(ವಿಶೇಷ ವರದಿ : ಕೆ.ಎಸ್. ಮೂರ್ತಿ)

ಕಣಿವೆ, ಡಿ. ೧೫: ಕುಶಾಲನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೇವೆಯಲ್ಲಿದ್ದ ಸ್ತಿçà ರೋಗ ತಜ್ಞರುಗಳು ಇನ್ನು ಸೇವೆಗೆ ಅಲಭ್ಯರಾಗುತ್ತಾರೆ. ಅವರ ಬದಲಿಗೆ ಇನ್ನು ಮುಂದೆ ಎಂಬಿಬಿಎಸ್ ವೈದ್ಯರುಗಳೆ ತಪಾಸಣೆ ನಡೆಸುತ್ತಾರೆ, ಹೆರಿಗೆ ಪ್ರಕ್ರಿಯೆಯನ್ನೂ ಅವರೇ ನಡೆಸುತ್ತಾರೆ. ರಾಜ್ಯ ಸರಕಾರದ ಆರೋಗ್ಯ ಇಲಾಖೆಯ ಹೊಸ ನೀತಿಯಿಂದಾಗಿ ಈ ಬದಲಾವಣೆಯುಂಟಾಗಿದೆ.

ರಾಜ್ಯದ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಪ್ರತೀ ತಿಂಗಳು ಕಡ್ಡಾಯವಾಗಿ ೩೦ ರಷ್ಟು ಹೆರಿಗೆ ಮಾಡಿಸಲೇಬೇಕೆಂಬ ಇಲಾಖೆಯ ಆದೇಶವಿದ್ದು, ಕುಶಾಲನಗರದಲ್ಲಿ ಇಷ್ಟು ಪ್ರಮಾಣದಲ್ಲಿ ಹೆರಿಗೆ ನಡೆಯದಿರುವುದರಿಂದ ಈ ಬದಲಾವಣೆಯುಂಟಾಗಿದೆ. “ಶಕ್ತಿ” ಈ ಕುರಿತಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸತೀಶ್‌ಕುಮಾರ್ ಅವರಿಂದ ಪ್ರತಿಕ್ರಿಯೆ ಬಯಸಿದಾಗ ಅವರು ಹೀಗೆ ತಿಳಿಸಿದರು “ರಾಜ್ಯದ ಅನೇಕ ತಾಲೂಕು ಮಟ್ಟದ ಆರೋಗ್ಯ ಕೇಂದ್ರಗಳಲ್ಲಿ ಸ್ತಿçà ರೋಗ ತಜ್ಞರೇ ಇಲ್ಲ. ಆದರೆ, ಅಲ್ಲಿ ಹೆರಿಗೆ ಸಂಖ್ಯೆಗಳು ಅಧಿಕವಾಗಿವೆ. ಹೀಗಾಗಿ ಅಂತಹ ಕೇಂದ್ರಗಳಿಗೆ ತಜ್ಞ ವೈದ್ಯರುಗಳನ್ನು ನೇಮಿಸುವ ಅಗತ್ಯವಿರುವುದರಿಂದ ಸರಕಾರ ಈ ಕ್ರಮ ಕೈಗೊಂಡಿದೆ. ಕಡಿಮೆ ಹೆರಿಗೆಯಾಗುತ್ತಿರುವ ಸಮುದಾಯ ಕೇಂದ್ರಗಳಲ್ಲಿರುವ ಸ್ತಿçà ರೋಗ ತಜ್ಞರನ್ನು ಅಧಿಕ ಹೆರಿಗೆÀಯಾಗುತ್ತಿರುವ ತಾಲೂಕು ಕೇಂದ್ರಗಳಿಗೆ ‘ಕೌನ್ಸಿಲಿಂಗ್À’ ಮೂಲಕ ನೇಮಕ ಮಾಡಿ ಕಳುಹಿಸ ಲಾಗುತ್ತದೆ. ಇದೀಗ ಕುಶಾಲನಗರ ಕೇಂದ್ರದಲ್ಲಿ ಎಂ.ಬಿ.ಬಿ.ಎಸ್ ವೈದ್ಯರುಗಳನ್ನೇ ಹೆರಿಗೆ ಪ್ರಕ್ರಿಯೆ ನಡೆಸಲು ಸೂಚಿಸಲಾಗುತ್ತದೆ”

ಆದರೆ “ಶಕ್ತಿ”ಗೆ ತಿಳಿದುಬಂದAತೆ ಅರವಳಿಕೆ ತಜ್ಞರು ಇಲ್ಲದ ಕಾರಣ ಹೆರಿಗೆಗಳು ತಿಂಗಳಿಗೆ ಕೇವಲ ೧೫ ಹಾಗೂ ಅದಕ್ಕಿಂತ ಕಡಿಮೆ ಸಂಖ್ಯೆ ಯಲ್ಲಿ ಅಗುತ್ತಿರುವುದು ಕುಶಾಲನಗರದ ಮಟ್ಟಿಗೆ ಮೂಲ ಕಾರಣ ಎನ್ನಲಾಗಿದೆ.

ಕುಶಾಲನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ ಹಲವು ವರ್ಷ ಗಳಿಂದ ಕರ್ತವ್ಯದಲ್ಲಿದ್ದ ಇಬ್ಬರು ಪ್ರಸೂತಿ ಹಾಗೂ ಸ್ತಿçà ರೋಗ ವೈದ್ಯರು ಇನ್ನು ಮುಂದೆ ಲಭ್ಯವಿರುವುದಿಲ್ಲ ಎನ್ನುವುದು ಸರಕಾರೀ ಆದೇಶದಿಂದ ಖಚಿತಗೊಂಡಿದೆ. ರಾಜ್ಯ ಮಟ್ಟದಲ್ಲಿಯೇ ಈ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿದುಬಂದಿದೆ. ಕುಶಾನಗರ ಆಸ್ಪತ್ರೆಯಲ್ಲಿ ಹಾಲೀ ಇರುವ ಈ ತಜ್ಞ ವೈದ್ಯರುಗಳು ಡಿ.೨೬ ರಂದು ನಡೆಯುವ ‘ಕೌನ್ಸಿಲಿಂಗ್’ ಪ್ರಕ್ರಿಯೆಯಲ್ಲಿ ಭಾಗವಹಿಸಿ ಬದಲಿ ಸ್ಥಳ ಆಯ್ಕೆ ಮಾಡಿಕೊಳ್ಳುವಂತೆ ಆದೇಶಿಸಲಾಗಿದ್ದು ಈ ವೈದ್ಯರು ವಿಧಿಯಿಲ್ಲದೇ ಕುಶಾಲನಗರ ಆಸ್ಪತ್ರೆಯನ್ನು ತೊರೆಯಲೇಬೇಕಾದ ಸನ್ನಿವೇಶ ಎದುರಾಗಿದೆ.

ಪ್ರಸಕ್ತ ಸೇವೆಯಲ್ಲಿರುವ ಈ ತಜ್ಞ ವೈದ್ಯರುಗಳು ತಾಲೂಕು ಆಸ್ಪತ್ರೆಗಳಿಗೆ ‘ರಿಪೋರ್ಟ್’ ಮಾಡಿಕೊಳ್ಳಲು ಆರೋಗ್ಯ ಇಲಾಖೆ ೫ನೇ ಪುಟಕ್ಕೆ

(ಮೊದಲ ಪುಟದಿಂದ) ಸ್ಪಷ್ಟವಾಗಿ ನಿರ್ದೇಶನ ನೀಡಿದೆ ಎನ್ನಲಾಗಿದೆ.

ಇಲಾಖೆಯ ಈ ಕ್ರಮದಿಂದಾಗಿ ಕುಶಾಲನಗರ ಆಸ್ಪತ್ರೆಯಲ್ಲಿ ಸಾರ್ವಜನಿಕರ ಆರೋಗ್ಯ ಸೇವೆಯನ್ನು ಕ್ರಮಬದ್ಧವಾಗಿ ಮಾಡುವಲ್ಲಿ ವ್ಯತ್ಯಯ ಉಂಟಾಗುವ ಸ್ಥಿತಿ ಎದುರಾಗಲಿದೆ ಎನ್ನುವುದು ಇಲ್ಲಿನ ನಾಗರಿಕರಿಗೆ ಈಗ ಎದುರಾದ ಆತಂಕವಾಗಿದೆ. ಅದರಲ್ಲಿಯೂ ಮಹಿಳೆಯರಿಗೆ ತೀವ್ರ ಸಮಸ್ಯೆಯುಂಟಾಗಬಹುದು ಎಂದು ಅನೇಕರು “ಶಕ್ತಿ”ಯೊಂದಿಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಹೆರಿಗೆ ಸಂಖ್ಯೆ ಕ್ಷೀಣತೆ ಆಧಾರದಲ್ಲಿಯೇ ರಾಜ್ಯದ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಸೇವೆಯನ್ನು ಹಿಂಪಡೆಯುವ ಆದೇಶ ಮಾಡಿರುವುದರಿಂದ ಕೊಡಗು ಜಿಲ್ಲೆಯ ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದÀಲ್ಲಿ ಇರುವ ತಜ್ಞ ವೈದ್ಯರುಗಳು ಬೇರೆಡೆಗೆ ವರ್ಗಾವಣೆಗೊಳ್ಳಲಿದ್ದಾರೆ. ಅಲ್ಲದೆ, ಜಿಲ್ಲೆಯ ಪಾಲಿಬೆಟ್ಟ ಕ್ರೇಂದ್ರದಲ್ಲಿಯೂ ಇದೇ ಸಮಸ್ಯೆಯುಂಟಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಜಿಲ್ಲೆಯಲ್ಲಿ ಹೊಸದಾಗಿ ರಚನೆಯಾದ ತಾಲೂಕು ಕೇಂದ್ರಗಳಲ್ಲಿ ಒಂದಾಗಿರುವ ಕುಶಾಲನಗರ ಆರೋಗ್ಯ ಕೇಂದ್ರಕ್ಕೆ ಸುತ್ತಲಿನ ಹತ್ತಾರು ಹಳ್ಳಿಗಳ ನೂರಾರು ಬಡ ರೋಗಿಗಳು ಹಾಗೂ ಹಾಸನ ಮತ್ತು ಮೈಸೂರು ಜಿಲ್ಲೆಯ ಗಡಿ ಗ್ರಾಮಗಳ ರೋಗಿಗಳು ಧಾವಿಸುತ್ತಿದ್ದಾರೆ.

ಕುಶಾಲನಗರದಲ್ಲಿ ಬಡ ರೋಗಿಗಳಿಗೆ ಸರಿಯಾದ ಆರೋಗ್ಯ ಸೇವೆ ಪಡೆಯಲು ಗುಡ್ಡಗಾಡು ಪ್ರದೇಶವಾದ ಜಿಲ್ಲಾ ಕೇಂದ್ರ ಮಡಿಕೇರಿ ೩೦ ಕಿ.ಮೀ., ಸೋಮವಾರಪೇಟೆ ತಾಲೂಕು ಆರೋಗ್ಯ ಕೇಂದ್ರ ೩೦ ಕಿ.ಮೀ. ಅಂತರದಲ್ಲಿದ್ದು ಅಲ್ಲಿಗೆ ತೆರಳಲು ೧ ಗಂಟೆ ಬೇಕಾಗುತ್ತದೆ.

ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರವು ರಾಷ್ಟಿçÃಯ ಹೆದ್ದಾರಿಯಲ್ಲಿದ್ದು ಹೆರಿಗೆ ಮಾತ್ರವಲ್ಲದೇ ಸ್ತಿçà ಆರೋಗ್ಯ ಸಮಸ್ಯೆಗಳಿಗೆ ಈಗಿರುವ ತಜ್ಞ ವೈದ್ಯರುಗಳ ಸೇವೆ ಅತ್ಯಗತ್ಯ. ಸದ್ರಿ ಕೇಂದ್ರದಲ್ಲಿ ಹೆಚ್ಚು ಹೊರ ರೋಗಿ, ಒಳ ರೋಗಿಗಳ ಸಂಖ್ಯೆ ಹಾಗೂ ಆಯುಷ್‌ಮಾನ್ ಯೋಜನೆಯ ಪ್ರಕರಣಗಳು ದಾಖಲಾಗುತ್ತಿವೆ.

ಇಂತಹ ಪರಿಸ್ಥಿತಿ ಇರುವಾಗ ಹೆಚ್ಚುವರಿ ಹುದ್ದೆಗಳನ್ನು ನೀಡುವ ಬದಲು ಹೆರಿಗೆ ಪ್ರಮಾಣ ನಿಗದಿತ ಗುರಿಗೆ ಅನುಗುಣವಾಗಿ ಆಗುತ್ತಿಲ್ಲ ಎಂಬ ಕಾರಣ ನೀಡಿ ತಜ್ಞ ವೈದ್ಯರುಗಳನ್ನು ಬೇರೆಡೆ ಕಳುಹಿಸುವುದು ಎಷ್ಟು ಸರಿ? ಎನ್ನುವುದು ನಾಗರಿಕರ ಪ್ರಸಕ್ತ ಪ್ರಶ್ನೆಯಾಗಿದೆ. ಈ ಬಗ್ಗೆ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರು ಗಮನ ಹರಿಸುವಂತೆ ನಾಗರಿಕರು ಮನವಿ ಮಾಡಿದ್ದಾರೆ.