ಮಡಿಕೇರಿ, ನ. ೬: ಶನಿವಾರಸಂತೆಯಲ್ಲಿ ನಡೆದ ಕೊಡಗು ಜಿಲ್ಲಾಮಟ್ಟದ ೧೪ ವರ್ಷ ವಯೋಮಿತಿಯ ಬಾಲಕರ ಫುಟ್ಬಾಲ್ ಪಂದ್ಯಾವಳಿಯಲ್ಲಿ ವೀರಾಜಪೇಟೆ ತಾಲೂಕು ತಂಡವನ್ನು ಪ್ರತಿನಿಧಿಸಿದ ಹುಂಡಿ ಮರ್ಕಝ್ ಪಬ್ಲಿಕ್ ಶಾಲಾ ತಂಡವು ವಿಭಾಗಮಟ್ಟಕ್ಕೆ ಆಯ್ಕೆಯಾಗಿದೆ. ಸೆಮಿಫೈನಲ್ ಪಂದ್ಯದಲ್ಲಿ ಮಡಿಕೇರಿ ತಾಲೂಕು ತಂಡವನ್ನು ೩-೦ ಗೋಲುಗಳಿಂದ ಮಣಿಸಿ ಫೈನಲ್ ಪ್ರವೇಶಿಸಿ, ಫೈನಲ್‌ನಲ್ಲಿ ಸೋಮವಾರಪೇಟೆ ತಂಡವನ್ನು ಸಿನಾನ್ ಬಾರಿಸಿದ ೧ ಗೋಲುಗಳಿಂದ ಮಣಿಸಿ ವಿಭಾಗಮಟ್ಟಕ್ಕೆ ಆಯ್ಕೆಯಾಗಿದೆ. ಹುಂಡಿ ತಂಡಕ್ಕೆ ದೈಹಿಕ ಶಿಕ್ಷಣ ಶಿಕ್ಷಕ ನಾಸಿರ್ ಹಾಗೂ ರದೀಶ್ ತರಬೇತಿ ನೀಡಿದರು.