ಸುಂಟಿಕೊಪ್ಪ, ಡಿ. ೧೦ : ಇಲ್ಲಿಗೆ ಸಮೀಪದ ಕೊಡಗರಹಳ್ಳಿಯಲ್ಲಿರುವ ಅರಿಯಾಳ ತರವಾಡು ದೇವಸ್ಥಾನದಲ್ಲಿ ಧರ್ಮ ದೈವಗಳ ನೇಮೋತ್ಸವ ೨ ದಿನಗಳವರೆಗೆ ವಿಜೃಂಭಣೆ ಯಿಂದ ನಡೆಯಿತು.

ತಾ. ೬ ರಂದು ರಾತ್ರಿ ೮ ಗಂಟೆಗೆ ಕಳಲತ್ತು ಗುಳಿಗ, ಕಲ್ಕುಡ ಕಲ್ಲುರ್ಟಿ, ಕುಪ್ಪೆ ಪಂಜುರ್ಲಿ, ವರ್ಣಾರ ಪಂಜುರ್ಲಿ ದೈವಗಳ ಕೋಲ ತಾ. ೭ ರಂದು ಬೆಳಿಗ್ಗೆ ೬ ಗಂಟೆಗೆ ಮಂತ್ರಗುಳಿಗ, ೮ ಗಂಟೆಗೆ ಧೂಮಾವತಿ ದೈವದ ನೇಮ ನಡೆಯಿತು.

ಈ ದೇವಾಲಯದಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ದೈವಗಳ ನರ್ತನ ನಡೆಯುತ್ತಿದ್ದು, ಕೊಡಗರಹಳ್ಳಿ, ಸುಂಟಿಕೊಪ್ಪ, ನಾಕೂರು, ಕಾನ್‌ಬೈಲ್, ಕಂಬಿಬಾಣೆ, ೭ನೇ ಹೊಸಕೋಟೆ ಸುತ್ತಮುತ್ತಲಿನ ಗ್ರಾಮಸ್ಥರು ಅಧಿಕ ಸಂಖ್ಯೆಯಲ್ಲಿ ದೈವತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ನೆರೆದಿದ್ದ ಭಕ್ತಾದಿಗಳಿಗೆ ಬೆಳಿಗ್ಗೆ ಲಘು ಉಪಹಾರ ಹಾಗೂ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.