ಶನಿವಾರಸಂತೆ, ನ.೧೦ :ಪಟ್ಟಣದ ಜಾಮೀಯ ಮಸೀದಿಯಲ್ಲಿ ಶ್ರೀಬೀರಲಿಂಗೇಶ್ವರ, ಪ್ರಬಲ ಭೈರವಿ, ಪರಿವಾರ ದೇವರ ವಾರ್ಷಿಕೋತ್ಸವ ಪ್ರಯುಕ್ತ ವಿಶೇಷ ಧಾರ್ಮಿಕ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.
೯ ಪರಿವಾರ ದೇವರುಗಳ ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕೈಂಕರ್ಯ ನೆರವೇರಿದ ಬಳಿಕ ಮಂಗಳವಾದ್ಯಗಳ ಸಮೇತ ಮೆರವಣಿಗೆಯಲ್ಲಿ ಬಂದ ಶ್ರೀಬೀರಲಿಂಗೇಶ್ವರ, ಪ್ರಬಲ ಭೈರವಿ, ಪರಿವಾರ ದೇವರ ಸೇವಾ ಸಮಿತಿ ಪದಾಧಿಕಾರಿಗಳು, ಅರ್ಚಕರು ಹಾಗೂ ಭಕ್ತರನ್ನು ಜಾಮೀಯ ಮಸೀದಿಯ ಆಡಳಿತ ಮಂಡಳಿ ಪದಾಧಿಕಾರಿಗಳು ಗೌರವಪೂರ್ವಕವಾಗಿ ಸ್ವಾಗತಿಸಿ, ಸತ್ಕರಿಸಿದರು.
ನಂತರ ಮಸೀದಿ ಸಭಾಂಗಣದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಗಣಪತಿ ದೇವಾಲಯದ ಪ್ರಧಾನ ಅರ್ಚಕ ಮಾಲತೇಶ್ ಭಟ್ ಆಶೀರ್ವಚನ ನೀಡುತ್ತಾ, ಧರ್ಮಶಾಸ್ತ್ರದ ಪ್ರಕಾರ ಗ್ರಾಮದಲ್ಲಿ ಶ್ರೀಬೀರಲಿಂಗೇಶ್ವರ, ಪ್ರಬಲ ಭೈರವಿ, ಪರಿವಾರ ದೇವರ ದೇವಾಲಯ ನಿರ್ಮಾಣವಾಗಿದ್ದು; ಗ್ರಾಮದಲ್ಲಿ ಕಾರ್ತಿಕ ಮಾಸದ ಸೋಮವಾರ ವಾರ್ಷಿಕೋತ್ಸವ ಆಚರಿಸಲಾಗುತ್ತಿದೆ. ಧರ್ಮಶಾಸ್ತçದ ಪ್ರಕಾರ ಎಲ್ಲಾ ಧರ್ಮ ಬಾಂಧವರು ಒಂದಾಗಿ ಸೇರಿ ಶ್ರದ್ಧಾಭಕ್ತಿಯಿಂದ ಪೂಜಾ ಕೈಂಕರ್ಯ ಆಚರಿಸಲಾಗುತ್ತಿದೆ.ಈ ಪುಣ್ಯದ ಕೆಲಸದಲ್ಲಿ ಜಾಮೀಯ ಮಸೀದಿಯೂ ಭಾಗಿಯಾಗಿದೆ. ಗೌರವಯುತವಾಗಿ ಆಚರಿಸುತ್ತಾ ಬಂದಿದ್ದು ಕೊಡಗಿನಲ್ಲೇ ವಿಶೇಷವಾದ ಆಚರಣೆಯಾಗಿದೆ.ಹಿಂದೂ-ಮುಸ್ಲಿಮರ ಭಾವೈಕ್ಯತೆಯ ಸಂಕೇತವಾಗಿ ವಾರ್ಷಿಕೋತ್ಸವದಲ್ಲಿ ಜಾಮೀಯ ಮಸೀದಿಯೂ ಭಾಗಿಯಾಗುತ್ತಿದೆ ಎಂದರು.
ಸೇವಾ ಸಮಿತಿ ಅಧ್ಯಕ್ಷ ಎಂ.ಸಿ.ಕಾAತರಾಜ್ ಮಾತನಾಡಿ, ಹಿಂದೂ-ಮುಸ್ಲಿA-ಕ್ರೈಸ್ತ ಧರ್ಮದವರಿಗೆಲ್ಲಾ ದೇವರು ಒಬ್ಬನೇ ದೇವನೊಬ್ಬ; ನಾಮ ಹಲವು ಎಂಬAತೆ ಇದ್ದು ಆಚರಣೆ, ರೀತಿನೀತಿ ಬೇರೆಬೇರೆಯಾಗಿದೆ.ಎಲ್ಲಾ ಧರ್ಮದ ಸಾರ ದಯೆಯೇ ಧರ್ಮದ ಮೂಲವಾಗಿದ್ದು ಪ್ರತಿಯೊಬ್ಬರು ಮೊದಲಿಗೆ ಮಾನವರಾಗಿರಬೇಕು.ಮಾನವ ಧರ್ಮ ದೊಡ್ಡದು ಎಂದು ತಿಳಿದು ಸರ್ವ ಧರ್ಮಗಳ ಸಾರವನ್ನು ಅರಿತು ಶನಿವಾರಸಂತೆ ಪಟ್ಟಣದ ಜನತೆ ಸಹಬಾಳ್ವೆ ನಡೆಸುತ್ತಾ ಭಾವೈಕ್ಯತೆಯಿಂದ ಬಾಳುತ್ತಿದ್ದಾರೆ ಎಂದರು.
ಸೇವಾ ಸಮಿತಿಯ ಕಾರ್ಯದರ್ಶಿ ದಿವಾಕರ್ ಮಾತನಾಡಿ, ಪಟ್ಟಣದಲ್ಲಿ ಸರ್ವಧರ್ಮಗಳ ಸಾಕಾರದಂತೆ ೪೦೦ ವರ್ಷಗಳ ಐತಿಹಾಸಿಕ ಶ್ರೀಬೀರಲಿಂಗೇಶ್ವರ, ಪ್ರಬಲ ಭೈರವಿ, ಪರಿವಾರ ದೇವರ ವಾರ್ಷಿಕೋತ್ಸವ ನಡೆಯುತ್ತಾ ಬಂದಿದೆ.ದೇವಾಲಯಗಳ ಜತೆಯಲ್ಲಿ ಮಸೀದಿಯಲ್ಲೂ ವಿಶೇಷ ಪ್ರಾರ್ಥನೆ ನಡೆಯುತ್ತಾ ಬಂದಿದ್ದು ಗ್ರಾಮದ ಭಕ್ತಜನತೆ ಶ್ರದ್ಧಾಭಕ್ತಿಯಿಂದ ಪಾಲ್ಗೊಳ್ಳುತ್ತಿದ್ದಾರೆ ಎಂದರು.
ಜಾಮೀಯ ಮಸೀದಿ ಧರ್ಮಗುರು ಮಹಮ್ಮದ್ ಸಾದಿಕ್ ಮಾತನಾಡಿ, ಯಾವ ಧರ್ಮದವರಾಗಲಿ ಇತರ ಧರ್ಮದವರನ್ನು ನಿಂದಿಸದೇ ಅವರವರ ಧರ್ಮಗಳನ್ನು ಗೌರವಿಸಬೇಕು. ಶನಿವಾರಸಂತೆಯಲ್ಲಿ ಹಿಂದೂ-ಮುಸ್ಲಿA ಬಾಂಧವರು ಸಹಬಾಳ್ವೆಯಿಂದ ಬಾಳುತ್ತಿದ್ದು ಪರಸ್ಪರರ ಪೂಜಾ ಕಾರ್ಯಕ್ರಮಗಳಲ್ಲಿ ಶಾಂತಿಯುತವಾಗಿ ಪಾಲ್ಗೊಳ್ಳಬೇಕು. ಸಾಮರಸ್ಯದ ಬದುಕನ್ನು ಒಗ್ಗಟ್ಟಾಗಿ, ಗೌರವದಿಂದ ಬಾಳಬೇಕು ಎಂದರು.
ಶ್ರೀಬೀರಲಿAಗೇಶ್ವರ, ಪ್ರಬಲ ಭೈರವಿ, ಪರಿವಾರ ದೇವರ ದೇವಸ್ಥಾನದ ಸ್ಥಾಪಕ ಅಧ್ಯಕ್ಷ ಎಸ್.ಸಿ.ಶರತ್ ಶೇಖರ್ ಮಾತನಾಡಿ, ಶುಭ ಕೋರಿದರು.ಈ ಸಂದರ್ಭ ಮಲ್ಲೇಶ್ ಐನೋರು, ದೇವಾಲಯ ಸಮಿತಿ ಪದಾಧಿಕಾರಿಗಳಾದ ಶರತ್ ಶೇಖರ್, ದಿವಾಕರ್, ಎನ್.ಪಿ.ರವಿ, ವೀರಶೈವ ಸಮಾಜದ ಪ್ರಮುಖ ಹಾಲಪ್ಪ, ಧರ್ಮಗುರುಗಳಾದ ಸಾದಿಕ್ ಹಸರತ್ , ವಾಸಿಂ ಅಕ್ರಂ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಜಾಮೀಯ ಮಸೀದಿ ಆಡಳಿತ ಮಂಡಳಿ ಅಧ್ಯಕ್ಷ ರಿಸಾಲತ್ ಪಾಶ, ಮಾಜಿ ಅಧ್ಯಕ್ಷರಾದ ಅಮೀರ್ ಸಾಬ್,ಅಕ್ಮಲ್ ಪಾಶ, ಉಪಾಧ್ಯಕ್ಷ ಹನೀಫ್, ಕಾರ್ಯದರ್ಶಿ ರಿಯಾಜ್ , ಖಜಾಂಚಿ ಸಾದಿಕ್ ಷರೀಪ್, ಪದಾಧಿಕಾರಿಗಳಾದ ಖಲೀಂ, ಮಹಮ್ಮದ್ ಇಸಾಕ್, ಪ್ರಮುಖರಾದ ಸರ್ದಾರ್ ಅಹಮ್ಮದ್, ಮಹಮ್ಮದ್ ಪಾಶ, ಇತರರು ಹಾಜರಿದ್ದರು.ಧರ್ಮಗುರು ಸಾದಿಕ್ ಹಸರತ್ ವಿಶೇಷ ಪ್ರಾರ್ಥನೆ ಸಲ್ಲಿಸಿ, ಪ್ರವಚನ ನೀಡಿದರು. ಅಧ್ಯಾಪಕ ಜಹೀರ್ ಕಾರ್ಯಕ್ರಮ ನಿರ್ವಹಿಸಿದರು.