ಕುಶಾಲನಗರ, ಅ. ೩೦ : ಭಾರತ ವಿದ್ಯಾರ್ಥಿ ಫೆಡರೇಷನ್, ಮೈಸೂರು ಜಿಲ್ಲಾ ಸಮಿತಿ ವತಿಯಿಂದ ವಿದ್ಯಾರ್ಥಿಗಳ ಸಾರ್ವಜನಿಕ ವಸತಿ ನಿಲಯಗಳ ಬಲವರ್ಧನೆಗಾಗಿ ರಾಜ್ಯವ್ಯಾಪ್ತಿ ಹಮ್ಮಿಕೊಂಡಿರುವ ಎಸ್.ಎಫ್.ಐ ಶೈಕ್ಷಣಿಕ ಜಾಥಾ ಕುಶಾಲನಗರಕ್ಕೆ ಆಗಮಿಸಿತು.
ತಾ. ೧೩ ರಂದು ದಾವಣಗೆರೆಯಲ್ಲಿ ಚಾಲನೆಗೊಂಡ ಜಾಥಾ ಎಲ್ಲೆಡೆ ಸಂಚರಿಸಿ ಸರ್ಕಾರದ ಗಮನ ಸೆಳೆದು ಬೇಡಿಕೆಗಳನ್ನು ಈಡೇರಿಸುವಂತೆ ಜಾಥಾದ ಮೂಲಕ ಒತ್ತಾಯಿಸಲಾಗುತ್ತಿದೆ.
ಜಾಥಾದ ಉದ್ದೇಶದ ಬಗ್ಗೆ ಎಸ್.ಎಫ್.ಐ. ರಾಜ್ಯ ಅಧ್ಯಕ್ಷ ಅಂಬ್ಲಿಕಲ್ ಶಿವಪ್ಪ ಹಾಗೂ ರಾಜ್ಯ ಸಮಿತಿ ಸದಸ್ಯರಾದ ಅರ್ಪಿತಾ ಗ್ರೇಸಿ ವಿ. ಅವರು ಮಾಹಿತಿ ನೀಡಿದರು. ಈ ಸಂದರ್ಭ ಎಸ್.ಎಫ್.ಐ. ರಾಜ್ಯ ಕಾರ್ಯದರ್ಶಿ ವಿಜಯ್ ಕುಮಾರ್ ಟಿ.ಎಸ್., ರಾಜ್ಯ ಮುಖಂಡರಾದ ವಿನೀತ್, ರಜಿಯಾ ಯಾಸ್ಮಿನ್ ಹಾಗೂ ಮಣಿ ಭಾರದಿ ಇದ್ದರು.