ಗೋಣಿಕೊಪ್ಪ ವರದಿ, ಅ. ೨೭ ; ಹಾಕಿಕೂರ್ಗ್ ವತಿಯಿಂದ ನಡೆಯುತ್ತಿರುವ ಹಾಕಿ ಲೀಗ್ ಟೂರ್ನಿಯಲ್ಲಿ ನಾಪೋಕ್ಲು ಶಿವಾಜಿ, ಕಡಿಯತ್ನಾಡ್, ಅಮ್ಮತ್ತಿ ರಾಯಲ್ಸ್,
ಕ್ಗ್ಗಟ್ನಾಡ್ ಫ್ಲೆöÊಯಿಂಗ್ ಎಲ್ಬೋಸ್ ಹಾಗೂ ನೀಲಿಯತ್ ಕೋಕೇರಿ ತಂಡಗಳು ಗೆಲುವು ಪಡೆದುಕೊಂಡವು.
ಕಡಿಯತ್ನಾಡ್ ವಾರಿಯರ್ಸ್ ತಂಡವು ಡ್ರಿಬ್ಲ್ ಹೆಂಪ್ ವಿರುದ್ಧ ಜಯ ಸಾಧಿಸಿತು. ಕಡಿಯತ್ನಾಡ್ ೩, ಹೆಂಪ್ ೧ ಗೋಲು ದಾಖಲಿಸಿತು. ಕಡಿಯತ್ನಾಡ್ ಪರ ಹರ್ಷಿತ್ ೨, ಸುಜನ್ ಬೋಪಣ್ಣ, ಹೆಂಪ್ ಆಟಗಾರ ವಿನೋದ್ ತಲಾ ಒಂದೊAದು ಗೋಲು ದಾಖಲಿಸಿದರು.
ನಾಪೋಕ್ಲು ಶಿವಾಜಿ ತಂಡವು ವೀರಾಜಪೇಟೆ (ಎ) ವಿರುದ್ಧ ಗೆದ್ದು ಬೀಗಿತು. ಶಿವಾಜಿ ೧೩ ಗೋಲು ದಾಖಲು ಮಾಡಿತು. ಶಿವಾಜಿ ಪರ ಅನಿಶ್ ಹಾಗೂ ಪುನಿತ್ ತಲಾ ೩ ಗೋಲು ದಾಖಲಿಸಿದರು. ಶುಭಂ, ರೋಹನ್ ತಲಾ ೨, ಬಿಪಿನ್, ಯತಿನ್ ತಲಾ ಒಂದೊAದು ಗೋಲು ಬಾರಿಸಿದರು.
ಅಮ್ಮತ್ತಿ ರಾಯಲ್ಸ್ ತಂಡವು ಅಮ್ಮತ್ತಿ ವಾರಿಯರ್ಸ್ ವಿರುದ್ದ ಜಯ ಪಡೆದುಕೊಂಡಿತು. ರಾಯಲ್ಸ್ ೩, ವಾರಿಯರ್ಸ್ ೧ ಗೋಲು ದಾಖಲಿಸಿತು. ರಾಯಲ್ಸ್ ಪರ ಪ್ರತಿಕ್, ಮ್ಯಾಕ್, ಬೆಳ್ಯಪ್ಪ, ವಾರಿಯರ್ ಪರ ನಮನ್ ತಲಾ ಒಂದೊAದು ಗೋಲುಗಳ ಕಾಣಿಕೆ ನೀಡಿದರು.
ಕ್ಗ್ಗಟ್ನಾಡ್ ಫ್ಲೆöÊಯಿಂಗ್ ಎಲ್ಬೋಸ್ ಮತ್ತು ಕಿರಗೂರು ಸ್ಪೋರ್ಟ್ಸ್ ಕ್ಲಬ್ ತಂಡಗಳ ನಡುವಿನ ಪಂದ್ಯ ಡ್ರಾದಲ್ಲಿ ಅಂತ್ಯವಾಯಿತು. ಉಭಯ ತಂಡಗಳು ೧ ಗೋಲುಗಳ ಸಮನಾಂತರ ಸಾಧಿಸಿದರು. ಕ್ಗ್ಗಟ್ನಾಡ್ ಪರ ತಿಮ್ಮಣ್ಣ, ಕಿರ್ಗೂರ್ ಪರ ಅಕ್ಷಿತ್ ಗೋಲು ಬಾರಿಸಿದರು.
ಬೊಳಿಯೂರ್ (ಎ) ವಿರುದ್ದ ನೀಲಿಯತ್ ಕೋಕೇರಿ ವಾಕ್ ಓವರ್ ಮೂಲಕ ಜಯಿಸಿತು.