ಗೋಣಿಕೊಪ್ಪಲು, ಅ.೩೦: ಕಳೆದ ೩೦ ವರ್ಷಗಳಿಂದ ನಾನಾ ಕಾರಣಗಳಿಂದ ನೆನೆಗುದಿಗೆ ಬಿದ್ದಿರುವ ಕೂಟಿಯಾಲ ರಸ್ತೆಯ ಬಗ್ಗೆ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಮಾಲೋಚನೆ ನಡೆಸಿ ಸ್ಥಳೀಯ ಮುಖಂಡರ ಅಭಿಪ್ರಾಯವನ್ನು ಸಂಗ್ರಹಿಸಿದರು.

ಪೊನ್ನAಪೇಟೆ ತಾಲೂಕು ಬಿ.ಶೆಟ್ಟಿಗೇರಿಯ ಕೂಟಿಯಾಲ ಸೇತುವೆಯ ವೀಕ್ಷಣೆ ಮಾಡಿದ ಶಾಸಕರು, ಕೂಟಿಯಾಲ ರಸ್ತೆ ಹಾಗೂ ಸೇತುವೆ ವಿಷಯ ಈಗಾಗಲೇ ನ್ಯಾಯಾಲಯದಲ್ಲಿರುವುದರಿಂದ ಇದಕ್ಕೆ ಸೂಕ್ತ ರೀತಿಯ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಒಂದೆಡೆ ಪ್ರಯತ್ನ ಸಾಗುತ್ತಿದ್ದರೆ ಮತ್ತೊಂದೆಡೆ ಕಾನೂನಿನ ತೊಡಕ್ಕಿಲ್ಲದೆ ಬದಲಿ ಮಾರ್ಗದ ಮೂಲಕ ಬಿರುನಾಣಿ ಸುತ್ತಮುತ್ತಲ ಗ್ರಾಮದಿಂದ ನಾಗರಿಕರು ವೀರಾಜಪೇಟೆ ನಗರಕ್ಕೆ ತೆರಳಲು ಅಗತ್ಯವಿರುವ ಮಾರ್ಗದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಹಲವು ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಕೂಟಿಯಾಲ ಸಂಪರ್ಕ ರಸ್ತೆ ವಿಚಾರವಾಗಿ ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಕೊಲ್ಲಿರ ಬೋಪಣ್ಣ, ಶಾಸಕ ಪೊನ್ನಣ್ಣ ಅವರ ಗಮನ ಸೆಳೆದಿದ್ದರು. ಅಲ್ಲದೆ ಶಾಸಕರನ್ನು ಹಾಗೂ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಖುದ್ದಾಗಿ ಕೂಟಿಯಾಲ ಸೇತುವೆ ಬಳಿ ಕರೆದೊಯ್ದು ಅಲ್ಲಿನ ನೈಜ್ಯ ಪರಿಸ್ಥಿತಿಯನ್ನು ಶಾಸಕ ಪೊನ್ನಣ್ಣನವರಿಗೆ ಮನದಟ್ಟು ಮಾಡಿದರು. ಗ್ರಾಮದ ಜನತೆಗೆ ಆಗುವ ಪ್ರಯೋಜನದ ಬಗ್ಗೆ ಶಾಸಕರಲ್ಲಿ ಪ್ರಸ್ತಾಪ ಸಲ್ಲಿಸಿದರು.

ದುರ್ಗಮ ದಾರಿಯಲ್ಲಿ ಮಳೆಯ ನಡುವೆ ಕಾಲ್ನಡಿಗೆಯಲ್ಲಿಯೇ ಕೂಟಿಯಾಲ ಸೇತುವೆ ಬಳಿ ತೆರಳಿದ ಶಾಸಕ ಪೊನ್ನಣ್ಣ, ಸ್ಥಳದಲ್ಲಿದ್ದ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದರು. ಸಮೀಪದ ಹೊಟ್ಟುಮಾನಿ ಬಳಿಯ ಅರಣ್ಯ ಕಚೇರಿಗೆ ತೆರಳಿ ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸುವ ಮೂಲಕ ಪರ್ಯಾಯ ಮಾರ್ಗಗಳ ಬಗ್ಗೆ ಅಧಿಕಾರಿಗಳಿಂದ ವಿವರ ಪಡೆದರು.

ಈ ವೇಳೆ ಸ್ಥಳದಲ್ಲಿದ್ದ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಪರ್ಯಾಯ ರಸ್ತೆ ಮಾರ್ಗಗಳ ಬಗ್ಗೆ ನೀಲ ನಕ್ಷೆಯೊಂದಿಗೆ ಶಾಸಕ ಪೊನ್ನಣ್ಣನವರಿಗೆ ವಿವರಗಳನ್ನು ಒದಗಿಸಿದರು. ೪ನಾಲ್ಕನೇ ಪುಟಕ್ಕೆ ಕೂಟಿಯಾಲ ಸೇತುವೆ ಸ್ಥಳದಲ್ಲಿ ಅರಣ್ಯ ಪ್ರದೇಶ ಇರುವ ಕಾರಣ ರಸ್ತೆ ಮಾರ್ಗಕ್ಕೆ ಕೇಂದ್ರ ಅರಣ್ಯ ಇಲಾಖೆಯ ಒಪ್ಪಿಗೆ ದೊರೆಯುವುದು ಕಷ್ಟ ಸಾಧ್ಯವಾಗಿರುವುದರಿಂದ ಬದಲಿ ಮಾರ್ಗ ಸೂಕ್ತವೆಂದು ಅಧಿಕಾರಿಗಳು ಶಾಸಕರಿಗೆ ವಿವರಿಸಿದರು.

ಸಾರ್ವಜನಿಕರ ಬೇಡಿಕೆಯ ಹಿನ್ನಲೆಯಲ್ಲಿ ಶಾಸಕರು ಅಧಿಕಾರಿಗಳ ಹಾಗೂ ಸಾರ್ವಜನಿಕರ ಅಭಿಪ್ರಾಯಗಳನ್ನು ಸಂಗ್ರಹಿಸಿದರು. ಕಳೆದ ೩೦ ವರ್ಷಗಳಿಂದ ಸಮಸ್ಯೆ ನ್ಯಾಯಾಲಯದ ಮುಂದಿರುವುದರಿAದ ಸಮಸ್ಯೆ ಪರಿಹಾರಕ್ಕೆ ಪ್ರಯತ್ನ ಮಾಡುವ ಕಾರ್ಯ ಒಂದೆಡೆಯಾದರೆ, ಪರ್ಯಾಯ ಮಾರ್ಗದ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಸುದೀರ್ಘವಾಗಿ ಚರ್ಚಿಸಿದರು.

ಭೇಟಿಯ ವೇಳೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಡಿಕೇರಿ ಸೋನಾಲ್ ವೃಷ್ಟಿ, ವೀರಾಜಪೇಟೆ ಡಿಸಿಎಫ್ ಹೆಚ್. ಜಗನ್ನಾಥ್, ಮಡಿಕೇರಿ ಡಿಸಿಎಫ್ ಕೆ.ಎ.ನೆಹರು, ಎಸಿಎಫ್ ವಿ.ಪಿ.ಕಾರ್ಯಪ್ಪ, ಕೆ.ಪಿ.ಗೋಪಾಲ್, ಡಿಆರ್‌ಎಫ್‌ಒ ಕಿರಣ್ ಗಣೇಶ್ ಆಚಾರ್ಯ, ವಲಯ ಅರಣ್ಯಾಧಿಕಾರಿಗಳಾದ ಶಂಕರ್, ತ್ಯಾಗರಾಜ್, ಅರವಿಂದ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಭೇಟಿಯ ವೇಳೆ ಹಾಜರಿದ್ದರು.

ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೊಲ್ಲಿರ ಬೋಪಣ್ಣ, ಬಗರ್ ಹುಕುಂ ತಾಲೂಕು ಅಧ್ಯಕ್ಷ ಲಾಲಾ ಅಪ್ಪಣ್ಣ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಉಮೇಶ್ ಕೇಚಮಯ್ಯ, ಪ್ರಮುಖರುಗಳಾದ ರೋಹಿತ್, ಅನು, ಅಯ್ಯಪ್ಪ, ಜಗನ್, ರಾಜ, ಈರಪ್ಪ, ನಂದ, ಅಣ್ಣಳಮಾಡ ಹರೀಶ್, ಕುಪ್ಪಣಮಾಡ ಪ್ರೀತಮ್, ಜೀತು, ರಶೀದ್, ಅರಣ್ಯ ಇಲಾಖೆಯ ಅಧಿಕಾರಿಗಳು, ಪಕ್ಷದ ಪ್ರಮುಖರು ಹಾಗೂ ಬಿರುನಾಣಿ ಗ್ರಾಮ ಪಂಚಾಯಿತಿಯ ಹಲವು ಸದಸ್ಯರುಗಳು ಉಪಸ್ಥಿತರಿದ್ದರು. -ಹೆಚ್.ಕೆ.ಜಗದೀಶ್