ವೀರಾಜಪೇಟೆ, ನ. ೨೫: ಕೊಡ ಗಿನ ರಸ್ತೆ ದುಸ್ಥಿತಿ ಬಗ್ಗೆ ಸರಕಾರದ ಹಾಗೂ ಕ್ಷೇತ್ರದ ಶಾಸಕರ ಗಮನ ಸೆಳೆಯುವ ನಿಟ್ಟಿನಲ್ಲಿ ವೀರಾಜಪೇಟೆ ಮಂಡಲ ಬಿಜೆಪಿ ವತಿಯಿಂದ ವೀರಾ ಜಪೇಟೆಯ ಲೋಕೋಪ ಯೋಗಿ ಇಲಾಖೆಯ ಕಚೇರಿಯ ಮುಂದೆ ವೀರಾಜಪೇಟೆ ಮಂಡಲ ಬಿಜೆಪಿ ಅಧ್ಯಕ್ಷ ಸುವಿನ್ ಗಣಪತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಬಳಿಕ ಲೋಕೋಪಯೋಗಿ ಇಲಾ ಖೆಯ ಅಭಿಯಂತರರಿಗೆ ಮನವಿ ಸಲ್ಲಿಸಲಾಯಿತು.
ಇಲಾಖೆಯ ಮುಂಭಾಗದಲ್ಲಿ ಜಮಾವಣೆ ಗೊಂಡ ಬಿಜೆಪಿ ಕಾರ್ಯಕರ್ತರು, ಸರಕಾರದ ವಿರುಧ್ಧ ಘೋಷಣೆ ಕೂಗಿದರಲ್ಲದೆ ಒಂದು ಗಂಟೆಗೂ ಅಧಿಕ ಕಾಲ ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಸರಕಾರದ ವೈಫಲ್ಯತೆ ಬಗ್ಗೆ, ರಸ್ತೆ ಅಭಿವೃದ್ಧಿ ವಿಚಾರದಲ್ಲಿ ಶಾಸಕರು ನಿರ್ಲಕ್ಷö್ಯ ತೋರುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಪಕ್ಷದ ಪ್ರಮುಖರು ವಾಗ್ದಾಳಿ ನಡೆಸಿದರು.
ಪ್ರತಿಭಟನೆ ಸಂದರ್ಭ ಮಾತನಾಡಿದ ಮಾಜಿ ಶಾಸಕ ಕೆ.ಜಿ. ಬೋಪಯ್ಯ, ಬಿಜೆಪಿ ಪಕ್ಷ ಅಧಿಕಾರ ದಲ್ಲಿದ್ದ ಸಂದರ್ಭ ಇಂತಹ ಪರಿಸ್ಥಿತಿ ನಿರ್ಮಾ ಣವಾಗಿರಲಿಲ್ಲ. ಇದೀಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಪೂರೈಸಿದ್ದರೂ ರಸ್ತೆ ಅಭಿವೃದ್ಧಿ ಕಾರ್ಯ ಇನ್ನೂ ಆಗದಿರುವುದು ಅವರ ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಕೊಡಗು ಜಿಲ್ಲೆ ಸೇರಿದಂತೆ, ವೀರಾಜಪೇಟೆ, ಪೊನ್ನಂಪೇಟೆ ತಾಲೂಕಿನ ಮುಖ್ಯ ರಸ್ತೆಗಳು ತೀವ್ರ ಹದಗೆಟ್ಟಿದ್ದು, ರಸ್ತೆ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಮಳೆ ಬಿಡುವು ನೀಡಿದ ನಂತರ ಎಲ್ಲೆಡೆ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳು ವುದಾಗಿ ಕ್ಷೇತ್ರದ ಶಾಸಕರು ಹಾಗೂ ಕಾಂಗ್ರೆಸ್ ಪಕ್ಷದ ವಕ್ತಾರರು ಹೇಳಿಕೆ ನೀಡಿದ್ದರು. ಆದರೆ ಇದುವರೆಗೂ ಅದು ಕಾರ್ಯಗತಗೊಂಡಿಲ್ಲ ಎಂದು ಹೇಳಿದರು. ಬಿಜೆಪಿ ಜಿಲ್ಲಾ ಅಧ್ಯಕ್ಷ ರವಿ ಕಾಳಪ್ಪ ಮಾತನಾಡಿ, ಇದೀಗ ಮಳೆ ಬಿಡುವು ನೀಡಿ ಹಲವು ದಿನಗಳು ಕಳೆದಿವೆ. ಮುಖ್ಯರಸ್ತೆಯ ದುರಸ್ತಿ ಕಾರ್ಯ ಇನ್ನೂ ಕೈಗೆತ್ತಿಕೊಂಡಿಲ್ಲ. ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿವೆ. ಕಳೆದ ಎರಡೂವರೆ ವರ್ಷದಿಂದ ರಸ್ತೆ ನಿರ್ವಹಣೆ ಇಲ್ಲದೆ ಇಂದು ರಸ್ತೆ ಹದಗೆಡಲು ಕಾರಣವಾಗಿದೆ. ಕೇವಲ ಪ್ರಚಾರ, ಘೋಷಣೆಗಷ್ಟೇ ಕಾಂಗ್ರೆಸ್ ಸೀಮಿತವಾಗಿದೆ. ಅಭಿ ವೃದ್ಧಿ ಮಾತ್ರ ಇಲ್ಲ. ಮಳೆ ನಿಂತ ಕೂಡಲೆ ರಸ್ತೆ ಕಾಮಗಾರಿ ಪ್ರಾರಂಭ ಮಾಡುತ್ತೇವೆ ಎಂದು ಹೇಳಿದ ಸರಕಾರ ಮೌನ ವಹಿಸಿದೆ. ಎರಡೂವರೆ ವರ್ಷ ಕಳೆದರೂ ಯಾವ ರಸ್ತೆ ಕಾಮಗಾರಿಯೂ ಪ್ರಗತಿ ಕಾಣತ್ತಿಲ್ಲ ಎಂದು ದೂರಿದರು.
ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷಕ್ಷ ರಾಬಿನ್ ದೇವಯ್ಯ ಮಾತನಾಡಿ, ಬಿಜೆಪಿ ಪಕ್ಷದ ಶಾಸಕರ ಅವಧಿಯಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ನಾವುಗಳು ಲೆಕ್ಕಾಚಾರ ನೀಡಲು ತಯಾರಿ ದ್ದೇವೆ, ನಮ್ಮ ಶಾಸಕರ ಅವಧಿಯಲ್ಲಿ ಮಂಜೂರಾದ ಅನುದಾನವನ್ನು ತಮ್ಮ ಅವಧಿಯಲ್ಲಿ ತಂದ ಅನ Äದಾನ ಎಂದು ಈಗಿನ ಶಾಸಕರು ಜನರ ಮುಂದೆ ಸುಳ್ಳು ಮಾಹಿತಿ ನೀಡುವುದು ಸರಿಯಲ್ಲ. ಈಗಿನ ಶಾಸಕರು ತಂದಿರುವ ಅನುದಾನದ ಬಗ್ಗೆ ಶ್ವೇತಪತ್ರ ಹೊರಡಿಸುವಂತೆ ಸವಾಲು ಹಾಕಿದರು.
ವೀರಾಜಪೇಟೆ ಮಂಡಲ ಅಧ್ಯಕ್ಷ ಮಾಚಿ ಮಂಡ ಸುವಿನ್ ಗಣಪತಿ ಮಾತನಾಡಿ, ಎರಡೂ ತಾಲೂಕುಗಳ ರಸ್ತೆಗಳು ಸಂಪೂರ್ಣ ಗುಂಡಿ ಬಿದ್ದಿದ್ದು ರಸ್ತೆ ಸರಿಪಡಿಸದೆ ಎರಡು ವರ್ಷಗಳು ಕಳೆದಿವೆ. ಕೇವಲ ಸಾಮಾಜಿಕ ಜಾಲತಾಣದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ, ರಸ್ತೆ ಅಭಿವೃದ್ಧಿಗೆ ಕೋಟಿ, ಕೋಟಿ ಅನುದಾನ ಬಂದಿದೆ ಎಂದು ಪ್ರಚಾರ ಮಾಡಿದರೆÀ ಸಾಲದು, ನಿಖರವಾಗಿ ಜನರ ಮುಂದೆ ತಮ್ಮ ಅನುದಾನದ ಬಗ್ಗೆ ಮಾಹಿತಿ ನೀಡಿ ಎಂದು ಆಗ್ರಹಿಸಿದರು. ತಿತಿಮತಿಯಿಂದ ಮಡಿ ಕೇರಿವರೆಗೆ ಹಾಗೂ ಸಿದ್ಧಾಪುರ ರಸ್ತೆಗಳಲ್ಲಿ ಸಂಚಾರ ಮಾಡಲು ಸಾಧ್ಯವಾಗುತ್ತಿಲ್ಲ. ಗುಂಡಿ ಯಿಂದಾಗಿ ವಾಹನ ಅಪಘಾತಗಳು ಹೆಚ್ಚು ಸಂಭವಿಸುತ್ತಿದ್ದು, ರಸ್ತೆ ಕಾಮಗಾರಿ ಮಾಡದಿದ್ದಲ್ಲಿ ಗ್ರಾಮ ಗ್ರಾಮಗಳಲ್ಲಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು. ವೀರಾ ಜಪೇಟೆ ಮಂಡಲ ಬಿಜೆಪಿ ವಕ್ತಾರ ಚೆಪುö್ಪಡೀರ ರಾಕೇಶ್ ದೇವಯ್ಯ ಸೇರಿದಂತೆ ಹಲವರು ಮಾತನಾಡಿದರು.
ಲೋಕೋಪಯೋಗಿ ಇಲಾಖೆಯ ಅಭಿ ಯಂತರ ಸತೀಶ್ ಮನವಿ ಸ್ವೀಕರಿಸಿ ಮಾತನಾಡಿ ಡಿಸೆಂಬರ್ ಅಂತ್ಯಕ್ಕೆ ರಸ್ತೆ ಕಾಮಗಾರಿ ಪೂರ್ಣ ಗೊಳ್ಳುತ್ತದೆ. ಮಳೆಯಿಂದಾಗಿ ಸಮಸ್ಯೆಯಾಗಿದೆ ಎಂದರು. ಇದರಿಂದ ಆಕ್ರೋಶÀಗೊಂಡ ಬಿಜೆಪಿ ಗರು, ಸರಿಯಾದ ಮಾಹಿತಿ ನೀಡಿ, ಅಧಿಕಾರಿಗಳು ಸಮರ್ಪಕವಾಗಿ ಕೆಲಸ ನಿರ್ವಹಿಸಿ, ಜನರ ಆಶೋ ತ್ತರಗಳಿಗೆ ಸ್ಪಂದಿಸುವ ಕೆಲಸ ಮಾಡಿ ಎಂದರಲ್ಲದೆ ರಸ್ತೆ ಕಾಮಗಾರಿ ನಡೆಯದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ತೀವ್ರವಾಗಿ ಪ್ರತಿಭಟನೆ ನಡೆಸುವ ಎಚ್ಚ ರಿಕೆ ನೀಡಿದರು. ಅಲ್ಲದೆ ಕಾಮಗಾರಿಗಳಿಗೆ ಬಿಡುಗಡೆ ಯಾಗಿರುವ ಅನುದಾನಗಳ ಮಾಹಿತಿ ಕೇಳಿದರು.
ಈ ಸಂದರ್ಭ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಗುಮ್ಮಟ್ಟೀರ ಕಿಲನ್ ಗಣಪತಿ, ಬಿಜೆಪಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ನೆಲ್ಲಿರ ಚಲನ್ ಕುಮಾರ್, ತಾಲೂಕು ಪ್ರಧಾನ ಕಾರ್ಯದರ್ಶಿ ಕುಟ್ಟಂಡ ಅಜಿತ್ ಕರುಂಬಯ್ಯ, ಪಕ್ಷದ ಪ್ರಮುಖರಾದ ರೀನಾ ಪ್ರಕಾಶ್, ಕಾಂತಿ ಸತೀಶ್, ಯಮುನಾ ಚಂಗಪ್ಪ, ಮಾಜಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ, ನಗರ ಅಧ್ಯಕ್ಷ ಅನಿಲ್ ಮಂದಣ್ಣ, ಪ್ರಮುಖರಾದ ಕೂತಂಡ ಸಚಿನ್ ಕುಟ್ಟಯ್ಯ, ಶಶಿ ಸುಬ್ರಮಣಿ, ಮಾಚಿಮಂಡ ರವೀಂದ್ರ, ಅನಿತಾ ಪೂವಯ್ಯ, ಜೂನಾ, ಅನಿತಾ, ಜಿಲ್ಲಾ ಖಜಾಂಚಿ ಸಂಪತ್, ರೈತಾ ಮೋರ್ಚಾದ ಅಮ್ಮುಣಿಚಂಡ ರಂಜು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಹಾಜರಿದ್ದರು.