ಮಡಿಕೇರಿ, ಡಿ. ೧೭: ಬಳ್ಳಾರಿ ಜಿಲ್ಲೆಯಲ್ಲಿ ನಡೆದ ಪದವಿಪೂರ್ವ ಕಾಲೇಜಿನ ಬಾಲಕಿಯರ ರಾಜ್ಯಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಮೈಸೂರಿನ ವಿರುದ್ಧ ಮಡಿಕೇರಿಯ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ೧-೦ ಗೋಲುಗಳ ಅಂತರದಲ್ಲಿ ವಿಜೇತರಾದರು. ತಂಡದ ನಾಯಕಿ ದೀಪಿಕಾ ಆರ್. ೧ ಗೋಲನ್ನು ಬಾರಿಸುವುದರ ಮೂಲಕ ಜಯಭೇರಿಯನ್ನು ಗಳಿಸಿದರು. ತಂಡದ ವ್ಯವಸ್ಥಾಪಕರಾಗಿ ಅರ್ಥಶಾಸ್ತç ಉಪನ್ಯಾಸಕಿ ಕವಿತಾ ಹೆಚ್.ಎ. ಕಾರ್ಯನಿರ್ವಹಿಸಿದರು.
ತಂಡದಲ್ಲಿ ನಾಯಕಿ ದೀಪಿಕಾ ಆರ್., ಉಪನಾಯಕಿ ವಿದ್ಯಾಶ್ರೀ ಟಿ.ಎಸ್., ಗೋಲ್ ಕೀಪರ್ ತ್ವಿಷಾ ದೇಚಮ್ಮ, ಲಿಪಿಶಿಕಾ ಕಾಳಪ್ಪ, ದೇಚಕ್ಕ ಎಸ್.ಕೆ., ಪೂವಮ್ಮ ಎ.ಕೆ., ಪೂರ್ವಿ ಪೂವಮ್ಮ ಕೆ.ಎ., ನೆಹಾ ಮುಟಗಾರ್ ಎಸ್., ರಾಮವತ್ ವರ್ಷ, ಮರಿಯಾ ಆಂಜೆಲಿನಾ, ಪ್ರೀತಿಕಾ ವಿ.ಬಿ., ಪೂಜಾರಿ ಮದುರಿಮಾ ಭಾಯಿ, ಪ್ರಿನ್ಸಿಯಾ ಅಗ್ನೇಶ್, ಗಗನ ಎಂ.ಎಸ್., ಕುಪ್ಪ ತುಳಸಿ, ಮನಸ್ವಿ ಬಿ.ಯು., ಚೇಂದ್ರಿಮಾಡ ನಿಯತಾ ಸೋಮಣ್ಣ, ನತಾಲಿ ನೀಲಮ್ಮ, ಪಂಚಮಿ ಸಿ.ಎ. ಭಾಗವಹಿಸಿ ರಾಷ್ಟçಮಟ್ಟಕ್ಕೆ ಆಯ್ಕೆಯಾಗಿದ್ದಾರೆ.