ಮಡಿಕೇರಿ, ನ. ೭: ಸಮಸ್ತ ಕನ್ನಡಿಗರು ಕರ್ನಾಟಕ ಸಂಸ್ಥೆಯ ಕೊಡಗು ಜಿಲ್ಲಾ ಘಟಕದಿಂದ ಮಡಿಕೇರಿ ನಗರದ ಓಂಕಾರೇಶ್ವರ ದೇಗುಲದ ಸಮೀಪದ ಓಂಕಾರ ಸದನದಲ್ಲಿ ನಿಮ್ಮ ಪ್ರತಿಭೆ ನಮ್ಮ ವೇದಿಕೆ ಸಾಂಸ್ಕೃತಿಕ ಹಬ್ಬ ಇದೇ ತಾ. ೯ ರಂದು ಆಯೋಜಿತವಾಗಿದೆ.

ಸಾಹಿತಿ ಡಾ. ನಡಿಬೈಲು ಉದಯಶಂಕರ್ ಕಾರ್ಯಕ್ರಮವನ್ನು ಬೆಳಗ್ಗೆ ೧೦ ಗಂಟೆಗೆ ಉದ್ಘಾಟಿಸಲಿದ್ದಾರೆ.

ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಮೇಜರ್ ಬಿ. ರಾಘವ ಹಾಗೂ ಸಮರ್ಥ ಕನ್ನಡಿಗರು ಸಂಸ್ಥೆ ಕರ್ನಾಟಕದ ಸಂಸ್ಥಾಪಕ ಲಿಂಗೇಶ್ ಹುಣಸೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮರ್ಥ ಕನ್ನಡಿಗರು ಸಂಸ್ಥೆ ಕೊಡಗು ಘಟಕದ ಪ್ರಧಾನ ಸಂಚಾಲಕಿ ಜಯಲಕ್ಷಿö್ಮ ಕೆ. ವಹಿಸಲಿದ್ದಾರೆ.

ಎರಡು ವಿಭಾಗಗಳಲ್ಲಿ ಪುಟಾಣಿ ಮಕ್ಕಳಿಗೆ ಛದ್ಮ ವೇಷ ಸ್ಪರ್ಧೆ, ಪ್ರಾಥಮಿಕ ಮಕ್ಕಳಿಗೆ ಸಮೂಹ ನೃತ್ಯ, ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ ಜಾನಪದ ನೃತ್ಯ,ಪದವಿ ವಿದ್ಯಾರ್ಥಿಗಳಿಗೆ ಸಮೂಹ ನೃತ್ಯ ಮತ್ತು ಮಹಿಳೆಯರಿಗೆ ಗೀತ ಗಾಯನ ಸ್ಪರ್ಧೆ, ಪದವಿ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ನಡೆಯಲಿದೆ.

ಆಯ್ದ ಕವಿಗಳಿಂದ ಕವಿಗೋಷ್ಠಿ ಆಯೋಜಿತವಾಗಿದೆ. ಸಮರ್ಥ ಕನ್ನಡಿಗರು ಸಂಸ್ಥೆಯ ರಾಜ್ಯ ಘಟಕದ ಸಂಚಾಲಕರಾದ ಆನಂದ ದೆಗ್ಗನಹಳ್ಳಿ ಅವರು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದಾರೆ.

ಅಂದು ಸಂಜೆ ೩ ಗಂಟೆಗೆ ನೆರವೇರಲಿರುವ ಗೌರವಾರ್ಪಣಾ ಸಮಾರಂಭ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮರ್ಥ ಕನ್ನಡಿಗರು ಸಂಸ್ಥೆಯ ಸಂಸ್ಥಾಪಕ ಲಿಂಗೇಶ್ ಹುಣಸೂರು ವಹಿಸಲಿದ್ದಾರೆ. ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಅನಿಲ್ ಎಚ್.ಟಿ. ಹಾಗೂ ಲಯನ್ ಸಂಸ್ಥೆಯ ಅಧ್ಯಕ್ಷ ನವೀನ್ ಅಂಬೆಕಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಇದೇ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರಿಗೆ ಸಮರ್ಥ ಕನ್ನಡಿಗ ಎನ್ನುವ ಗೌರವಾರ್ಪಣೆ ಸಲ್ಲಲಿದ್ದು ಓಂಕಾರೇಶ್ವರ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಎ.ಸಿ ದೇವಯ್ಯ ಸಾಧಕರನ್ನು ಸನ್ಮಾನಿಸಲಿದ್ದಾರೆ.

ಕಾವಡಿಯ ಕಾಮಧೇನು ಗೋ ಶಾಲೆಯ ರಾಮಚಂದ್ರ ಭಟ್ (ಗೋ ಪಾಲನೆ) ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ( ಸಮಾಜ ಸೇವೆ), ಕಡಗದಾಳು ಗ್ರಾಮದ ಮಾದೇಟಿರ ಬೆಳ್ಯಪ್ಪ (ರಂಗಭೂಮಿ) ಮಡಿಕೇರಿಯ ಚೆರಿಯಮನೆ ಡಾ. ಪ್ರಶಾಂತ್ ( ವೈದ್ಯಕೀಯ ಕ್ಷೇತ್ರ),ಕೆ.ಆರ್. ನಗರದ ಕೇಬಲ್ ಮಹಾದೇವ್ (ಕೃಷಿ) ಮಡಿಕೇರಿಯ ಕಡ್ಲೇರ ತುಳಸಿ ಮೋಹನ್ (ಸಂಘಟನೆ) ಬಾಳಲೆಯ ಗ್ರಾಮದ ಅನ್ವಿತ್‌ಕುಮಾರ್ (ಸಂಗೀತ) ಅವರಿಗೆ ಸನ್ಮಾನ ನಡೆಯಲಿದೆ.