗೆ ಮಧ್ಯಪ್ರಾಚ್ಯ ದೇಶದ ಸಿಂಜಾರ್ ಪರ್ವತದ “ಯಜೀದಿ” ಜನಾಂಗ, ಆಫ್ಗಾನಿಸ್ಥಾನ-ಪಾಕಿಸ್ತಾನದ ಗಡಿಗೆ ತಾಗಿಕೊಂಡಿರುವ ಹಿಂದೂ ಕುಶ್ ಕಣಿವೆಯ ಚಿತ್ರಾಲ್ ಪರ್ವತದ “ಕಲಾಶ್” ಜನಾಂಗ, ಇವರನ್ನು ವಿಶ್ವ ರಾಷ್ಟ್ರ ಸಂಸ್ಥೆಯ ಯುನೆಸ್ಕೊದ ಇಂಟ್ಯಾAಜಿಬಲ್ ಕಲ್ಚರಲ್ ಹೆರಿಟೇಜ್ ಪಟ್ಟಿಯಲ್ಲಿ ಸೇರಿಸಿದೆ. ಅದೇ ರೀತಿ ಕೊಡವರಿಗೆ ರಾಜ್ಯಾಂಗ ಖಾತ್ರಿ ದೊರಕಬೇಕು ಎಂದರು.
ಮುAದಿನ ೧೮ನೇ ಕೊಡವ ಮಾನವ ಸರಪಳಿ ನವೆಂಬರ್ ೫ ರಂದು ಬುಧವಾರ ಬೆಳಿಗ್ಗೆ ೧೦.೩೦ ಗಂಟೆಗೆ ಬಿಟ್ಟಂಗಾಲದಲ್ಲಿ ನಡೆಯಲಿದ್ದು, ೧೯ನೇ ಕೊಡವ ಮಾನವ ಸರಪಳಿ ನವೆಂಬರ್ ೧೦ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಅಂಜಿಗೇರಿನಾಡ್‌ನ ಪುದಿಕೇರಿ (ಹುದಿಕೇರಿ) ಯಲ್ಲಿ ನಡೆಯಲಿದೆ ಎಂದು ಎನ್.ಯು.ನಾಚಪ್ಪ ತಿಳಿಸಿದರು.
ಕಾರ್ಯಕ್ರಮದಲ್ಲಿ ಅಜ್ಜಮಾಡ ಸಾವಿತ್ರಿ, ಅಜ್ಜಮಾಡ ಅಕ್ಕಮ್ಮ, ಬಾಚರಣಿಯಂಡ ಚಿಪ್ಪಣ್ಣ, ಅಜ್ಜಮಾಡ ಮೋಹನ್, ಚೊಟ್ಟೆಯಂಡಮಾಡ ಉದಯ, ಅಜ್ಜಿಕುಟ್ಟೀರ ಲೋಕೇಶ್, ಬೊಟ್ಟಂಗಡ ಗಿರೀಶ್, ಕಿರಿಯಮಾಡ ಶೆರಿನ್, ಇಟ್ಟೀರ ರಾಜು, ಅಜ್ಜಮಾಡ ರಂಜಿ, ಅಪ್ಪೆಂಗಡ ಮಾಲೆ ಪೂಣಚ್ಚ, ಬೊಳ್ಳಜಿರ ಅಶೋಕ್, ಅಜ್ಜಮಾಡ ಬೋಪಣ್ಣ, ಮಾಣಿರ ಸಂಪತ್, ಅಯ್ಯಮಾಡ ಚಿಟ್ಟು, ಬೊಳಿಯಂಗಡ ನಿಶಾಂತ್, ಮದ್ರೀರ ವಿಷ್ಣು, ಚಂಗುಲAಡ ರಾಜಪ್ಪ, ಮಚ್ಚಮಾಡ ಮೇದಪ್ಪ, ಚೊಟ್ಟೆಯಂಡಮಾಡ ಸತೀಶ್, ಚೊಟ್ಟಂಗಡ ಜಪ್ಪು, ಚಿರಿಯಪಂಡ ಬೋಪಣ್ಣ, ಕಳ್ಳಂಗಡ ವಿಠಲ್, ಅಜ್ಜಮಾಡ ವಿಠಲ್, ಚೊಟ್ಟೆಯಂಡಮಾಡ ದೀಪಕ್, ಬೊಟ್ಟಂಗಡ ನವೀನ್, ಕುಂಞAಗಡ ಬೋಸ್, ಕೊಟ್ರಂಗಡ ಪೊನ್ನಣ್ಣ, ಅಯ್ಯಮಾಡ ಸೋಮೇಶ್, ಮಾಣಿರ ಮುತ್ತಪ್ಪ, ಕಳ್ಳಂಗಡ ಶರಣು, ಚಂಗುಲAಡ ಸುರೇಶ್, ನಲ್ಲಪಟ್ಟಿರ ಬೊಳ್ಳಿಯಪ್ಪ, ಬೊಟ್ಟಂಗಡ ಶರತ್, ಬಾಚಂಗಡ ಮುದ್ದು, ಕಳ್ಳಂಗಡ ಪೊನ್ನಣ್ಣ, ಕಾಳಿಮಾಡ ಹರೀಶ್ ಅಣ್ಣಯ್ಯ, ಅಪ್ಪಂಡೇರAಡ ಸುರೇಶ್, ಮಚ್ಚಮಾಡ ಕರುಂಬಯ್ಯ, ಬಾದುಮಂಡ ಕಟ್ಟಿ, ಅಜ್ಜಮಾಡ ಅಯ್ಯಣ್ಣ, ಮನ್ನೆರ ಮೊಣ್ಣಪ್ಪ, ದೇಕಮಾಡ ಬೊಳ್ಳಿಯಪ್ಪ, ತೀತಿರ ಸಾಬು ಮೋಟಯ್ಯ, ಅಜ್ಜಮಾಡ ವಿಶ್ವನಾಥ್, ಕಟ್ಟೇರ ಉದಯ, ಕಲ್ಲಂಗಡ ಕಿಟ್ಟು ಬೊಳ್ಳಿಯಪ್ಪ, ಬಾಚಂಗಡ ಭವಿ ಕುಮಾರ್, ನಾಯಕಂಡ ರಾಜ, ಅಜ್ಜಮಾಡ ಜಗದೀಶ್ ಬೋಪಣ್ಣ ಪಾಲ್ಗೊಂಡಿದ್ದರು.