ಪುರಸಭೆ ಕಟ್ಟಡ, ಗೋಣಿಕೊಪ್ಪ ಬಸ್ ನಿಲ್ದಾಣ ಭಾಗಮಂಡಲದಲ್ಲಿ ನಡೆದಿರುವ ಅಭಿವೃದ್ದಿ ಕಾರ್ಯಗಳು ಸೇರಿದಂತೆ ಹತ್ತಾರು ಕಾಮಗಾರಿಗಳು ನಡೆಯುತ್ತಲೇ ಇವೆ ಎಂದು ಮಾಹಿತಿ ನೀಡಿದರು.

ಕ್ರಿಶ್ಚಿಯನ್ ಸಮುದಾಯ ಸೇರಿದಂತೆ ಕೊಡಗಿನ ಎಲ್ಲಾ ಸಮುದಾಯಗಳು ಅಭಿವೃದ್ದಿಯ ಕೆಲಸವನ್ನು ಮನಗಂಡು ನನ್ನೊಂದಿಗಿದ್ದಾರೆ. ಎಲ್ಲಾ ಸಮುದಾಯದ ಏಳಿಗೆಗೋಸ್ಕರ ಜನಪ್ರತಿನಿಧಿಯಾಗಿ ನಿಮ್ಮೊಂದಿಗೆ ಸದಾ ಇರುತ್ತೇನೆ. ಜಿಲ್ಲೆಯಲ್ಲಿ ಶಾಂತಿ, ಸೌಹಾರ್ದತೆಯಿಂದ ಎಲ್ಲರೂ ಕೂಡ ಜೀವನ ಸಾಗಿಸಬೇಕು ಎಂಬುದೇ ನನ್ನ ಬಯಕೆಯಾಗಿದೆ. ಆ ನಿಟ್ಟಿನಲ್ಲಿ ನಿಮ್ಮ ಸಹಕಾರ ನನಗೆ ಸದಾ ಇರಲಿ ಎಂದು ಆಶಿಸಿದರು.

ಸೌತ್ ಕ್ರಿಶ್ಚಿಯನ್ ಅಸೋಸಿಯೇಷನ್‌ನ ಸ್ಥಾಪಕ ಅಧ್ಯಕ್ಷ ಎ.ಜೆ. ಬಾಬು ಪ್ರಾಸ್ತವಿಕವಾಗಿ ಮಾತನಾಡಿ, ಸಮುದಾಯದ ಒಗ್ಗಟ್ಟಿಗಾಗಿ ಕಳೆದ ಒಂದು ವರ್ಷದಿಂದ ಶ್ರಮಿಸುತ್ತಿದ್ದೇವೆ. ಇದರ ಫಲವಾಗಿ ಇದೀಗ ಸಮುದಾಯ ಬಾಂಧವರು ಒಂದೆಡೆ ಸೇರುವ ಮೂಲಕ ನಮ್ಮ ಹಕ್ಕುಗಳನ್ನು ಪಡೆಯಲು ಜನಪ್ರತಿನಿಧಿಗಳ ಮುಂದೆ ನಿಂತಿದ್ದೇವೆ. ಸರ್ಕಾರದ ಸವಲತ್ತುಗಳು ಎಲ್ಲರಿಗೂ ಸಿಗುವಂತಾಗಲಿ, ಕ್ಷೇತ್ರದ ಶಾಸಕರು ಸಮುದಾಯ ಅಭಿವೃದ್ದಿಗಾಗಿ ಸಾಕಷ್ಟು ಅನುದಾನವನ್ನು ನೀಡಿದ್ದಾರೆ. ಮುಂದೆಯೂ ನೀಡುವ ವಿಶ್ವಾಸ ಹೊಂದಿದ್ದೇವೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಗ್ಯಾರೆಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ವೀರಾಜಪೇಟೆ ಸಂತ ಅನ್ನಮ್ಮ ಕಾಲೇಜು ಪ್ರಾಂಶುಪಾಲ ಫಾ. ಮದಲೈ, ಬೆಂಗಳೂರಿನ ಫಾ. ಎ.ಜೆ.ಟೋನಿ, ಕಾರ್ಯಕ್ರಮದಲ್ಲಿ ಮಾತನಾಡಿದರು. ಶಾಸಕ ಎ.ಎಸ್. ಪೊನ್ನಣ್ಣ, ಜಿಲ್ಲಾ ಗ್ಯಾರೆಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಹಾಗೂ ವಿವಿಧ ಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಧರ್ಮಗುರುಗಳಿಗೆ ಸೌತ್ ಕ್ರಿಶ್ಚಿಯನ್ ಅಸೋಸಿಯೇಷನ್ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.

ಸಿಸ್ಟರ್ ಟೆನ್ಸಿ ಮದರ್, ಫಾದರ್ ಟೋನಿ, ಸಿಸ್ಟರ್ ತೆರೆಸಾ ಹ್ಯಾನ್, ಸೌತ್ ಕ್ರಿಶ್ಚಿಯನ್ ಅಸೋಸಿಯೇಷನ್‌ನ ಉಪಾಧ್ಯಕ್ಷರಾದ ಸಿ.ಸಿ. ವಿನ್ಸೆಂಟ್, ಪ್ರಧಾನ ಕಾರ್ಯದರ್ಶಿ ಸಿ.ಜೆ. ಆಂ್ಯಟೊ, ಜಂಟಿ ಕಾರ್ಯದರ್ಶಿ ಆಂಟೋನಿ ಜೋಸೆಫ್, ಖಜಾಂಚಿ ಬೇಬಿ ಜಾರ್ಜ್, ನಿರ್ದೇಶಕರುಗಳಾದ ಆಂಟೋನಿ ರಾಬಿನ್, ಎಂ.ಎA. ಥಾಮಸ್, ಪಿ.ವಿ. ವರ್ಗಿಸ್, ಡಾಡೂ ಜೋಸೆಫ್, ಸ್ಟಾನ್ಲಿ, ಕ್ಲಿಟಸ್ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು.

ಲಿತ ಕ್ಲೀಟಸ್ ಪ್ರಾರ್ಥಿಸಿ, ಸೌತ್ ಕ್ರಿಶ್ಚಿಯನ್ ಅಸೋಸಿಯೇಷನ್ ನಿರ್ದೇಶಕ ವಿಲ್ಸನ್ ಸ್ವಾಗತಿಸಿ, ಪದಾಧಿಕಾರಿಗಳಾದ ಶೀಭಾ ಬೆನ್ನಿ, ಶರ‍್ಲಿ ರಾಜನ್ ನಿರೂಪಿಸಿ,ರೀಟಾ ಆ್ಯಂಟೋ ವಂದಿಸಿದರು.

-ಹೆಚ್.ಕೆ. ಜಗದೀ±