ಕಣಿವೆ, ಅ. ೨೮: ಉದ್ದೇಶಿತ ಕೂಡಿಗೆಯಿಂದ ಕುಶಾಲನಗರ ಸಂಪರ್ಕದ ರಾಜ್ಯ ಹೆದ್ದಾರಿಯ ರೂ. ೪.೫ ಕೋಟಿ ವೆಚ್ಚದ ಡಾಂಬರೀಕರಣ ಕಾಮಗಾರಿಗೆ ಜಲಮಂಡಳಿ ವತಿಯಿಂದ ನಡೆಯುತ್ತಿರುವ ಕುಡಿಯುವ ನೀರು ಪೂರೈಕೆ ಕಾಮಗಾರಿ ವಿಘ್ನವಾಗಿದೆ.

ಕುಶಾಲನಗರ ಪುರಸಭೆ ವ್ಯಾಪ್ತಿಯ ನಾಗರಿಕರಿಗೆ ಕುಡಿಯುವ ನೀರು ಪೂರೈಸಲು ಹಳೆ ಕೂಡಿಗೆಯ ಬಳಿಯ ಕಾವೇರಿ ಹಾಗೂ ಹಾರಂಗಿ ನದಿಗಳ ಸಂಗಮದಿAದ ಕುಶಾಲನಗರದ ಜಲಮಂಡಳಿಯವರೆಗೆ ರೂ. ೪.೫ ಕೊಟಿ ವೆಚ್ಚದಲ್ಲಿ ನಡೆಯುತ್ತಿರುವ ಕುಡಿಯುವ ನೀರು ಪೈಪ್‌ಲೈನ್ ಕಾಮಗಾರಿಯ ಮಂದಗತಿ ಕಾರಣ ಎನ್ನಲಾಗಿದೆ. ಹಳೆ ಕೂಡಿಗೆಯಿಂದ ಕುಶಾಲನಗರದವರೆಗೂ ರಾಜ್ಯ ಹೆದ್ದಾರಿ ಬದಿಯಲ್ಲಿ ನೀರು ಸರಬರಾಜು ಪೈಪುಗಳನ್ನು ಅಳವಡಿಸಲು ರಸ್ತೆಯನ್ನು ಅಗೆದ ಪರಿಣಾಮ ಅಲ್ಲಲ್ಲಿ ಪೈಪು ಮಾರ್ಗದ ರಸ್ತೆಯ ಬದಿಯಲ್ಲಿ ಮಣ್ಣು ಕುಸಿತವಾಗುತ್ತಿದೆ.ಜಲಮಂಡಳಿ ವತಿಯಿಂದ ನಡೆದ ಪೈಪುಗಳ ಜೋಡಣೆ ಕಾಮಗಾರಿಯ ಮಾರ್ಗದಲ್ಲಿ ಮತ್ತೆ ವೆಟ್‌ಮಿಕ್ಸ್ ಅಳವಡಿಸಿ ಇಂಟರ್‌ಲಾಕ್ ಜೋಡಿಸಿ ರಸ್ತೆಯ ಸುಸ್ಥಿತಿಗೆ ಕೈಜೋಡಿಸಬೇಕಾದ ಜಲಮಂಡಳಿ ಅಧಿಕಾರಿಗಳು ಮಂದಗತಿ ಧೋರಣೆ ಅನುಸರಿಸಿದ ಪರಿಣಾಮ ಇತ್ತ ಕೂಡಿಗೆ ಕುಶಾಲನಗರ ರಸ್ತೆ ಡಾಂಬರೀಕರಣ ಕಾಮಗಾರಿ ವಿಳಂಬವಾಗುತ್ತಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೂಡಲೇ ಜಲಮಂಡಳಿ ಅಧಿಕಾರಿಗಳು ಪೈಪು ಜೋಡಣೆ ಕಾಮಗಾರಿ ಪೂರ್ಣಗೊಳಿಸಿ ರಸ್ತೆಯನ್ನು ಬಿಟ್ಟುಕೊಡುವ ಮೂಲಕ ಹೆದ್ದಾರಿಯ ಸುವ್ಯವಸ್ಥೆಗೆ ಮುಂದಾಗಬೇಕೆAದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.