ಗೋಣಿಕೊಪ್ಪಲು, ನ.೨೫: ಪ್ರಾಮಾಣಿ ಕತೆ, ಪಾರದರ್ಶಕತೆ ಕಾಪಾಡುತ್ತಾ ರೈತರಿಗೆ, ಗ್ರಾಹಕರಿಗೆ ಸಕಾಲದಲ್ಲಿ ಸಾಲ ಮಂಜೂರು ಮಾಡುವ ಮೂಲಕ, ರಾಷ್ಟಿçà ಕೃತ ಬ್ಯಾಂಕ್ಗಳಿಗೆ ಕಡಿಮೆ ಇಲ್ಲದಂತೆ ವಾರ್ಷಿಕವಾಗಿ ಕೋಟ್ಯಂತರ ಹಣದ ವ್ಯವಹಾರ ನಡೆಸುತ್ತಿದ್ದು, ರಾಜ್ಯಕ್ಕೆ ಮಾದರಿಯಾಗಿದೆ ಎಂದು ಸಹಕಾರ ರತ್ನ ಪುರಸ್ಕೃತ, ಕೊಡಗು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಹೇಳಿದರು.
ಗಡಿಭಾಗ ತಿತಿಮತಿಯಲ್ಲಿ ಆಯೋಜ ನೆಗೊಂಡಿದ್ದ ಕೊಡಗು ಜಿಲ್ಲಾ ಸಹಕಾರ ಬ್ಯಾಂಕಿನ ೨೫ನೇ ನೂತನ ಶಾಖೆಯ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿರುವ ಮಡಿಕೇರಿಯ ಕೇಂದ್ರ ಬ್ಯಾಂಕ್ ಸೇರಿದಂತೆ ೨೪ ಶಾಖೆಗಳು ಲಾಭಾಂಶದಲ್ಲಿ ಮುಂದುವರೆಯುತ್ತಿದೆ. ಗಡಿ ಭಾಗಗಳಲ್ಲಿ ಶಾಖೆಗಳನ್ನು ತೆರೆಯುವ ಮೂಲಕ ಸ್ಥಳೀಯ ರೈತರಿಗೆ ಹಾಗೂ ಗ್ರಾಹಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬ್ಯಾಂಕ್ ಕಾರ್ಯ ನಿರ್ವಹಿಸುತ್ತಿದೆ.
ಗ್ರಾಮೀಣ ಪ್ರದೇಶದ ಅತೀ ಹೆಚ್ಚು ಕಾರ್ಮಿಕರನ್ನು, ಆದಿವಾಸಿಗಳನ್ನು ಹಾಗೂ ರೈತರನ್ನು ಹೊಂದಿರುವ ಗಡಿ ಭಾಗವಾದ ತಿತಿಮತಿಯಲ್ಲಿ ನೂತನ ಶಾಖೆಯನ್ನು ಆರಂಭಿಸಲು ಸ್ಥಳೀಯ ಬೆಳೆಗಾರರು, ರೈತರು ಮನವಿ ಮಾಡಿದ ಹಿನ್ನಲೆ ನೂತನ ಶಾಖೆಯನ್ನು ಆರಂಭಿಸಲಾಗಿದೆ. ರಾಷ್ಟಿçÃಕೃತ ಬ್ಯಾಂಕ್ಗಳಿಗೆ ಕಡಿಮೆ ಇಲ್ಲದಂತೆ ಸೇವೆಗಳನ್ನು ನೀಡಲಾಗುತ್ತದೆ. ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ರಾಜ್ಯಕ್ಕೆ ಮಾದರಿಯಾಗಿದ್ದು, ರಾಜ್ಯದಲ್ಲಿ ೩ನೇ ಸ್ಥಾನ ಹೊಂದಿದೆ. ೪ಆರನೇ ಪುಟಕ್ಕೆ (ಮೊದಲ ಪುಟದಿಂದ)
ಈ ಭಾಗದ ರೈತರು, ಬೆಳೆಗಾರರು, ಗ್ರಾಹಕರು ಡಿಸಿಸಿ ಬ್ಯಾಂಕಿನಲ್ಲಿ ವಹಿವಾಟು ನಡೆಸುವ ಮೂಲಕ ಬ್ಯಾಂಕನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕು. ಶೂನ್ಯ ಬಡ್ಡಿ ದರದಲ್ಲಿ ಸ್ವಸಹಾಯ ಗುಂಪುಗಳಿಗೆ, ೭.೫ ಬಡ್ಡಿ ದರದಲ್ಲಿ ಪುರುಷ ಸ್ವಸಹಾಯ ಸಂಘಗಳಿಗೆ ಸಾಲವನ್ನು ಮಂಜೂರು ಮಾಡಲಾಗುವುದು. ಇದರ ಪ್ರಯೋಜನವನ್ನು ಪಡೆಯುವ ಮೂಲಕ ಸ್ವಾವಲಂಭಿಗಳಾಗಬೇಕು, ಗ್ರಾಹಕರ ಬೇಡಿಕೆಯ ಮೇರೆ ತಿತಿಮತಿ ಶಾಖೆಯಲ್ಲಿ ನೂತನ ಎಟಿಎಂ ಕೇಂದ್ರವನ್ನು ಪ್ರಾರಂಭಿಸಲಾಗುವುದು.
ಜಿಲ್ಲೆಯಲ್ಲಿ ೧೯ ಎಟಿಎಂ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ರಾಷ್ಟಿçÃಕೃತ ಬ್ಯಾಂಕ್ಗಳಲ್ಲಿ ಸಿಗುವ ರೀತಿಯಲ್ಲಿಯೇ ತಮ್ಮ ಠೇವಣಿ ಹಣಗಳಿಗೆ ವಿಮಾ ಸೌಲಭ್ಯದ ಮೂಲಕ ಭದ್ರತೆ ನೀಡಲಾಗುತ್ತದೆ. ಮುಂದಿನ ವರ್ಷಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಮತ್ತಷ್ಟು ಶಾಖೆಗಳನ್ನು ಪ್ರಾರಂಭಿಸುವ ಮೂಲಕ ಒಟ್ಟಾಗಿ ೩೧ ಶಾಖೆಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಲಾಗಿದೆ. ಡಿಸಿಸಿ ಬ್ಯಾಂಕ್ ಸದಸ್ಯರಿಗೆ ವಾರ್ಷಿಕವಾಗಿ ಶೇ.೧೩ ಡಿವಿಡೆಂಡ್ ನೀಡುತ್ತಿದೆ.
ಡಿಸೆಂಬರ್ ೧ರಿಂದ ಅನ್ವಯವಾಗುವಂತೆ ಬ್ಯಾಂಕ್ಗಳಲ್ಲಿ ಠೇವಣಿ ಇಡುವ ಗ್ರಾಹಕರಿಗೆ ವಿಶೇಷವಾಗಿ ಹೆಚ್ಚಿನ ಬಡ್ಡಿದರವನ್ನು ನೀಡಲು ಆಡಳಿತ ಮಂಡಳಿ ನಿರ್ಧಾರ ಕೈಗೊಂಡಿದೆ ಎಂದರು. ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ನೂತನ ಶಾಖೆಯನ್ನು ಉದ್ಘಾಟಿಸಿ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಸಹಕಾರ ಸಂಘಗಳು ಗ್ರಾಹಕರಿಗೆ ಆತ್ಮೀಯ ಸೇವೆ ನೀಡುತ್ತಾ ಜನರ ಮನಸ್ಸನ್ನು ಗೆಲುವಲ್ಲಿ ಯಶಸ್ವಿಯಾಗಿವೆ. ಬ್ಯಾಂಕಿನ ಸಿಬ್ಬಂದಿಗಳು ಗ್ರಾಹಕರೊಂದಿಗೆ ಉತ್ತಮ ಒಡನಾಟ ಇಟ್ಟುಕೊಳ್ಳಬೇಕು.
ಯಾವುದೇ ಅಡೆತಡೆ ಇಲ್ಲದೆ ರೈತರಿಗೆ ಸಾಲ ಮಂಜೂರಾತಿಗಳು ಸಕಾಲದಲ್ಲಿ ಆಗುವಂತಾಗಬೇಕು ಇದರಿಂದ ಗ್ರಾಹಕರು ಬ್ಯಾಂಕಿಗೆ ಮತ್ತಷ್ಟು ಹತ್ತಿರವಾಗುತ್ತಾರೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ತಿತಿಮತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚೆಪ್ಪುಡಿರ ಎಂ. ರಾಮಕೃಷ್ಣ ಮಾತನಾಡಿ, ನೂತನ ಶಾಖೆ ಆರಂಭವಾಗಿರುವುದರಿAದ ನಮ್ಮ ಸಹಕಾರ ಸಂಘಕ್ಕೆ ಬಲ ಬಂದAತಾಗಿದೆ. ರಾಷ್ಟಿçÃಕೃತ ಬ್ಯಾಂಕ್ಗಳಲ್ಲಿ ಸಾಲ ಮಂಜೂರಾತಿಗಾಗಿ ತಿಂಗಳುಗಟ್ಟಲೆ ಅಲೆದಾಡಬೇಕಾಗುತ್ತದೆ. ಆದರೆ ಸಹಕಾರ ಬ್ಯಾಂಕ್ಗಳಲ್ಲಿ ಇಂತಹ ಸಮಸ್ಯೆ ಎದುರಾಗುವುದಿಲ್ಲ. ಸಮಯಕ್ಕೆ ಸರಿಯಾಗಿ ಪಡೆದ ಸಾಲವನ್ನು ಗ್ರಾಹಕರು ತೀರಿಸಬೇಕು ಎಂದು ಕರೆ ನೀಡಿದರು.
ಬ್ಯಾಂಕಿನ ಭದ್ರತಾ ಕೊಠಡಿಯನ್ನು ಕುಶಾಲನಗರ ಸಹಕಾರ ಸಂಘದ ಅಧ್ಯಕ್ಷ ಟಿ.ಆರ್. ಶರವಣ ಕುಮಾರ್ ಉದ್ಘಾಟಿಸಿದರು. ನಗದು ಕೌಂಟರ್ ಉಪಾಧ್ಯಕ್ಷ ಕೆ.ಎಸ್. ಪೂವಯ್ಯ ಉದ್ಘಾಟಿಸಿದರು. ಬ್ಯಾಂಕಿನ ಗಣಕ ಯಂತ್ರಕ್ಕೆ ನಿರ್ದೇಶಕರಾದ ಗುಮ್ಮಟ್ಟಿರ ಕಿಲನ್ ಗಣಪತಿ ಚಾಲನೆ ನೀಡಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಕೇಂದ್ರ ಸಹಕಾರ ಬ್ಯಾಂಕಿನ ಉಪಾಧ್ಯಕ್ಷರಾದ ಕೆ.ಎಸ್. ಪೂವಯ್ಯ, ನಿರ್ದೇಶಕರುಗಳಾದÀ ಹೆಚ್.ಎಂ. ರಮೇಶ್, ಹೊಸೂರು ಜೆ. ಸತೀಶ್ ಕುಮಾರ್, ಕೆ. ಅರುಣ್ ಭೀಮಯ್ಯ, ಎಸ್.ಸಿ. ಶರತ್ ಶೇಖರ್, ಹೆಚ್.ಕೆ. ಮಾದಪ್ಪ, ಎನ್.ಎಂ. ಉತ್ತಪ್ಪ, ಪಿ.ಪಿ. ಪೆಮ್ಮಯ್ಯ, ಕೆ.ಎನ್. ಸತೀಶ್, ಪಟ್ರಪಂಡ ಬಿ. ರಘು ನಾಣಯ್ಯ, ಹೆಚ್.ಡಿ. ರವಿ, ಸೇರಿದಂತೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ಡಿ. ರವಿಕುಮಾರ್, ಪ್ರಧಾನ ವ್ಯವಸ್ಥಾಪಕರಾದ ಜಿ.ಎಂ. ಬೋಜಮ್ಮ, ಉಪಸ್ಥಿತರಿದ್ದರು.
ಜಿ.ಎಂ. ಬೋಜಮ್ಮ ಪ್ರಾರ್ಥಿಸಿ, ಡಿಜಿಎಂ ಟಿ.ಜಿ. ಗಿರೀಶ್ ನಿರೂಪಿಸಿ, ವೃತ್ತಿಪರ ನಿರ್ದೇಶಕರಾದ ಎಂ.ಸಿ. ನಾಣಯ್ಯ ಸ್ವಾಗತಿಸಿ, ಉಪಾಧ್ಯಕ್ಷರಾದ ಕೆ.ಎಸ್. ಪೂವಯ್ಯ ವಂದಿಸಿದರು. ಸುತ್ತಮುತ್ತಲಿನ ಸಹಕಾರ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ನಿರ್ದೇಶಕರು, ಸ್ಥಳೀಯ ನಾಗರಿಕರು ಕಾರ್ಯಕ್ರಮದಲ್ಲಿ ಭಾಗಿಗಳಾಗಿದ್ದರು.
- ಹೆಚ್.ಕೆ. ಜಗದೀಶ್