ಮಡಿಕೇರಿ, ನ. ೧೦: ಬೆಂಗಳೂರಿನ ಚಿತ್ರೀಕರಣ ತಂಡವೊAದು ‘ಶಕ್ತಿ' ಕಾರ್ಯಾಲಯದಲ್ಲಿ ಚಿತ್ರೀಕರಣ ಮಾಡಿದ್ದಕ್ಕಾಗಿ ನೀಡಿದ ಗೌರವಧನವನ್ನು ಶಕ್ತಿ ಸಂಸ್ಥೆ ಮಡಿಕೇರಿಯಲ್ಲಿ ವೃದ್ಧಾಶ್ರಮವನ್ನು ನಡೆಸುತ್ತಿರುವ ತನಲ್ ಸಂಸ್ಥೆಗೆ ಸಮರ್ಪಿಸಿದೆ.
ಕನ್ನಡದ ಖ್ಯಾತ ನಟ ಡಾ. ಶಿವರಾಜ್ ಕುಮಾರ್ ಪತ್ನಿ ಗೀತಾ ಅವರ ಮಾಲೀಕತ್ವದ ಗೀತಾ ಪಿಕ್ಚರ್ಸ್ ತಂಡದವರು ಇಂದು ಮಡಿಕೇರಿಯ ವಿವಿಧೆಡೆ ಪಬ್ಬರ್ ಹೆಸರಿನ ಚಿತ್ರಕ್ಕಾಗಿ ಚಿತ್ರೀಕರಣ ಮಾಡಿದರು.
‘ಶಕ್ತಿ’ ಕಾರ್ಯಾಲಯವನ್ನು ಕೂಡ ೪ಐದÀನೇ ಪುಟಕ್ಕೆ (ಮೊದಲ ಪುಟದಿಂದ) ಚಿತ್ರಿಕರಣಕ್ಕೆ ಬಳಸಿಕೊಂಡು ೧೫,೦೦೦ ಗೌರವ ಧನವನ್ನು ನೀಡಿದರು.
ಈ ಹಣವನ್ನು ಮಡಿಕೇರಿಯಲ್ಲಿ ವೃದ್ಧಾಶ್ರಮ ನಡೆಸುತ್ತಿರುವ ತನಲ್ ಸಂಸ್ಥೆಗೆ ನೀಡುವ ಇಚ್ಛೆಯನ್ನು ವ್ಯಕ್ತಪಡಿಸಿದ ‘ಶಕ್ತಿ‘ಸಂಪಾದಕ ಚಿದ್ವಿಲಾಸ್ ಅವರು, ಸಂಸ್ಥೆಯ ಮುಖಂಡರನ್ನು ಕಚೇರಿಗೆ ಆಹ್ವಾನಿಸಿದರು. ತನಲ್ ಸಂಸ್ಥೆಯ ಪ್ರಮುಖರಾದ ಮೊಹಮ್ಮದ್, ಅಬ್ದುಲ್ಲಾ, ಅಜ್ಗರ್ ಹಾಗೂ ಡೇವಿಡ್ ವೇಗಸ್ ಇವರುಗಳಿಗೆ ಹದಿನೈದು ಸಾವಿರ ಮೊತ್ತವನ್ನು ನೀಡಲಾಯಿತು.
ಈ ಸಂದರ್ಭ ಚಿತ್ರದ ನಿರ್ದೇಶಕ ಸಂದೀಪ್ ಸುಂಕದ್, ಕ್ಯಾಮರಾಮೆನ್ ವಿಶ್ವಜಿತ್ ರಾವ್, ಚಿತ್ರದ ನಾಯಕ ದಿ.ರಾಜ್‌ಕುಮಾರ್ ಅವರ ಮೊಮ್ಮಗ ಧಿರೆನ್ ರಾಮ್‌ಕುಮಾರ್ ಹಾಗೂ ಇತರರು ಹಾಜರಿದ್ದರು.